ಲಾಕ್‍ಡೌನ್ ಹಿನ್ನೆಲೆ ನಿರ್ಗತಿಕರು ಕೆಲಸವಿಲ್ಲದೆ ಕಷ್ಟಪಡುತ್ತಿರುವುದರಿಂದ ಆಹಾರ ಕಿಟ್‍ಗಳನ್ನು ನೀಡುತ್ತಿರುವುದು: ಸುರೇಶ್‍ಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಲಾಕ್‍ಡೌನ್ ಹಿನ್ನೆಲೆ ನಿರ್ಗತಿಕರು ಕೆಲಸವಿಲ್ಲದೆ ಕಷ್ಟಪಡುತ್ತಿರುವುದರಿಂದ ಅವರಿಗೆ ಅನುಕೂಲವಾಗಲ್ಲೆಂದು ಆಹಾರ ಕಿಟ್‍ಗಳನ್ನು ನೀಡುತ್ತಿರುವುದಾಗಿ ತಾಲೂಕು ಯೋಜನಾಧಿಕಾರಿ ಸುರೇಶ್‍ಗೌಡ ಹೇಳಿದರು.
ರಾಯಲ್ಪಾಡಿನ ಸಮುದಾಯ ಭವನದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವತಿಯಿಂದ ವಲಯದ 120 ನಿರ್ಗತಿಕರಿಗೆ ಆಹಾರ ಕಿಟ್ಟು ಹಾಗು ಉಚಿತ ಹೆಲ್ತ್ ಕಾರ್ಡ್‍ಗಳನ್ನು ವಿತರಿಸಿ ಮಾತನಾಡಿದರು.
ಪೂಜ್ಯ ವಿರೇಂದ್ರಹೆಗಡೆಯವರ ಮಾರ್ಗದರ್ಶನದಂತೆ ಜಿಲ್ಲೆಯಾದ್ಯಾಂತ 900, ತಾಲೂಕಿನಾದ್ಯಾಂತ 300 ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಆಹಾರ ಧಾನ್ಯಗಳು ಮಂಜುನಾಥಸ್ವಾಮಿ ಪ್ರಸಾದವೆಂದು ಸ್ವೀಕರಿಸಿ ಬಳಸಿಕೊಳ್ಳವಂತೆ ಮನವಿ ಮಾಡಿದರು.
ಸಮಾಜಸೇವಕ ಚಕ್ಕಾ ಮಂಜುನಾಥಶೆಟ್ಟಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮದರ್ಶಿ ಪೂಜ್ಯ ವಿರೇಂದ್ರಹೆಗಡೆ ಅವರ ಜನಪಯೋಗಿ ಸೇವೆ ಅನನ್ಯವಾಗಿದೆ.ಅಕ್ಷರ, ಆರ್ಥಿಕ , ಗ್ರಾಮಾಭಿವೃದ್ಧಿ ಸೇವಾಯೋಜನೆಗಳು ಮಾದರಿಯಾಗಿದೆ.ಕೋವಿಡ್-19ರ ದಿನಗಳಲ್ಲಿ ಹಸಿವು ನಿವಾರಣೆಗೆ ಆಹಾರ ಧಾನ್ಯಗಳನ್ನು ನೀಡಿ ಪೋಷಿಸುತ್ತಿರುವುದು ಶ್ಲಾಘನೀಯವೆಂದರು.
ಗ್ರಾ.ಪಂ. ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ, ಹಸಿರುಹೊನ್ನು ಬಳಗದ ಗೌರವಾಧ್ಯಕ್ಷ ಸಿ.ಎಸ್.ವಿಶ್ವನಾಥಶಾಸ್ತ್ರಿ, ವಲಯ ಮೇಲ್ವಿಚಾರಕ ರಾಜೇಶ್, ಒಕ್ಕೂಟದ ಅಧ್ಯಕ್ಷೆ ಪದ್ಮಜ, ಸೇವಾ ಪ್ರತಿನಿಧಿಗಳಾದ ಶೋಭ, ರಾಜಮ್ಮ,ಕಲ್ಯಾಣಿ ಇತರರಿದ್ದರು.
ಪೋಟು 1 : ರಾಯಲ್ಪಾಡಿನ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವತಿಯಿಂದ ವಲಯದ 120 ನಿರ್ಗತಿಕರಿಗೆ ಆಹಾರ ಕಿಟ್ಟು ಹಾಗು ಉಚಿತ ಹೆಲ್ತ್ ಕಾರ್ಡ್‍ಗಳನ್ನು ಸುರೇಶ್‍ಗೌಡ, ಸಿಮೆಂಟ್‍ನಾರಾಯಣಸ್ವಾಮಿ ವಿತರಿಸಿದರು
.