ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ಬಿಸಿಯೂಟ ತಯಾರಿಸುವ ಅಡಿಗೆ ಸಿಬ್ಬಂದಿ ಸ್ವಚ್ಛತೆ ಕಾಪಾಡಿಕೊಂಡು ತಮ್ಮ ಮನೆಗಳಲ್ಲಿ ತಯಾರು ಮಾಡುವ ಅಡುಗೆಯಂತೆ ಶಾಲೆಗಳಲ್ಲಿ ಸಹ ವಿಶೇಷ ಕಾಳಜಿವಹಿಸಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಶುಚಿ – ರುಚಿಯಾಗಿ ತಯಾರು ಮಾಡಬೇಕೆಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು .
ಪಟ್ಟಣದ ಕನಕಭವನದಲ್ಲಿ 2020-21ನೇ ಸಾಲಿನ ಬಿಸಿಯೂಟ ಅಡುಗೆ ನೌಕರರಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಅಡಿಗೆಯನ್ನು ತಯಾರಿಸುವ ಮುನ್ನಾ ಅಲ್ಲಿನ ಕೊಠಡಿಯನ್ನು ಸ್ವಚ್ಚ ಮಾಡಬೇಕು ನಾವು ತಿನ್ನುವ ಆಹಾರ ರುಚಿ – ಶುಚಿಯಾಗಿದ್ದರೆ ಯಾವುದೇ ರೋಗ ರುಜನಗಳು ಬರುವುದಿಲ್ಲ .
ನಮ್ಮ ಮನೆಗಳಲ್ಲಿ ಎಷ್ಟು ಕಾಳಜಿವಹಿಸಿದ್ದೇವೊ ಅದಕ್ಕಿಂತ ಮಿಗಿಲಾಗಿ ನಿಮ್ಮ ನಿಮ್ಮ ಶಾಲೆಗಳಲ್ಲಿ ವಿಶೇಷ ಕಾಳಜಿ ವಹಿಸಿ ಜೊತೆಗೆ , ಶಾಲೆಗೆ ಬರುವ ಪ್ರತಿಯೊಬ್ಬ ಮಕ್ಕಳು ನಿಮ್ಮ ಮಕ್ಕಳಂತೆ ಭಾವಿಸಿ ಅಡುಗೆಯನ್ನು ತಯಾರು ಮಾಡಿ ಮೊದಲಿಗೆ ನೀವು ರುಚಿ ನೋಡಿ ತದ ನಂತರ ಮಕ್ಕಳಿಗೆ ಬಡಿಸಬೇಕೆಂದರು .
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್ . ಆನಂದ್ ಮಾತನಾಡಿ ಅಡುಗೆ ಮಾಡುವವರು ಸಮವಸ್ತ್ರ ಧರಿಸಿ ಕೊವಿಡ್ ಇರುವುದರಿಂದ ಮಾಸ್ಕನ್ನು ಧರಿಸಿಕೊಂಡು ಸುಭ್ರತೆಗೆ ಹೆಚ್ಚು ಆದ್ಯತೆ ನೀಡಿ ಅಡುಗೆ ತಯಾರು ಮಾಡುವಲ್ಲಿ ವಿಶೇಷ ಕೌಶಲ್ಯ ರೂಡಿಸಿಕೊಂಡು ಮೆನು ಚಾರ್ಟ್ ಪ್ರಕಾರ ಅಡುಗೆಯನ್ನು ಸಿದ್ದಮಾಡಬೇಕು ವಿದ್ಯಾರ್ಥಿಗಳು ಹೆಚ್ಚು ಕಾಲ ಶಾಲೆಯಲ್ಲಿಯೇ ಉಳಿಯುವುದರಿಂದ ಶಿಕ್ಷಕರು ಮತ್ತು ನೀವೇ ಅವರಿಗೆ ಪೋಷಕರಾಗುತ್ತೀರಾ ಈ ಜವಾಬ್ದಾರಿ ನೀವು ಮರಿಯಬಾರದೆಂದು ತಿಳಿಸಿದರು .
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ ಮಾತನಾಡಿ ಬಿಸಿಯೂಟ ತಯಾರು ಮಾಡುವಲ್ಲಿ ಈಗಾಗಲೇ ನಮ್ಮ ನೌಕರರಿಗೆ ಸಮವಸ್ತ್ರ ಮತ್ತು ಎಲ್ಲಾ ಮುಂಜಾಗೃತ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದೇವೆ . ಅಡುಗೆ ತಯಾರು ಮಾಡುವಲ್ಲಿ ಶುಚಿ – ರುಚಿಯಲ್ಲಿ ಯಾವುದೇ ರಾಜಿ ಇಲ್ಲ ತಾಲ್ಲೂಕಿನ ಶಾಲೆಗಳಿಗೆ ಸರ್ಕಾರದ ಆದೇಶದಂತೆ ಮಾಸಿಕ ಆಹಾರ ಪದರ್ಥಗಳು ಬಿಡುಗಡೆ ಆಗುವಂತೆ ಸಮರ್ಪಕವಾಗಿ ನಿಗಧಿತ ಕಾಲಾವದಿಯಲ್ಲಿ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ . ಹಾಗೆಯೇ ಸಿಬ್ಬಂದಿಗೆ ವೇತನವು ವಿಳಂಬವಾಗದಂತೆ ಅನುದಾನ ಬಿಡುಗಡೆ ಯಂತೆ ಕಾಲಮಿತಿಯಲ್ಲಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು .
ಶ್ರೀನಿವಾಸ ಗ್ಯಾಸ್ ಏಜೆನ್ಸಿಯಿಂದ ಅಡುಗೆ ಸಿಬ್ಬಂದಿಗೆ ಗ್ಯಾಸ್ ಸುರಕ್ಷತೆಯ ಬಗ್ಗೆ ಸಂಪೂರ್ಣವಾಗಿ ಮಂಜುನಾಥ್ , ಮುನಿಶಾಮಿಚಾರ್ಯ ತಿಳಿಸಿಕೊಟ್ಟರು . ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ , ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ , ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ , ಆರ್‌ಬಿಎಸ್‌ಕೆ ಚನ್ನಬಸಪ್ಪ , ಡಾ || ವಿಕಾಸ್ , ಗಂಗಮ್ಮ , ರೋಣೂರು ಹೆಚ್‌ಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಆಶೋಕ್ , ಸಿಆರ್‌ಪಿಗಳಾದ ರಾಮಚಂದ್ರ , ವೇಣುಗೋಪಾಲ್ , ಶಿಕ್ಷಕರಾದ ಶ್ರೀನಿವಾಸ್ ಎಸ್‌ಡಿಎ ಅರುಣ್ ಕುಮಾರ್ , ಡೇಟಾ ಇಂಟ್ರಿ ಆಫ್‌ರೇಟರ್ ಮಂಜುನಾಥ್ , ಮನಿರತ್ನಮ್ಮ ಸಿಬ್ಬಂದಿ ಇನ್ನಿತರರು ಹಾಜರಿದ್ದರು .