ಶ್ರೀನಿವಾಸಪುರ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಗುಲಾಬಿ ನೀಡಿ ಅಭಿನಂದಿಸುವುದರ ಮೂಲಕ ಅರಿವು ಮೂಡಿಸಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಗುಲಾಬಿ ನೀಡಿ ಅಭಿನಂದಿಸುವುದರ ಮೂಲಕ ಅರಿವು ಮೂಡಿಸಿದರು.
ಪಟ್ಟಣದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸುವಂತೆ ಪುರಸಭೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಂಥ ವ್ಯಕ್ತಿಗಳನ್ನು ಗುರುತಿಸಿ ದಂಡ ವಿಧಿಸಿದ್ದರು. ಆದರೆ ಅದಾವುದಕ್ಕೂ ಬಗ್ಗದ ಕೆಲವರು ಮಾಸ್ಕ್ ರಹಿತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು.
ಪುರಸಭೆಯ ಮುಖ್ಯಾಧಿಕಾರಿ ಡಿ.ಶೇಖರ್ ರೆಡ್ಡಿ ಹಾಗೂ ಆರೋಗ್ಯ ನಿರೀಕ್ಷಕ ಪೃಥ್ವಿರಾಜ್ ಶನಿವಾರ ವಿನೂತನ ನಡೆಯ ಮೂಲಕ ಮಾಸ್ಕ್ ಧರಿಸದ ವ್ಯಕ್ತಿಗಳು ಮಾಸ್ಕ್ ಧರಿಸುವಂತೆ ಮಾಡಿದರು. ರಸ್ತೆಯಲ್ಲಿ ಪುರಸಭೆ ಅಧಿಕಾರಿಗಳನ್ನು ಕಂಡು ದಂಡ ನೀಡಬೇಕಾಗುತ್ತಲ್ಲ ಎಂಬ ಚಿಂತೆಗೆ ಒಳಗಾಗಿದ್ದ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಜನರು, ಅಧಿಕಾರಿಗಳಿಂದ ಗುಲಾಬಿ ಸ್ವೀಕರಿಸಿ ನಾಚಿಕೆಯಿಂದ ಮಾಸ್ಕ್ ಧರಿಸಿ ಮುಜಗರಕ್ಕೆ ಒಳಗಾದರು.