ಶ್ರೀನಿವಾಸಪುರ:ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿವಿಗೆ ಸರ್ಕಾರ ಹಾಗೂ ಸಾರ್ವಜನಿಕರು ವಿಶೇಷ ಗಮನ ನೀಡಬೇಕು ಎಂದು ಅವಗಾನಹಳ್ಳಿ ಕರಿಬೆಟ್ಟ ತಾತಯ್ಯ ಕನ್ನಡ ಕಲಾವಿದರ ಟ್ರಸ್ಟ್ ಅಧ್ಯಕ್ಷ ಎ.ಎ.ವೆಂಕಟೇಶ್ ಹೇಳಿದರು.
ತಾಲ್ಲೂಕಿನ ಅವಗಾನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸ್ಥಳೀಯ ಕರಿಬೆಟ್ಟ ತಾತಯ್ಯ ಕನ್ನಡ ಕಲಾವಿದರ ಟ್ರಸ್ಟ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಿವಿ, ಸಿನಿಮಾ ಹಾಗೂ ಮೊಬೈಲ್ ಪ್ರಭಾವದಿಂದ ಗ್ರಾಮೀಣ ಕಲೆಗಳು ಅವನತಿಯ ಹಾದಿ ಹಿಡಿದಿವೆ. ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವ ಸಮುದಾಯ ಜಾನಪದ ಸಂಸ್ಕøತಿಗೆ ಬೆನ್ನುತೋರಿಸಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಕೋಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೆಡ್ಡಮ್ಮ ಶ್ರೀನಿವಾಸ್ ಮಾತನಾಡಿ, ಕನ್ನಡ ಸಂಸ್ಕøತಿ ಇಲಾಖೆ ಗ್ರಾಮೀಣ ಸೊಗಡು ರಕ್ಷಣೆಗೆ ಪೂರಕವಾದ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಸಂತೋಷದ ಸಂಗತಿಯಾಗಿದೆ. ತಾಲ್ಲೂಕಿನಲ್ಲಿ ಅವಗಾನಹಳ್ಳಿ ಒಂದು ಸಾಂಸ್ಕøತಿಕ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯ ಜಾನಪದ ಕಲಾವಿದರಿದ್ದಾರೆ. ಗ್ರಾಮಸ್ಥರು ಕಲಾ ಪೋಷಕರಾಗಿ ಗಮನ ಸೆಳೆದಿದ್ದಾರೆ ಎಂದು ಹೇಳಿದರು.
ಜಾನಪದ ಕಲಾವಿದರಾದ ಜಿ.ಮುನಿರೆಡ್ಡಿ, ಗುರು ಹಾಗೂ ರಾಮಲಕ್ಷ್ಮಮ್ಮ ತಂಡದ ವತಿಯಿಂದ ಜಾನಪದ ಗೀತೆಗಳ ಗಾಯನ, ತತ್ವಪದಗಳ ಗಾಯನ ಹಾಗೂ ಬುರ್ರಕಥಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುನಿಯಮ್ಮ, ವೆಂಕಟರವಣ, ಲಕ್ಷ್ಮಮ್ಮ, ಮುನಿವೆಂಕಟಮ್ಮ, ಶ್ರೀನಿವಾಸಪ್ಪ ಇದ್ದರು.