ಸಂತ ಮೇರಿಸ್ ಪ.ಪೂ.ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಶುಭ ಸುದ್ದಿ- ಕಾಲೇಜಿನಲ್ಲಿಯೇ  ಅನುಭವಿ ಉಪನ್ಯಾಸಕರುಗಳಿಂದ CET,NEET,JEE  ವಿಶೇಷ ತರಭೇತಿ – ಕಾಲೇಜಿನಲ್ಲಿ ದಾಖಲಾತಿ  ಈಗಾಗಲೇ ಆರಂಭವಾಗಿದೆ

JANANUDI.COM NETWORK

 


“ವಿದ್ಯೆ ವಿನಯೇನ ಶೋಭತೆ”ಕುoದಾಪುರದ ಹೃದಯ ಭಾಗದಲ್ಲಿ ಸೈ0ಟ್ ಮೇರಿಸ್ ಪದವಿ ಪೂರ್ವ ಕಾಲೇಜು ಭವ್ಯ ಕಟ್ಟಡದೊಂದಿಗೆ ಕಂಗೊಳಿಸಿ ಆಸುಪಾಸಿನ, ದೂರದ ಊರಿನ ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯೆಯ ತಾಣವಾಗಿ ಜ್ಞಾನದ ಬೆಳಕಾಗಿ ಶೈಕ್ಷಣಿಕ, ಸಾಂಸ್ಕೃತಿಕ ಪ್ರಗತಿಯನ್ನು ಮಾಡುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸುತ್ತಾ ಪ್ರಸ್ತುತ 20 ವರುಷ  ದಾಟಿದ ಸಂತಸದ ಹೆಮ್ಮೆ ಈ ವಿದ್ಯಾ ಸಂಸ್ಥೆಯಾಗಿದೆ. 
ಸಂಸ್ಥೆಯು ಉತ್ತಮ ಫಲಿತಾಂಶದೊಂದಿಗೆ ಬಡವ ಬಲ್ಲಿದರೆನ್ನದೆ ಎಲ್ಲಾ ಜಾತಿ ಬಾಂಧವರಿಗೆ ಏಕರೂಪದ ಶಿಕ್ಷಣ ನೀಡುತ್ತಾ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ, ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ರಿಯಾಯಿತಿ, ಕಂತಿನ ರೂಪದಲ್ಲಿ ಶುಲ್ಕ ಕಟ್ಟುವಲ್ಲಿ ಅನುಕೂಲತೆ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದಾರಿ ಮಾಡಿ ಕೊಟ್ಟಿದೆ ನಮ್ಮ ಪದವಿ ಪೂರ್ವ ಕಾಲೇಜು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಬೋಧನೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯನ್ನು ಮನಗೊಂಡು ನಮ್ಮ ಸಂಸ್ಥೆಯಲ್ಲಿ ಕಲಿಯುವ ಪ್ರಥಮ ಹಾಗೂ ದ್ವಿತೀಯ ಪಿ ಯು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ JEE, NEET, CET ಅನುಭವಿ ಉಪನ್ಯಾಸಕರುಗಳಿಂದ ಕೈಗೆಟಕುವ ಶುಲ್ಕದಲ್ಲಿ ವಿಶೇಷ ತರಭೇತಿ ನೀಡಲಾಗುವುದು. ಆದಕಾರಣ ತಾವು ನಮ್ಮ ಸಂಸ್ಥೆಯಲ್ಲಿ ಪಿ ಯು ಶಿಕ್ಷಣಕ್ಕೆ ದಾಖಲಾಗಿ ಈ ಸೌಲಭ ಪಡೆಯುವಿರೆಂದು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.ಹೆಚ್ಚಿನ ವಿವರಗಳಿಗೆ ಕಾಲೇಜಿಗೆ ಸಂಪರ್ಕ ಮಾಡಿ.