ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಷ್ಟ ಮರಣದ ಶುಕ್ರವಾರ

JANANUDI.COM NETWORK


ಕುಂದಾಪುರ ಮಾ.:2 ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ಚರ್ಚಿನ ಒಳಗಡೆ ನಡೆಸಲಾಯಿತು ನೆಡೆಸಲಾಯಿತು.
ಸಂಜೆಯ ಹೊತ್ತಿನಲ್ಲಿ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಷ್ಟ ಮರಣದ ರೀತಿಯನ್ನು ನೆಡಸಲಾಯಿತು.
ಇದನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ| ಅಲ್ವಿನ್ ಸಿಕ್ವೇರಾ ನೆಡೆಸಿಕೊಟ್ಟರು. ‘ನಾನೇನು ಗಳಿಸಿಕೊಂಡೆ, ನಾನೇನು ಆಗಿದ್ದೆನೆ, ನನಗೇನು ತಿಳಿದಿದೆ ಈ ಮೂರನ್ನು ನಾವು ಅಪ್ಪಿಕೊಂಡ್ಡಿದ್ದೆವೆ, I ಮೂರು ಸಂಗತಿಗಳಿಂದ ನಾವು ಅಹಂಕಾರಿಗಳಗುತ್ತೇವೆ, ಅಹಂಕಾರಿಗಳಾದರೆ ಎಲ್ಲವನ್ನು ನಾವು ನಾಶ ಮಾಡಿಕೊಳ್ಳುತ್ತೆವೆ. ಯೇಸು ಸ್ವಾಮಿಯಲ್ಲಿ ಇದೆಲ್ಲ ಇದ್ದವು, ಆದರೆ ಆತನು ಇದೆಲ್ಲಾ ಇದ್ದು ನಾನೇನು ಇಲ್ಲಾ ಎಂಬಂತ್ತೆ ನಮಗಾಗಿ ಜೀವಿಸಿದನು, ಆತ ಪಡೆದುಕೊಂಡದ್ದು, ನಮಗೆ ನೀಡಿದ, ನಾನೇನು ಆಗಿದ್ದೆ ದೇವಪುತ್ರನಾದರೂ ನಮಗಾಗಿ ಮಾನವನಾಗಿ ಇಲ್ಲಿ ಬದುಕಿದ, ಎಲ್ಲವನ್ನು ಆತ ತಿಳಿದಿದ್ದ ಆದರೆ ತನ್ನ ಪಿತನ ಯೋಜನೆ ಜ್ಯಾರಿಗೊಳಿಸಿ, ನಮ್ಮನ್ನು ಪರಿವರ್ತಿಸಲು ನಾನೇನು ಆಗಿದ್ದೆ ಎಂದು ಮರೆತು ನಮಗಾಗಿ ತನ್ನ ಜೀವನವನ್ನು ಬಲಿದಾನಾವಾಗಿ ಅರ್ಪಿಸಿದ. ನಮಗೆ ರೊಟ್ಟಿಯ ರೂಪದಲ್ಲಿ ನೀಡಿದ ಪವಿತ್ರ ಪ್ರಸಾದದಲ್ಲಿ ಆತನು ಜೀವಂತವಾಗಿದ್ದನೆ, ಪರವ ುಪ್ರಸಾದದ ಅದ್ಭುತಗಳ ಘಟನೆಗಳನ್ನು ಪರಿಶೀಲಿಸಿದಾಗ ರೊಟ್ಟಿಯಲ್ಲಿ ಯೇಸುವಿನ ಹ್ರದಯದ ಮಾಂಸದ ತುಂಡಿನ ಭಾಗ ಮತ್ತು ದ್ರಾಕ್ಷರಸದಲ್ಲಿ ಯೇಸುವಿನ ರಕ್ತದ ಮಾದರಿ ದೊರಕಿದೆ, ಪರಮ ಪ್ರಸಾದ ಸಂಸ್ಕಾರಕ್ಕೆ ಅಷ್ಟೊಂದು ಶಕ್ತಿಯಿದೆಯೆಂದು’ ಅವರು ಸಂದೇಶ ನೀಡಿದರು.
ಎರಡನೆ ಭಾಗದಲ್ಲಿ ವಿಶ್ವಾಸಿಗಳ ಪ್ರಾರ್ಥನೆ ನೆಡೆದು, ಪವಿತ್ರ ಸಭೆಗಾಗಿ, ಕಥೊಲಿಕ್ ಜಗತ್‍ಗುರು ಪೆÇೀಪರಿಗಾಗಿ, ಬಿಶಪರಿಗಾಗಿ, ಧರ್ಮಗುರುಗಳಿಗಾಗಿ, ವಿಶ್ವಾಸಿಗಳಿಗಾಗಿ, ಅನಾಥ ಬಡಬಗ್ಗರಿಗಾಗಿ, ರೋಗಿಗಳಿಗಾಗಿ, ಹೀಗೆ ಅನೆಕ ರೀತಿಯ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಣೆ ಗೊಂಡವು.
ಮೂರನೇ ಭಾಗದಲ್ಲಿ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆಯಲ್ಲಿ ಯೇಸುವಿನ ಮರಣ ಹೊಂದುವ ವಿಧಿಯನ್ನು ನೆಡಸಿಕೊಟ್ಟರು. ಶಿಲುಭೆಗೆ ನಮಿಸುವ ಕಾರ್ಯ ನೆಡೆಯಿತು. ಕೊನೆಯ ಭಾಗವಾಗಿ ಕ್ರಿಸ್ತ ಪ್ರಸಾದವನ್ನು ಹಂಚಲಾಯಿತು. ಈ ಧಾರ್ಮಿಕ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಲವಾರು ಧರ್ಮಭಗಿನಿಯರು ಪಾಲನ ಮಂಡಳಿಯವರು ಹಾಗೂ ಭಕ್ತಾದಿಗಳು ಪಾಲ್ಗೊಂಡರು.