

ಶ್ರೀನಿವಾಸಪುರ : ಸರ್ಕಾರಿ ಶಾಲೆಕಾಲೇಜುಗಳು ಯಾವ ಖಾಸಗಿ ಶಾಲೆಕಾಲೇಜು ಗಳಿಗೂ ಕಡಿಮೆಯಿಲ್ಲ. ಎಂಬಂತೆ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಕಾಲೇಜುಗಳಲ್ಲಿ ಲಭ್ಯವಾಗುತ್ತಿದೆ ಎಂಬುದಕ್ಕೆ ಫಲಿತಾಂಶಗಳೇ ಸಾಕ್ಷಿಯಾಗಿವೆ.ವಿಶೇಷವಾಗಿ ಸರ್ಕಾರಿ ಶಾಲೆಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ,ಸಂಸ್ಕøತಿಗಳನ್ನು ಕಾಣಬಹುದು ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಲಕ್ಷ್ಮೀನಾರಾಯಣಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶುಕ್ರವಾರ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಉಪನ್ಯಾಸಕಿ ಶಾರದಮ್ಮ, ಬೆಸ್ಕಾಂ ಸಿಬ್ಬಂದಿಗಳಾದ ನಂಜುಂಡೇಶ್ವರ, ಶ್ರೀನಿವಾಸ್, ವೇಣು, ಮಮತಕಾಂತ್ರಾಜ್ ಶೇಠ್ ಇದ್ದರು.