ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸರ್ಕಾರ ಗ್ರಾಮೀಣ ಭಾಗದಲ್ಲಿನ ಗ್ರಾಮಸ್ಥರಿಗೆ ಉಚಿತವಾಗಿ ಕಸದ ಬುಟ್ಟಿಗಳನ್ನು ಮನೆ ಮನೆಗೂ ವಿತರಣೆ ಮಾಡಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪ್ರತಿಯೊಂದು ಮನೆಗೂ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತಿದ್ದು ಗ್ರಾಮಸ್ಥರು ಇದರ ಸದ್ಬಳಿಕೆ ಮಾಡಿಕೊಂಡು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಗ್ರಾಮಗಳಿಗೆ ಆಗಮಿಸುವ ಸ್ವಚ್ಛ ವಾಹಿನಿ ವಾಹನಕ್ಕೆ ನೀಡುವಂತೆ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ ವೈ ವಿ ವಿಧ್ಯಾರಾಣಿ ತಿಳಿಸಿದರು.
ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೇತಗಾÀನಹಳ್ಳಿ ಗ್ರಾಮದಲ್ಲಿ ಸ್ವಚ್ಛ ವಾಹಿನಿ ವಾಹನದ ಚಾಲನೆ ಮತ್ತು ಕಸದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದ ವಿಧ್ಯಾರಾಣಿ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಸ್ವಚ್ಛತೆಗೆ ಹೆಚ್ಚು ಪಾಧ್ಯಾನ್ಯತೆ ನೀಡುವ ಹಿತದೃಷ್ಠಿಯಿಂದ ಪ್ರತಿಯೊಂದು ಕುಟುಂಬಕ್ಕೂ ಕಸ ಶೇಖರಿಸಿ ಕೊಳ್ಳಲು ಬುಟ್ಟಿಗಳನ್ನು ನೀಡುತ್ತಿದ್ದು ಸಾರ್ವಜನಿಕರು ನೈರ್ಮಲ್ಯವನ್ನು ಕಾಪಾಡಿಕೊಂಡು ಈ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡಬೇಕೆಂದರು.
ಗ್ರಾಮಗಳನ್ನು ಸ್ವಚ್ಛ ಗ್ರಾಮವಾಗಿ ಮಾರ್ಪಡಿಸಬೇಕಾದರೆ ಗ್ರಾಮಸ್ಥರ ಸಹಕಾರ ಅಗತ್ಯವಿದ್ದು ಮನೆ ಮುಂಬಾಗದ ಕಾಲುವೆಗಳಲ್ಲಿ ಕಸವನ್ನು ಹಾಕುವುದನ್ನು ನಿಲ್ಲಿಸಬೇಕು ಚರಂಡಿಗಳಲ್ಲಿ ಕಸವನ್ನು ಹಾಕುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಬರುವ ಸಾದ್ಯೆತೆಗಳು ಹೆಚ್ಚು ಇರುವುದರಿಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಮನೆಯಲ್ಲಿನ ತಾಜ್ಯವನ್ನ ಆಟೋ ಟಿಪ್ಪರ್ ವಾಹನಕ್ಕೆ ನೀಡುವ ಮೂಲಕ ಸಹಕರಿಸ ಬೇಕೆಂದರು.
ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಿರಿಯಪ್ಪ ಮಾತನಾಡಿ ಒಂದು ಮನೆ ಸ್ವಚ್ಛವಾದರೆ ಒಂದು ಬಡಾವಣೆ ಸ್ವಚ್ಛವಾದಂತೆ, ಒಂದು ಗ್ರಾಮ ಸ್ವಚ್ಛವಾದಂತೆ ಮಲೇರಿಯ ಮತ್ತು ಡೆಂಗೂ ಕಾಯಿಲೆಗಳಿಂದ ದೂರವಿಡಲು ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು ಆದ್ದರಿಂದ ಕಸವನ್ನ ಹೊರಗಡೆ ಹಾಕದೆ ದಯವಿಟ್ಟು ನಮ್ಮ ಗ್ರಾಮ ಪಂಚಾಯಿತಿ ವಾಹನಕ್ಕೆ ನೀಡಿ ಸ್ವಚ್ಛ ಗ್ರಾಮವನ್ನಾಗಿ ಮಾಡಬೇಕೆಂದು ಕೋರಿದರು.
ಇದೇ ಸಮಯದಲ್ಲಿ ಗ್ರಾಮಸ್ಥರಿಗೆ ಮಾಸ್ಕ್‍ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧಕ್ಷ ವೆಂಕಟರಾಮರೆಡ್ಡಿ ಗ್ರಾಮದ ಹಿರಿಯ ಮುಖಂಡರಾದ ಕೂವಪ್ಪ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ವೀಣಾ ಮಂಜುನಾಥ್ ಮೀಸಗಾನಹಳ್ಳಿ ಎಂ ಟಿ ಮುನಿಯಪ್ಪ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಕೆ ಶ್ರೀನಿವಾಸ ಮೂರ್ತಿ ಮುಖಂಡರಾದ ಚಲ್ದಿಗಾನಹಳ್ಳಿ ನರಸಿಂಹಪ್ಪ, ಸುರೇಂದ್ರ ರೆಡ್ಡಿ, ಶ್ರೀಧರ್, ಗೋವಿಂದರೆಡ್ಡಿ ಸಿ.ಎಂ ಗ್ರಾಮ ಪಂಚಾಯಿತಿ ಸಿಬ್ಬಂದಿಯಾದ ವೆಂಕಟರವಣ ಜಲಗಾರ ನರಸಿಂಹಮೂರ್ತಿ, ಶಿವಕುಮಾರ್ ಗ್ರಾಮದ ಮುಖಂಡರು ಹಾಜರಿದ್ದರು.