ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಮಾನ್ಯ ಗೋಪಾಲ್ ಭಂಡಾರಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಬೆಲ್ಮನ್ ಗ್ರಾಮೀಣ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಡೆಯಿತು. ಸುಮಾರು 20ಕ್ಕೂ ಮೇಲ್ಪಟ್ಟ ಕಾರ್ಯಕರ್ತರು ಮತ್ತು ಹಿತೈಷಿಗಳು ಹಾಜರಿದ್ದರು. ಎಲ್ಲರೂ ಗೋಪಾಲ್ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ನಮನ ಸಲ್ಲಿಸಿದರು. ಅನಿತಾ ಡಿಸೋಜ ಸ್ವಾಗತ ಕೋರಿದರು. ಅಧ್ಯಕ್ಷರು ಫ್ಲೋರಾ ಮೆಂಡೋನ್ಸಾ ನುಡಿ ನಮನ ಸಲ್ಲಿಸಿದರು. ಜಗಧೀಶ್ ಕುಡ್ವ ಧನ್ಯವಾದಗಳನ್ನು ಸಲ್ಲಿಸಿದರು.