ಧ್ವನಿವರ್ಧಕ ಅಬ್ಬರಕ್ಕೆ ಕಡಿವಾಣ ಹಾಕಿದ ಸರ್ಕಾರ: ಧ್ವನಿವರ್ಧಕ ಬಳಸಲು ಮಾರ್ಗಸೂಚಿ ಬಿಡುಗಡೆ ಅನುಮತಿ ಕಡ್ಡಾಯ

JANANUDI.COM NETWORK


ಬೆಂಗಳೂರು: ಆಜಾನ್ ಮೊಳಗುತ್ತಿದ್ದಕ್ಕೆ, ದೇವಸ್ಥಾನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸುಪ್ರಭಾತ ಮತ್ತು ಹನುಮಾನ್ ಚಾಲೀಸಾ ಧ್ವನಿವರ್ಧಕದಲ್ಲಿ ಮೊಳಗಿಸಿ ಅಜಾನ್ ಮೊಳಗಿನ ಅಬರಕ್ಕೆ ಕಡಿವಾಣ ಹಾಕಲು ಮಾಡಿದ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಧ್ವನಿವರ್ಧಕ ಬಳಸುವವರು ಇನ್ಮುಂದೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಮಾಡಿದೆ.
ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಹಲವು ಮಸೀದಿಗಳಲ್ಲಿ ಧ್ವನಿವರ್ಧಕಗಳಲ್ಲಿ ಆಜಾನ್ ಹೇಳುತ್ತಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಸುಪ್ರಭಾತ ಅಭಿಯಾನಕ್ಕೆ ಮೇ 9ರಂದು ಚಾಲನೆ ನೀಡಿತ್ತು.
ಆಜಾನ್ ಗೆ ಪ್ರತಿಯಾಗಿ ಬ್ರಾಹ್ಮಿ ಮುಹೂರ್ತದಲ್ಲಿ ರಾಜ್ಯದ ವಿವಿಧ ದೇಗುಲಗಳಲ್ಲಿ ಏಕಕಾಲದಲ್ಲಿ ಸುಪ್ರಭಾತ ಮತ್ತು ಹನುಮಾನ್ ಚಾಲೀಸಾ ಆರಂಭಿಸಿತ್ತು. ಆಜಾನ್ ವರ್ಸಸ್ ಸುಪ್ರಭಾತ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಸರ್ಕಾರ, ಇನ್ಮುಂದೆ ಧ್ವನಿವರ್ಧಕ ಬಳಸುವವರು ಅನುಮತಿ ಪಡೆಯುವುದು ಕಡ್ಡಾಯ. ಧ್ವನಿವರ್ಧಕದ ಶಬ್ದ ಒಂದು ಡೆಸಿಬಲ್ ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಧಾರ್ಮಿಕ ಕೇಂದ್ರಗಳು ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಭೆ, ಸಮಾರಂಭಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಧ್ವನಿವರ್ಧಕದ ಶಬ್ದ ಒಂದು ಡೆಸಿಬಲ್ ಮೀರುವಂತಿಲ್ಲ, ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಎಲ್ಲರೂ ನಡೆದುಕೊಳ್ಳಬೇಕು. ಧ್ವನಿವರ್ಧಕ ಬಳಸಲು 15 ದಿನ ಮೊದಲೇ ಅನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಸರ್ಕಾರ ಉಲ್ಲೇಖಿಸಿದೆ.