![](https://jananudi.com/wp-content/uploads/2022/10/1-1-shabbir-6.jpg)
![](https://jananudi.com/wp-content/uploads/2022/10/YAN.jpg)
ಶ್ರೀನಿವಾಸಪುರ: ಪಿಯುಸಿ ತರಗತಿಯಲ್ಲಿ ಇಬ್ಬರು ಜೊತೆಯಲ್ಲೇ ವಿದ್ಯಾಬ್ಯಾಸ ಪೂರ್ಣ ಗೊಳಿಸಿ ನಂತರ ಉನ್ನತ ವಿದ್ಯಾಬ್ಯಾಸ ಮುಗಿಸಿ ಇಂಗ್ಲೇಂಡ್ ನಲ್ಲಿ ಗ್ಯಾಸ್ಟೋ ಸರ್ಜನ್ ಆಗಿ ಸೇವೆ ಸಲ್ಲಿಸಿ ಸ್ವಂತ ಮನೆಗೆ ಆಗಮಿಸಿದ್ದ ವೇಳೆಯಲ್ಲಿ ವಿದಾನಪರಿಷತ್ ಸದಸ್ಯ ಹಾಗು ಸರ್ಕಾರದ ಮುಖ್ಯ ಸಚೇತಕ ಡಾ|| ವೈ.ಎ ನಾರಾಯಣಸ್ವಾಮಿ ತನ್ನ ಸ್ನೇಹಿತ ಡಾ|| ವೈ.ಕೆ ವಿಶ್ವನಾಥ್ ನಿವಾಸಕ್ಕೆ ಬೇಟಿನೀಡಿ ಅಭಿನಂದಿಸಿ ಶುಭ ಕೋರಿದ್ದಾರೆ.
ಪಟ್ಟಣದ ಎಂ.ಜಿ ರಸ್ತೆಯ ವೈ.ಎಸ್ ಕೃಷ್ಣಯ್ಯ ಶಟ್ಟಿ ಅವರ ನಿವಾಸಕ್ಕೆ ಡಾ|| ವೈ.ಎ ನಾರಾಯಣಸ್ವಾಮಿ ಬೇಟಿನೀಡಿ ಕೃಷ್ಣಯ್ಯ ಶಟ್ಟಿರವರ ಮಗ ಹಾಗು ತನ್ನ ಹಳೇ ವಿದ್ಯಾರ್ಥಿ ದಿಸೆಯ ಸ್ನೇಹಿತ ಡಾ|| ವೈ.ಕೆ ವಿಶ್ವನಾಥ್‍ರನ್ನು ಬೇಟಿಮಾಡಿ ಕುಷಲೋಪರಿ ವಿಚಾರಿಸಿ ಇಂಗ್ಲೇಂಡ್ ನಲ್ಲಿ ಗ್ಯಾಸ್ಟೋ ಸರ್ಜನ್ ಮತ್ತು ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ತಾನು ಹುಟ್ಟಿ ಬೆಳೆದ ಮಾವಿನ ನಗರದ ತಮ್ಮ ನಿವಾಸಕ್ಕೆ ಮರಳಿ ಬಂದ ವಿಷಯವನ್ನು ತಿಳಿದು ಬೇಟಿನೀಡಿ ಸಂತಸವನ್ನು ವ್ಯಕ್ತಪಡಿಸಿ ತಮ್ಮ ಆರೋಗ್ಯ ಸೇವೆ ಜನತೆಗಾಗಿ ಸದಾಮುಂದುವರೆಯಲಿ ನಾನೂ ಕೂಡಾ ಶಿಕ್ಷಕರ ಆಶೀರ್ವಾದದಿಂದ ಎಂ.ಎಲ್.ಸಿಆಗಿ, ಜನಸೇವಕನಾಗಿ ರಾಜಕಾರಣದಲ್ಲಿ ಸ್ಥಿರವಾಗಿದ್ದೇನೆ ಈ ನಮ್ಮ ಸ್ನೇಹ ಸದಾ ಮುಂದುವರಿದು ಬಗವಂತ ಆಯಸ್ಸು ಆರೋಗ್ಯ ನೀಡಲಿ ಎಂದು ಶುಭ ಕೋರಿ ಡಾ|| ವೈ.ಎ ನಾರಾಯಣಸ್ವಾಮಿ ವೈ.ಎಸ್ ಕೃಷ್ಣಯ್ಯ ಶಟ್ಟಿ ಇವರ ಪುತ್ರ ವೈದ್ಯರನ್ನು ಗೌರವಿಸಲಾಯಿತು.
ಈ ವೇಳೆಯಲ್ಲಿ ವೈ.ಎಸ್ ಕೃಷ್ಣಯ್ಯ ಶೆಟ್ಟಿ, ಬದ್ರಿನಾಥ್, ಸರ್ಕಾರಿ ನೌಕರರ ಸಂಘದ ನಿರ್ದೆಶಕ ಮಂಜುನಾಥ್, ಉಪನ್ಯಾಸಕ ಸೀತರೆಡ್ಡಿ ಮತ್ತಿತರರು ಹಾಜರಿದ್ದರು.