Report: Fr Anil Ivan Fernandes, CCC | Pics: Stanly Bantwal
ಮಂಗಳೂರು, ಡಿ.10: “ಧರ್ಮಪ್ರಾಂತ್ಯದ ಪಾಲನಾ ಪರಿಷತ್ತುಧರ್ಮಸಭೆಯಲ್ಲಿನ ಸಹಭಾಗಿತ್ವದ ದೃಷ್ಟಿಕೋನದ ಅಭಿವ್ಯಕ್ತಿಯಾಗಿದೆ. ಮಂಗಳೂರು ಧರ್ಮಪ್ರಾಂತ್ಯವು ನಂಬಿಕೆ, ಪರಸ್ಪರ ಸಹಕಾರ, ನಿರಂತರ ಸಂವಾದ ಮತ್ತು ದೇವರ ಚಿತ್ತದ ವಿವೇಚನೆಯ ಮೂಲಭೂತ ತತ್ವಗಳ ಮೇಲೆ ನಿರ್ಮಿಸಲಾದ ಸಮುದಾಯವಾಗಿದೆ. ನಿಮ್ಮ ಸೇವೆ ಮತ್ತು ಒಗ್ಗಟ್ಟಿನ ಮೂಲಕ ನಂಬಿಕೆಗೆ ಸಾಕ್ಷಿಯಾಗಿರುವ ನಿಮ್ಮೆಲ್ಲರನ್ನು ನಾನು ಪ್ರಶಂಸಿಸುತ್ತೇನೆ” ಎಂದು ಗೋವಾ ಮತ್ತು ಡಾಮನಿನ ಕಾರ್ಡಿನಲ್ ಫಿಲಿಪ್ ನೇರಿಫೆರಾವೊ ಹೇಳಿದರು.
ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‍ನಲ್ಲಿ ಶನಿವಾರ, ಡಿಸೆಂಬರ್ 10, 2022 ರಂದು ನಡೆದ ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ (ಡಿಪಿಪಿ) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಮಂಗಳೂರಿನಲ್ಲಿ ಅವರ ಗೌರವಾನ್ವಿತ ಕಾರ್ಡಿನಲ್ ಫಿಲಿಪ್ ನೇರಿ ಆಗಮಿಸಿದ್ದರು. ನೂತನವಾಗಿ ಆಯ್ಕೆಯಾದ ಕಾರ್ಡಿನಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇಂದಿನ ಸಂದರ್ಭದಲ್ಲಿ ಕ್ರೈಸ್ತರ ಒಗ್ಗಟ್ಟಿನ ಕುರಿತು ಮಾತನಾಡಿದ ಕಾರ್ಡಿನಲ್ ಫೆರಾವೊ, “ಸೇವೆಯ ಮೂಲಕ ನಾಯಕತ್ವ, ಮತ್ತು ಸಹಯೋಗ ಮತ್ತು ಸಮಾನತೆಯು ಪಾಲನಾ ಪರಿಷತ್ತನ್ನು ಬಲಪಡಿಸುವ ಪ್ರಮುಖ ಅಂಶಗಳಾಗಿವೆ. ಧರ್ಮಸಭೆಯಲ್ಲಿನ ನಾಯಕತ್ವವು ಏಕತೆ ಮತ್ತು ಭ್ರಾತೃತ್ವದಿಂದ ಕೂಡಿರಬೇಕು, ಇದು ಪೋಪ್ ಫ್ರಾನ್ಸಿಸ್ ಅವರು ರೂಪಿಸಿದ ಸಿನೊಡಲ್ ಚರ್ಚ್‍ಅನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ.
ಕಾರ್ಡಿನಲ್ ಮತ್ತು ಇತರೆಲ್ಲಾ ಗಣ್ಯರು ದೀಪ ಬೆಳಗಿಸುವ ಮೂಲಕ ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಿತು. ತದನಂತರ. ಕಾರ್ಡಿನಲ್ ಅವರ ಅಧ್ಯಕ್ಷತೆಯಲ್ಲಿ ದಿವ್ಯ ಬಲಿಪೂಜೆ ಅರ್ಪಿಸಲಾಯಿತು.. ಗಣ್ಯರು ಮತ್ತು ಡಿಪಿಪಿ ಪದಾಧಿಕಾರಿಗಳು ಪೂಜೆಯ ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಆಚರಣೆಯನ್ನು ಉದ್ಘಾಟಿಸಿದರು.
ಕಾರ್ಡಿನಲ್ ಫಿಲಿಪೆ ನೇರಿ ತಮ್ಮ ಪ್ರವಚನದಲ್ಲಿ, ಸಮುದಾಯದಲ್ಲಿ ಸಹಭಾಗಿತ್ವವನ್ನು ನಿರ್ಮಿಸಲು ಮತ್ತುಸಮಾಜದ ಪರಿವರ್ತನೆ ಕಾಣಲು ಯೇಸುಕ್ರಿಸ್ತನ ಮಾದರಿಯಂತೆ ನಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರವಾದಿಯಾಗಿರ ಬೇಕು’ ಎಂದುಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್‍ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಬೆಂಗಳೂರು ಆರ್ಚ್ ಬಿಷಪ್‍ಅ ತೀ ವಂದನೀಯ ಡಾ| ಪೀಟರ್ ಮಚಾದೊ, ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರು ಶ್ರೀ ಜೋನ್ ಮೈಕಲ್ ಡಿಕುನ್ಹಾ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ, ವಿಧಾನ ಪರಿಷತ್ತಿನ ಮಾಜಿ ಸದಸ್ಸ್ಯರಾದ ಶ್ರೀ ಐವನ್ ಡಿ ಸೋಜಾ, ವಿಧಾನ್ ಸಭೆಯ ಮಾಜಿ ಶಾಸಕಾರಾದ ಶ್ರೀ ಜೆ.ಆರ್. ಲೋಬೋ, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಕುವೆಲ್ಲೊ, ಧರ್ಮಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ. ಜೆ. ಬಿ. ಸಲ್ಡಾನ್ಹಾ ಮತ್ತು ಶ್ರೀ ರಾಯ್ ಕ್ಯಾಸ್ಟೆಲಿನೊ, ಪಾಲನಾ ಪರಿಷತ್ತಿನ ಪ್ರಸ್ತುತ ಕಾರ್ಯದರ್ಶಿ ಡಾ|ಜಾನ್ ಡಿ’ಸಿಲ್ವಾ ಮತ್ತು ಮಾಜಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಎಲ್ಲಾ ಸಂಕಷ್ಟಗಳ ವಿರುದ್ಧ ಹೋರಾಡಲು ಏಕತೆ ಮುಖ್ಯ ಎಂದು ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್‍ಡಿ’ಕುನ್ಹಾ ಹೇಳಿದರು. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಬದಲಾಗುತ್ತಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಧರ್ಮಸಭೆಯ ವಿಶ್ವಾಸಕ್ಕೆ ಸಾಕ್ಷಿಯಾಗಬಹುದು. ನಮ್ಮ ನಂಬಿಕೆಯನ್ನು ಬೋಧಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಮ್ಮ ಸಂವಿಧಾನವು ಖಾತರಿಪಡಿಸಿದೆ.” ಎಂದರು.
ಆರ್ಚ್‍ಬಿಷಪ್ ಪೀಟರ್ ಮಚಾದೊ ಅವರು ಈ ಸಂದರ್ಭದಲ್ಲಿ ಪ್ರಕಟಿಸಲಾದ “ಏಕ್ತಾರಾಚಿಂ ಭಾಂಗ್ರಾಳಿಂ ಮೆಟಾಂ” (ಏಕತೆಯ ಸುವರ್ಣ ಹೆಜ್ಜೆಗಳು) ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಸ್ಮರಣಿಕೆಯು ಮಂಗಳೂರಿನ ಕ್ಯಾಥೋಲಿಕ್ ಸಮುದಾಯದ ಸಂಗತಿಗಳು, ಅಂಕಿ ಅಂಶಗಳು ಮತ್ತು ಸಾಧನೆಗಳನ್ನು ದಾಖಲಿಸಿದೆ.
“ಇಂದಿನ ಸಮಾಜದಲ್ಲಿ ಪ್ರವಾದಿಗಳಾಗಲು ಕರೆಯಲಾಗಿದೆ” ಎಂಬ ವಿಷಯದ ಕುರಿತು ಮಾತನಾಡಿದ ಆರ್ಚ್‍ಬಿಷಪ್ ಪೀಟರ್ ಮಚಾದೊ, “ಅನೈಕ್ಯತೆಯ ಭಾವ ಕ್ರಿಶ್ಚಿಯನ್ ಧರ್ಮದ ದೊಡ್ಡ ಕುಂದುಕೊರತೆಯಾಗಿದೆ, ಮೇಲಿನಿಂದ ಬರುವ ದೇವರ ಅನುಗ್ರಹವು ನಂಬಿಕೆಯಲ್ಲಿ ಐಕ್ಯವಾಗಿರಲು ಮತ್ತು ಸಂಪನ್ಮೂಲಗಳನ್ನು ಹುಡುಕಲು ಮತ್ತು ಸಮಾಜದ ಕೆಳಸ್ಥರದಲ್ಲಿ ಮತ್ತು ಆಂಚಿನಲ್ಲಿರುವವರನ್ನು ತಲುಪಲು ನಮಗೆ ಅನುವು ಮಾಡಿಕೊಡುತ್ತದೆ, ಎಂದರು.
ಮಂಗಳೂರಿನ ಕ್ರೈಸ್ತ ಸಮುದಾಯದ ಗತಕಾಲದ ವೀರರ ಅಮೋಘ ಸಾಧನೆಯನ್ನು ಸ್ಮರಿಸಿದ ಡಾ.ಫಿಲೋಮಿನಾ ಲೋಬೊ, ಮಂಗಳೂರು ಕೆಥೋಲಿಕ್ ಸಮುದಾಯ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿಭಾನ್ವಿತ ಸಮುದಾಯವಾಗಿದೆ ಎಂದರು. ಅವರು ಹೇಳಿದರು, “ಇದು ಬಲವಾದ ಸಮುದಾಯವಾಗಿ ಬೆಳೆಯಲು ಸಾಕಷ್ಟು ಸಾಮಥ್ರ್ಯವನ್ನು ಹೊಂದಿದೆ. ಧರ್ಮಸಭೆ ಎಂದರೆ ಕೇವಲ ಪಾದ್ರಿಗಳು ಮತ್ತು ಕನ್ಯಾಸ್ತ್ರೀಯರು ಮಾತ್ರವಲ್ಲ. ಪ್ರತಿಯೊಬ್ಬ ನಿಷ್ಟಾವಂತವರಾಗಿದೆ. ಸಂಪನ್ಮೂಲಗಳು ಮತ್ತು ಪ್ರತಿಭೆಗಳನ್ನು ಸಮಾಜದ ಒಳಿತಿಗಾಗಿ ಬಳಸಿದಾಗ ಚರ್ಚ್ ಪೂರ್ಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆಉತ್ತಮ ನಾಯಕರನ್ನು ಸಿದ್ದ ಮಾಡಲು ಮತ್ತು ರೂಪಿಸಲು ಈ ಆಚರಣೆ ಕಣ್ಣು ತೆರೆದಿದೆ, ಎಂದರು.
ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಸಮುದಾಯದ ಬೆಳವಣಿಗೆಯಲ್ಲಿ ಪಾಲನಾ ಪರಿಷತ್ತಿನ ಪಾತ್ರದ ಕುರಿತು ಮಾತನಾಡಿದರು. ಅವರು 50 ವರ್ಷಗಳಲ್ಲಿ ದಾಖಲಿಸಿದ ಗಮನಾರ್ಹ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಸಂತೋಷಪಟ್ಟರು, ದೇವರಅನುಗ್ರಹವು ಹೇರಳವಾಗಿದೆ ಮತ್ತು ಧರ್ಮಸಭೆಯಲ್ಲಿ ಶ್ರೀ ಸಾಮಾನ್ಯರ ಸಹಯೋಗ ಮತ್ತು ಬೆಂಬಲವು ಅಪಾರವಾಗಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳಾಗಿವೆ’ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, “ನಾವು ಈ ದೇಶದ ಪ್ರಜೆಗಳು. ನಮ್ಮ ಹಕ್ಕುಗಳನ್ನು ರಕ್ಷಿಸಲು ನಾವು ಧ್ವನಿ ಎತ್ತಬೇಕು ಮತ್ತು ಪ್ರತಿಕ್ರಿಯಿಸ ಬೇಕು.”ಆತ್ಮ ವಿಶ್ವಾಸ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುವುದು ಒಗ್ಗಟ್ಟನ್ನು ಉತ್ತೇಜಿಸುವ ಪ್ರಮುಖ ಅಂಶಗಳಾಗಿವೆ’ ಎಂದು ಅವರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಎಂ.ಪಿ ನೊರೊನ್ಹಾ ಸ್ವಾಗತಿಸಿ “ಈ ಆಚರಣೆಯ ಉದ್ದೇಶವು ಹಿಂದಿನ ಯಶಸ್ಸನ್ನು ಆಚರಿಸುವುದು ಮಾತ್ರವಲ್ಲದೆಎಲ್ಲಾಪಾಲನಾ ಪರಿಷತ್ ಸದಸ್ಯರು ಮತ್ತು ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸಲು ಮತ್ತು ನಾಯಕತ್ವದ ಗುಣವನ್ನು ಬೆಳೆಸುವ ಮೂಲಕ ಅವರನ್ನು ಸಮುದಾಯದ ನಾಯಕರನ್ನಾಗಿ ಮಾಡಲು ಯೋಜನೆ ರೂಪಿಸುವುದಕ್ಕೆಇಂದಿನ ಆಚರಣೆಯು ಒಂದು ಮೂಹೂರ್ತ” ಎಂದು ಅವರು ಹೇಳಿದರು.
ರಾಕ್ಣೊ ವಾರಪತ್ರಿಕೆಯ ನಿಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ ಮತ್ತು ಶ್ರೀಮತಿ ಅನಿತಾ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಪರಿಷತ್ತಿನ ಕಾರ್ಯದರ್ಶಿ ಡಾ|ಜಾನ್ ಡಿ ಸಿಲ್ವಾ ವಂದಿಸಿದರು.
ಆತೀ ವಂದನೀಯ ಶ್ರೇಷ್ಠ ಗುರು ಮ್ಯಾಕ್ಸಿಮ್ ಎಲ್ ನೊರೊನ್ಹಾ, ಭೋಜನದ ಆಶಿರ್ವಾದವನ್ನು ನೇರವೇರಿಸಿದರು. ಮೊದಲು ಪ್ರಾರ್ಥಿಸಿದರು.
2000 ಕ್ಕೂ ಹೆಚ್ಚು ಶ್ರೀಸಾಮಾನ್ಯರು, ಯಾಜಕರು ಮತ್ತು ಕನ್ಯಾಸ್ರೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು..