ಗೌನಿಪಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್‍ನ ಶೇಷಾದ್ರಿ ಅಧ್ಯಕ್ಷರಾಗಿ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 2 : ಗೌನಿಪಲ್ಲಿ ಗ್ರಾ.ಪಂ ಚುನಾವಣೆಗೆ ಸಂಬಂದಿಸಿದಂತೆ ಗುರುವಾರ ಅಧ್ಯಕ್ಷ ಗಾದೆಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಜೆಡಿಎಸ್‍ನ ಶೇಷಾದ್ರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿಗೆ ಸಂಬಂದಿಸಿದಂತೆ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್ ಪರ 14 ಸದಸ್ಯರು, 9 ಕಾಂಗ್ರೆಸ್ ಪರ ಸದಸ್ಯರು ಇದ್ದು, ಅದರಲ್ಲಿ ಜೆಡಿಎಸ್ ಪರ ಶೇಷಾದ್ರಿ, ಕಾಂಗ್ರೆಸ್ ಪರ ಕೆ.ಎಂ ಮುನಿರಾಜು ನಾಮಪತ್ರ ಸಲ್ಲಿಸಿದ್ದರು. ಶೇಷಾದ್ರಿ 14 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆಂದು ಚುನಾವಣಾ ಅಧಿಕಾರಿ ಶೀಗಪಲ್ಲಿ ನಾರಾಯಣಸ್ವಾಮಿ ತಿಳಿಸಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ನೂತನ ಅಧ್ಯಕ್ಷರಿಗೆ ಶುಭಾಶಯಗಳನ್ನು ಸಲ್ಲಿಸಿ ಮಾತನಾಡಿ ರಾಜ್ಯದಲ್ಲಿ ಮೊತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಆಡಳಿತಕ್ಕೆ ತರಲು ಪ್ರತಿಯೊಬ್ಬರು ಹಗಲಿರಲು ಶ್ರಮಿಸಿ ಪ್ರತಿಯೊಂದು ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವಂತೆ ಕರೆ ನೀಡಿದರು.

ಈ ಗ್ರಾಮಪಂಚಾಯಿತಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಮನ್ನಣೆಯನ್ನು ಪಡೆದು ತಾಲೂಕಿನಲ್ಲಿ,ಜಿಲ್ಲೆಯಲ್ಲಿ ಒಂದು ಮಾದರಿ ಗ್ರಾಮಪಂಚಾಯಿತಿಯನ್ನು ನಿರ್ಮಿಸುವಂತೆ ನೂತನ ಅಧ್ಯಕ್ಷರಿಗೆ ಸೂಚಿಸಿದರು.

ಜಿ.ಪಂ.ಮಾಜಿ ಅಧ್ಯಕ್ಷರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ಕೆ.ನಾಗರಾಜ್ , ಪಿಡಿಒ ಗೌಸ್‍ಸಾಬ್, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಎಂ.ರಾಮಮೋಹನ, ಕೆ.ರಾಜೇಂದ್ರಪ್ರಸಾದ್,ಬುರುಜ ಕೃಷ್ಣಾರೆಡ್ಡಿ, ಎಂ.ಎಸ್.ಶಂಕರಪ್ಪ, ಅಬ್ಬು, ವಿ.ಶ್ರೀನಿವಾಸ್, ಶಾಕೀರ್, ಗ್ರಾ.ಪಂ ಸದಸ್ಯರಾದ ಬಕ್ಷುಸಾಬ್, ವೆಂಕಟಶಿವಾರೆಡ್ಡಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಅರುಣರವಿಕುಮಾರ್ ಇತರರಿದ್ದರು.

ರಿ