ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಪ್ರಯತ್ನದಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಹಿ ಸುದ್ದಿ

ಕೋಲಾರ : – ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಪ್ರಯತ್ನದಿಂದಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಮುಖ್ಯ ಮಂತ್ರಿಗಳು ನೀಡಿದ ಭರವಸೆಯಂತೆ ಸುಮಾರು ೧೫೦೦ ಪಿಡಿಒಗಳ ಹುದ್ದೆಗಳನ್ನು ಗ್ರೂಪ್ ‘ ಬಿ ‘ ವೃಂದದ ಗ್ರೇಡ್ -೧ ಪಿಡಿಒ ಹುದ್ದೆಗೆ ಮೇಲ್ದರ್ಜೆಗೇರಿಸುವ ಕಡತಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ .

ಚಿತ್ರಶೀರ್ಷಿಕೆ : ರಾಜ್ಯದಲ್ಲಿ ೧೫೦೦ ಪಿಡಿಒಗಳ ಹುದ್ದೆಗಳನ್ನು ಗ್ರೂಪ್ ‘ ಬಿ ‘ ವೃಂದದ ಗ್ರೇಡ್ -೧ ಪಿಡಿಒ ಹುದ್ದೆಗೆ ಮೇಲ್ದರ್ಜೆಗೇರಿಸುವ ಕಡತಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಕುರಿತು ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರೊಂದಿಗೆ ಚರ್ಚಿಸಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ಪದಾಧಿಕಾರಿಗಳ ತಂಡ.

ಈ ಕುರಿತು ಮಾಹಿತಿ ನೀಡಿರುವ ಅವರು , ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದ ಪಿಡಿಒಗಳ ಬೇಡಿಕೆ ಈಡೇರಿಸಲು ನೌಕರರ ಸಂಘದರಾಜ್ಯಾಧ್ಯಕ್ಷರು ಪ್ರಯತ್ನಿಸಿದ್ದು , ಅದರಂತೆ ಇದೀಗ ಅವರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಿಎಂ ಅನುಮೋದನೆ ನೀಡಿದ್ದು , ಪಿಡಿಒಗಳನ್ನು ಗ್ರೂಪ್ ಬಿ ದರ್ಜೆಗೆ ಮೇಲ್ದರ್ಜೆಗೆ ಏರಿಸುವ ಕಡತ ಆರ್ಥಿಕ ಇಲಾಖೆಯ ಮೂಲಕ ಆರ್‌ಡಿಪಿಆರ್ ಇಲಾಖೆಗೆ ೨ ದಿನಗಳಲ್ಲಿ ಕಳುಹಿಸಲಾಗುವುದು ಎಂದು ಆರ್ಥಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ .

ಅದೇ ರೀತಿ ಲೋಕಾಯುಕ್ತಕ್ಕೆ ವಹಿಸಿರುವ ನರೇಗಾ ಯೋಜನೆಯ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದ್ದು , ಈ ಕಡತವು ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದು , ಅನುಮೋದನೆಯ ನಿರೀಕ್ಷೆಯಲ್ಲಿದೆ .

ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥಪಡಿಸಿ , ಪಿಡಿಒಗಳಿಗೆ ಮುಂಬಡ್ತಿ ನೀಡಲು ಈಗಾಗಲೇ ಸರ್ಕಾರದ ಅಡ್ವಕೇಟ್ ಜನರಲ್‌ರವರು ನ್ಯಾಯಾಲಯಕ್ಕೆ ಹಾಜರಾಗಿ ಮನವರಿಕೆ ಮಾಡಿಕೊಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಷಡಕ್ಷರಿ ಅವರು ಆರ್ಥಿಕ ಇಲಾಖೆಯ ಕಾರ್ಯದರ್ಶಿ – ಶ್ರೀ ಪಿ.ಸಿ.ಜಾಫರ್ ಪಿಡಿಒಗಳ ಸಂಘದ ಕಾರ್ಯಾಧ್ಯಕ್ಷರಾದ ರಾಜೇಶ್ , ಶಿವಮೊಗ್ಗ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀರಾಮ ಪದಾಧಿಕಾರಿಗಳಾದ ಯೋಗೇಶ್ ಹಾಗೂ ಶಿವಕುಮಾರ್ ರವರು ಹಾಜರಿದ್ದು , ಈ ಸಿಹಿಸುದ್ದಿ ಪಡೆದುಕೊಂಡಿದ್ದಾರೆ .
ಚಿತ್ರಶೀರ್ಷಿಕೆ : ರಾಜ್ಯದಲ್ಲಿ ೧೫೦೦ ಪಿಡಿಒಗಳ ಹುದ್ದೆಗಳನ್ನು ಗ್ರೂಪ್ ‘ ಬಿ ‘ ವೃಂದದ ಗ್ರೇಡ್ -೧ ಪಿಡಿಒ ಹುದ್ದೆಗೆ ಮೇಲ್ದರ್ಜೆಗೇರಿಸುವ ಕಡತಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಕುರಿತು ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರೊಂದಿಗೆ ಚರ್ಚಿಸಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ಪದಾಧಿಕಾರಿಗಳ ತಂಡ.