ಕೋಲಾರ, ನ.10: ಯುವ ಜನತೆಗೆ ನಶೆ ಏರುವ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಭವಿಷ್ಯದ ಜೊತೆ ಚೆಲ್ಲಾಟ ಆಡುವ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸ್ ದಾಖಲಿಸಿ ನಾಪತ್ತೆ ಆಗಿರುವ ಡ್ರಗ್ಸ್ ನಿಯಂತ್ರಣಾಧಿಕಾರಿಗಳನ್ನು ಹುಡುಕಿ ಕೊಡಬೇಕಬೇಕೆಂದು ರೈತ ಸಂಘದಿಂದ ಮಾದಕ ವಸ್ತು ನಿಯಂತ್ರಣಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
9 ತಿಂಗಳು ಹೊಟ್ಟೆಯಲ್ಲಿ ಜೋಪಾನ ಮಾಡಿ ನೋವು ತಡೆದುಕೊಂಡು ಜನ್ಮ ಕೊಟ್ಟ ತಾಯಿ ತನ್ನ ಮಗು ಸಮಾಜಕ್ಕೆ ಉತ್ತಮ ಪ್ರಜೆ ಆಗಲಿ ಎಂಬ ಆಸೆ ಹೊತ್ತಿರುವ ಪೋಷಕರ ಆಸೆಗೆ ತಣ್ಣೀರು ಎರೆಸಿ ಸಮಾಜಕ್ಕೆ ಘಾತಕರಾಗುತ್ತಿರು ಆದಿಹರಿಯದ ಯುವ ಪ್ರತಿಭೆಗಳ ಭವಿಷ್ಯವನ್ನು ನಾಶ ಮಾಡುತ್ತಿರುವ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ದ ಗೂಂಡಾ ಕಾಯ್ದೆ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಆರೋಗ್ಯವೇ ಭಾಗ್ಯ ಎಂದು ಆನಾರೋಗ್ಯವೇ ಭಾಗ್ಯವಾಗಿದೆ ಈಗಾಗಲೆ ಆಧುನಿಕತೆ ಮುಂದುವರೆದಂತೆ ಪ್ರತಿಯೊಂದಕ್ಕೂ ಮಾತ್ರೆಯಿಲ್ಲದೆ ಮಾನವನ ಬದುಕಿಲ್ಲ ಅಷ್ಟರ ಮಟ್ಟಿಗೆ ಮನುಷ್ಯನ ಜೀವನ ಮಾತ್ರೆಗಳ ಲೋಕವಾಗಿದೆ. ಮತ್ತೊಂದೆಡೆ ಅಡ್ಡದಾರಿಯಲ್ಲಿ ಹಣ ಮಾಡಿ ಶ್ರೀಮಂತರಾಗುವ ಕೆಲವು ಮೆಡಿಕಲ್ ಸ್ಟೋರ್ ಮಾಲೀಕರ ಕಾನೂನು ಬಾಹಿರ ನಶೆ ಬರುವ ಮಾತ್ರೆ ಇಂಜೆಕ್ಷನ್ ಗಳನ್ನು ಆಕ್ರಮವಾಗಿ ದಾಸ್ತಾನು ಮಾಡಿಕೊಂಡು ಬದುಕಿ ಬಾಳಿ ಭವಿಷ್ಯ ರೂಪಿಸಿಕೊಳ್ಳಬೇಕಾದ ಶಾಲಾ ಕಾಲೇಜು ಮಕ್ಕಳಿಗೆ ಮಾರಾಟ ಮಾಡುವ ಮುಖಾಂತರ ಅವರ ಭವಿಷ್ಯವನ್ನು ಕಸಿದು ಸಮಾಜದಲ್ಲಿ ಘಾತಕ ,ರೌಡಿಗಳಾಗುವ ಮಟ್ಟಕ್ಕೆ ಹಾಳು ಮಾಡುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಾಪತ್ತೆ ಆಗಿರುವುದು ದುರಾದೃಷ್ಠಕರ ಎಂದು ವಿಷಾದ ವ್ಯಕ್ತಪಡಿಸಿದರು.
ಮೆಡಿಕಲ್ ಸ್ಟೋರ್ ಪ್ರಾರಂಭ ಮಾಡಬೇಕಾದರೆ ಕಡ್ಡಾಯವಾಗಿ ಅದಕ್ಕೆ ಸಂಬಂಧಪಟ್ಟಂತೆ ಬಿ.ಪಾಮ್ ಶಿಕ್ಷಣವನ್ನು ಪಡೆದು ಆನಂತರ ಮೆಡಿಕಲ್ ಸ್ಟೋರ್ ತೆರೆದು ವೈದ್ಯರ ಸಲಹೆ ಮೇರೆಗೆ ಆ ಕಾಯಿಲೆಗೆ ಸಂಬಂದಪಟ್ಟ ಮಾತ್ರೆಗಳನ್ನು ನೀಡುವ ನಿಯಮವಿದೆ. ಆದರೆ ಕೋಲಾರ ಜಿಲ್ಲಾದ್ಯಂತ ಸಾವಿರಾರು ಮೆಡಿಕಲ್ ಸ್ಟೋರ್ಗಳು ಗಲ್ಲಿಗೊಂದಂತೆ ಯಾರದೋ ಪರವಾನಗೆ ಲೀಸ್ಗೆ ಪಡೆದು ಪಾರ್ಮಸಿ ಗಂದ ಗಾಳಿ ಗೊತ್ತಿಲ್ಲದ ವ್ಯಕ್ತಿಗಳು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಸಿದರು. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಯಾವುದೇ ಮೆಡಿಕಲ್ ಸ್ಟೋರ್ನಲ್ಲಿ ಮಾರಾಟ ಮಾಡುವ ಪ್ರತಿಯೊಂದು ಮಾತ್ರೆ , ಸಿರಪ್ ಗಳ ಮಾಹಿತಿ ಪ್ರತಿ ತಿಂಗಳು ಸಂಬಂದಪಟ್ಟ ಅಧಿಕಾರಿಗಳು ತಪಾಸಣೆ ಮಾಡಿ ಯಾವ ಕಂಪನಿಯಿಂದ ಉತ್ಪಾದನೆ ಆಗುತ್ತದೆ ಅದರ ಅವದಿ ಎಷ್ಟು ದಿನ ಪ್ರತಿಯೊಂದನ್ನು ಪರಿಶೀಲನೆ ಮಾಡುವ ಜೊತೆಗೆ ಕಡ್ಡಾಯವಾಗಿ ನಾಮಪಲಕ ಲಭ್ಯವಿರುವ ಔಷಧಿಗಳ ಬೆಲೆ ಅಂಗಡಿ ಮುಂದೆ ಅಳವಡಿಸಬೇಕಾದ ನಿಯಮವನ್ನು ಮಾಲೀಕರು ಮರೆತಿರುವ ಜೊತೆಗೆ ಕೆಲವು ಔಷದಿ ಮಳಿಗೆಗಳಲ್ಲಿ ಅವದಿ ಮಿರಿದ ಮಾತ್ರೆಗಳ ದಿನಾಂಕವನ್ನು ಅಳಸಿ ಅವರೇ ಹೊಸ ದಿನಾಂಕವನ್ನು ತಿದ್ದುವ ದಂದೆ ಸಹ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಯುವ ಆದಿ ಹರಿಯದ ಶಾಲಾ ಕಾಲೇಜು ಮಕ್ಕಳಿಗೆ ನಶೆ ಏರುವ ಮಾದಕ ಮಾತ್ರೆ, ಸಿರಂಜ್ಗಳನ್ನು ಮಾರಾಟ ಮಾಡುವ ದೊಡ್ಡ ಮೆಡಿಕಲ್ ಮಾಪೀಯ ದಂದೆ ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿ ನಿರಂತರವಾಗಿ ನಡೆಯುವ ಜೊತೆಗೆ ಹೊರ ರಾಜ್ಯದಿಂದ ಸರಬರಾಜಾಗುವ ಆಪೀಮು, ಗಾಂಜಾ ಮಾತ್ರೆಗಳನ್ನಾಗಿ ಪರಿವರ್ತಿಸಿ ಅಡ್ಡದಾರಿಯಲ್ಲಿ ಹಣ ಮಾಡುವ ದಂದೆಯಲ್ಲಿ ತೊಡಗಿರುವ ಸಂಶಯ ವ್ಯಕ್ತವಾಗುತ್ತಿದೆ. ಅವರಿಗೆ ಹಣ ಬೇಕು ಯುವ ಜನತೆಗೆ ನಶೆ ಬೇಕು ಜನ್ಮ ಕೊಟ್ಟ ತಂದೆ ತಾಯಿಗೆ ಮಕ್ಕಳ ಭವಿಷ್ಯದ ಚಿಂತೆಯಾಗಿ ಸಮಾಜಕ್ಕೆ ಮಾರಕವಾಗುವ ವ್ಯಕ್ತಿಗಳಾಗಿ ಮೆಡಿಕಲ್ ಮಾಪೀಯಾವೇ ಸೃಷ್ಠಿಯಾಗುತ್ತಿದೆ ಎಂದು ಕಿಡಿ ಕಾರಿದರು.
ನಿಮ್ಮ ಮಕ್ಕಳಂತೆ ಬಡವರ ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಮೊದಲು ಅಧಿಕಾರಿಗಳು ಮೆಡಿಕಲ್ ಮಾಪೀಯದಿಂದ ಪಡೆಯುತ್ತಿರುವ ಲಂಚವನ್ನು ತಿರಸ್ಕಾರ ಮಾಡಿ ಮಾನವೀಯತೆಯಿಂದ ಯುವ ಜನತೆಗೆ ನಶೆ ಏರುವ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಭವಿಷ್ಯದ ಜೊತೆ ಚೆಲ್ಲಾಟ ಆಡುವ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸ್ ದಾಖಲಿಸಿ ನಾಪತ್ತೆ ಆಗಿರುವ ಡ್ರಗ್ಸ್ ನಿಯಂತ್ರಣಾಧಿಕಾರಿಗಳನ್ನು ಹುಡುಕಿ ಕೊಡಬೇಕಬೇಕೆಂದು ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾದಕ ನಿಯಂತ್ರಣಾಧಿಕಾರಿಗಳು ನಶೆ ಏರುವ ಔಷಧಿ ಮಾರಾಟ ಮಾಡುವ ಮೆಡಿಕಲ್ ಮಳಿಗೆ ಹಾಗೂ ಅವರಿಗೆ ಸರಬರಾಜು ಮಾಡುವ ದಂದೆ ಕೋರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಜೊತೆಗೆ ಸ್ಥಳಿಯರು ಇಂತº ನಶೆ ಮಾರುವ ಅಂಗಡಿಗಳ ಮಾಹಿತಿ ನೀಡಿದರೆ ಹೆಚ್ಚು ಸಹಕಾರ ಆಗುತ್ತದೆಂದು ಸಲಹೆ ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಮಗಸಂದ್ರ ತಿಮ್ಮಣ್ಣ, ವಿನಿತ್. ಚಂದ್ರಪ್ಪ, ಯಾರಂಘಟ್ಟ ಗೀರೀಶ್, ಅಪ್ಪೋಜಿರಾವ್, ಶೈಲಜ, ರಾಧಮ್ಮ, ನಾಗರತ್ನ, ಮಂಜುಳಾ ಚೌಡಮ್ಮ ಮುಂತಾದವರಿದ್ದರು.