ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಆದ್ಯತ್ಮಿಕ ಚಿಂತನೆಗಳು ಎಲ್ಲರಲ್ಲಿ ಬಂದು ಪಕ್ಷಾತೀತವಾಗಿ ಗ್ರಾಮಗಳಲ್ಲಿ ದೇವಾಲಯ ಗ್ರಾಮಾಭಿವೃದ್ಧಿ ಕೆಲಸಗಳು ನಡೆಸಿದಾಗ ಸಾಮಾರಸ್ಯ ಭಾವನೆಗಳು ಬಂದರೆ ಎಲ್ಲರಿಗೂ ದೇವರು ಒಳ್ಳೆಯದು ಮಾಡುತ್ತಾರೆಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ದೇವಸ್ಥಾನದಲ್ಲಿ ಗ್ರಾಮ ದೇವತೆ ಚೌಡೇಶ್ವರಿ ದೇವರ ವಿಗ್ರಹ ಪ್ರತಿಷ್ಟಾಪನೆ ಮತ್ತು ಗೋಪುರ ಕಲಚ ಸ್ಥಾಪನೆ ಪೂಜಾ ಕಾರ್ಯಕ್ರಮದಲ್ಲಿ ಬಾಗವಸಿದ ದೇವರಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ 50 ಸಾವಿರ ರೂ. ದೇಣಿಕೆ ಅರ್ಪಿಸಿ ಮಾತನಾಡಿದರು.
ಮಾಜಿ ಶಾಸಕ ಜಿ.ಕೆ.ವೆಂಟಶಿವಾರೆಡ್ಡಿ ದೇವರಿಗೆ ಪೂಜೆ ಸಮರ್ಪಿಸಿ ದೇವರ ಕಾರ್ಯಕ್ರಮಗಳು ಮಾಡುವಾಗ ಸಾಮೂಹಿಕವಾಗಿ ಎಲ್ಲರೂ ಸಹಕಾರ ನೀಡಿದರೆ ಇಂತಹ ದೊಡ್ಡ ವೆಚ್ಚದ ಕಾರ್ಯಗಳು ಸುಲಬವಾಗಿ ನಡೆಯುತ್ತವೆ. ದೇವರಿಗೆ ಎಲ್ಲರೂ ಸಹಾಯ ಮಾಡುವ ಗುಣ ಭಗವಂತನೆ ನೀಡುತ್ತಾನೆಂದು ಹೇಳಿದ ಅವರು 25 ಸಾವಿರ ನಗದು ಕಾಣಿಕೆ ನೀಡಿ ದೇವರ ಪೂಜಾ ಕೈಂಕರ್ಯಗಳಿಗೆ ಬಳಸಿಕೊಳ್ಳಿ ಎಂದರು. ನಂತರ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಬೇಟಿ ನೀಡಿ ದೇವರ ದರ್ಶನ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿದರು. ಪಿಎಲ್ಡಿ ಬ್ಯಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ತಹಸಿಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಪಂ ಇಒ ಎಸ್.ಆನಂದ್, ಇತರರು ಬೇಟಿ ನೀಡಿದರು.
ತಾಲೂಕಿನ ವಿವಿದ ಗ್ರಾಮಗಳಿಂದ ಹಾಗೂ ಸುತ್ತಮುತಲ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ದೇವರ ಪೂಜಾ ಕೈಂಕರ್ತಗಳಲ್ಲಿ ಬಾಗವಹಿಸಿ ದೇವರ ದರ್ಶನ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರೆಂದು ಆಡಳಿತ ವ್ಯವಸ್ಥಾಪಕ ಎ.ವೆಂಟರೆಡ್ಡಿ ಹೇಳಿದರು. ಗ್ರಾಮದ ಮುಖಂಡ ತಾಪಂ ಮಾಜಿ ಸದಸ್ಯ ಕೆ.ಕೆ. ಮಂಜು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
27 ಶ್ರೀನಿವಾಸಪುರ 1: ಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಚೌಡೇಶ್ವರಿ ದೇವರ ವಿಗ್ರಹ ಪ್ರತಿಷ್ಟಾಪನೆ ಮಾಡಿ ಪೂಜಾ ಕಾರ್ಯಕ್ರಮದ ಏರ್ಪಡಿಸಲಾಗಿತ್ತು.