ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋ ನಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ, ಇತಿಹಾಸ ರಚಿಸಿ ಭಾರತವನ್ನು ಕ್ರೀಡೆಯಲ್ಲಿ ಮಿನುಗಿಸಿದ್ದಾರೆ

JANANUDI.COM NETWORK

ಭಾರತದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ನೀರಜ್ ಚೋಪ್ರಾ ಹೆಮ್ಮೆಯ ಕ್ರೀಡಾಪಟು ಎಂಬ ಖ್ಯಾತಿಗೆ ಒಳಗಾದರು. ನೀರಜ್ ಚೋಪ್ರಾ ಭಾರತದ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಮಿನುಗುವಂತೆ ಮಾಡಿದ್ದಾರೆ


ಟೋಕಿಯೋ (ಜಪಾನ್):ಭಾರತದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅಹರ್ತಾ ಸುತ್ತಿನಲ್ಲಿ 86.59 ಎಸೆದು ನೇರವಾಗಿ ಫೈನಲ್ ತಲುಪಿದ್ದ ನೀರಜ್ ಚೋಪ್ರಾ, ಫೈನಲನಲ್ಲಿ 87.58 ಮಿ. ದೂರ ಎಸೆದು ಅಮೂಲ್ಯ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲಿಟ್ ಎಂಬ ಕೀರ್ತಿಗೆ ನೀರಜ್ ಪಾತ್ರರಾದರು.
ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸುವ ಮೂಲಕ 100 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲಿಟ್ ಎಂಬ ಕೀರ್ತಿಗೆ ಭಾಜನರಾದರು.


ಈ ಮೂಲಕ ನೀರಜ್ ಚೋಪ್ರಾ ಹೆಮ್ಮೆಯ ಕ್ರೀಡಾಪಟು ಎಂಬ ಖ್ಯಾತಿಗೆ ಒಳಗಾದರು. ನೀರಜ್ ಚೋಪ್ರಾ ಭಾರತದ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಮಿನುಗುವಂತೆ ಮಾಡಿದ್ದಾರೆ
.