ತಾಲ್ಲೂಕು ಕಛೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ಸರ್ಕಾರವು ಜಾರಿಗೆ ತಂದಿದೆ- ತಾ|ಶರೀನಾತಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ತಾಲ್ಲೂಕು ಕಛೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮವಾಸ್ತವ್ಯ ದಂತಹ ಕಾರ್ಯಕ್ರಮಗಳನ್ನು ಸರ್ಕಾರವು ಜಾರಿಗೆ ತಂದಿದ್ದು ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ತಹಶೀಲ್ದಾರ್ ಶರೀನಾತಾಜ್ ಹೇಳಿದರು.
ತಾಲ್ಲೂಕಿನ ನೆಲವಂಕಿ ಹೋಬಳಿ ವ್ಯಾಪ್ತಿಯ ಜಿಂಕಲವಾರಿಪಲ್ಲಿ ಗ್ರಾಮದ ಪ್ರಾಥಮಿಕ ಶಾಲಾವರಣದಲ್ಲಿ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಶನಿವಾರ ನಡೆದ ಗ್ರಾಮವಾಸ್ತ್ಯ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ಸಾರ್ವಜನಿಕರು ನೀಡುವಂತಹ ಅರ್ಜಿಗಳನ್ನು ಇಲಾಖವಾರು ವಿಂಗಡಿಸಿ ಸ್ಥಳೀಯವಾಗಿ ಸಮಸ್ಯೆಗಳು ಪರಿಹಾರ ಸಿಗುವುದಾದರೆ ಸ್ಥಳದಲ್ಲಿಯೇ ಪರಿಹಾರ ನೀಡುವುದಾಗಿ ಹಾಗು ಕೆಲ ಕಂದಾಯ ಇಲಾಖೆಗೆ ಸಂಬಂದಿಸಿದಂತೆ ಮೂಲದಾಖಾಲೆಗಳನ್ನು ಪರಿಶೀಲಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.ಮೂಲಗೊಲ್ಲಪಲ್ಲಿ ಶಾಲೆಯ ಕಟ್ಟಡ ಹಾಗು ಅಂಗನವಾಡಿ ಕಟ್ಟಡಕ್ಕೆ ಬಂದ ಅರ್ಜಿಯನ್ನು ಪರಿಶೀಲಿ ಇಲಾಖೆ ಮಾಹಿತಿ ನೀಡಿ ಅತಿ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಬೆಸ್ಕಾಂ ಇಲಾಖೆಯು ನೀರು ಬತ್ತಿಹೋದರೂ ಇಲಾಖೆಯು ಟ್ರಾನ್ಸ್‍ಫಾರಂ ಕೊಡುವುದಿಲ್ಲ ವೆಂದು ರೈತರು ಆರೋಪಿಸಿದರು. ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಪಿಂಚಣಿಗೆ ಸಂಬಂದಿಸಿದ ಅರ್ಜಿಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು. ಇಒ ಎಸ್.ಆನಂದ್ ಮಾತನಾಡಿ ಜಲಜೀವನ್ ಯೋಜನೆಯ ಮುಖಾಂತರ ಮುಂದಿನ 2024ರ ಒಳಗೆ ಎಲ್ಲಾ ಮನೆಗಳು ನಳ ಸಂಪರ್ಕ ಕಲ್ಪಿಸಲಾಗುವುದು. ಸಾಮಾನ್ಯವಾಗಿ ಎಲ್ಲಾ ಕುಂಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಬಾಕಿ ಇರುವವರು ನನ್ನ ಗಮನಕ್ಕೆ ತಂದರೆ ಶೌಚಾಲಯ ನಿರ್ಮಿಸಿಕೊಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಅಲ್ಲದೆ ನರೇಗಾ ಯೋಜನೆಯಲ್ಲಿ ಗ್ರಾಮಗಳ ಅಭಿವೃದ್ಧಿಯನ್ನು ಪಡಿಸಿಕೊಳ್ಳಬಹುದು .ಸಾರ್ವಜನಿಕರು ನರೇಗಾ ಯೋಜನೆ ಸದ್ಭಳಕೆ ಮಾಡಿಕೊಂಡು ಗಾಮಗಳ ಅಭಿವೃದ್ಧಿ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಒಟ್ಟು 45 ಅರ್ಜಿಗಳನ್ನು ಸ್ವೀಕರಿಸಿಲಾಯಿತು . ಗ್ರಾ.ಪಂ.ಅಧ್ಯಕ್ಷೆ ಅರುಣವೆಂಕಟ್, ಪಿಡಿಒ ನರೇಂದ್ರಬಾಬು, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಶ್ರೀನಿವಾಸನ್, ಪಿಡಬ್ಲ್ಯೂಡಿ ಅಭಿಯಂತರ ಹುಸೇನ್‍ಸಾಬ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಶೀಗಹಳ್ಳಿ ನಾರಾಯಣಸ್ವಾಮಿ, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ ಇಲಾಖೆ ಕಿರಿಯ ಅಭಿಯಂತರ ಕೃಷ್ಣಪ್ಪ , ಆಹಾರ ಮತ್ತು ನಾಗರೀಕರ ಇಲಾಖೆ ಅಬೀಬ್‍ಪಾಷ, ಎಸಿಡಿಪಿಒ ನವೀನ್, ಉಪ ಅರಣ್ಯ ಅಧಿಕಾರಿ ಶ್ರೀನಾಥ್, ಗ್ರಾ.ಪಂ.ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯ ನಾರಾಯಣಸ್ವಾಮಿ, ಕೃಷಿ ಇಲಾಖೆಯ ಹೋಬಳಿ ಅಧಿಕಾರಿ ಸುದರ್ಶನ್, ತೋಟಗಾರಿಕೆ ಇಲಾಖೆಯ ಹೋಬಳಿ ಅಧಿಕಾರಿ ಎಂ.ಎಸ್.ರಾಜೇಶ್, ಕಂದಾಯ ಇಲಾಖೆಯ ಉಪತಹಶೀಲ್ದಾರ್ ಕಿರಣ್, ಯಲ್ದೂರು ಹರಿಪ್ರಸಾದ್, ಎಸ್‍ಐ ಜಯಾನಂದ, ಆರ್‍ಐಗಳಾದ ಬಿ.ವಿ.ಮುನಿರೆಡ್ಡಿ, ವಿ.ಅಂಬರೀಶ್, ಗುರುರಾಜರಾವ್, ವಿನೋದ್‍ಕುಮಾರ್, ಜನಾರ್ಧನ್, ವಿಎ ಗಳಾದ ಮೇಘನಾಯಕ್, ರಂಗಣ್ಣ ಇತರರು ಇದ್ದರು.
ಪೋಟು 2: ಜಿಂಕಲವಾರಿಪಲ್ಲಿ ಗ್ರಾಮದ ಪ್ರಾಥಮಿಕ ಶಾಲಾವರಣದಲ್ಲಿ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ನಡೆದ ಗ್ರಾಮವಾಸ್ತ್ಯ ಕಾರ್ಯಕ್ರಮವನ್ನು ಶರೀನಾತಾಜ್, ಎಸ್.ಆನಂದ್, ಅರುಣವೆಂಕಟ್ ಉದ್ಗಾಟಿಸಿದರು.