

ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ರಕ್ಷಣಾ ಸಂಸ್ಥೆ ಇದರ ಗೋವಾ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಘಟಕಗಳ ಅಧ್ಯಕ್ಷೆಯಾಗಿರುವ ಶ್ರೀಮತಿ ಖತೀಜಾ ಖಾನ್ ಅವರು ವನಮಹೋತ್ಸವ ಅಂಗವಾಗಿ ಕಾರವಾರ ಜಿಲ್ಲೆಯ ಮಾಜಾಳಿಯ ಅಂಗನವಾಡಿ ಶಾಲೆಯ ತೋಟದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಘಟಕದ ರಾಜ್ಯ ಸದಸ್ಯೆ ಶ್ರೀಮತಿ ದೀಕ್ಷಾ ಕುಲ್ವೇಕರ್ ಅವರು ಉಪಸ್ಥಿತರಿದ್ದರು. ಕಾರ್ಯ ಕ್ರಮದ ನಂತರ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.