ಗಿಳಿಯಾರು ಕುಶಲ ಹೆಗ್ಡೆ ರೋಟರಿ ಸಭಾಭವನ ಉದ್ಘಾಟನೆ

JANANUDI.COM NETWORK


ರೋಟರಿ ಕುಂದಾಪುರದ ನವೀಕೃತ ಕಟ್ಟಡ ಗಿಳಿಯಾರು ಕುಶಲ ಹೆಗ್ಡೆ ರೋಟರಿ ಭವನದ ಉದ್ಘಾಟನಾ ಸಮಾರಂಭ ಸಂಭ್ರಮದಲ್ಲಿ ನಡೆಯಿತು.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿ ಯಲ್ ಟ್ರಸ್ಟ್ ಹಾಗೂ ರೋಟರಿ ಕುಂದಾಪುರದ ಸರ್ವ ಸದಸ್ಯರ ಸಹಕಾರದಿಂದ ನಿರ್ಮಿಸಲ್ಪಟ್ಟ ಈ ಕಟ್ಟಡವನ್ನು ಬೆಂಗಳೂರು ಕಾನ್ಫಿಡೆಂಟ್ ಡೆಂಟಲ್ ಇಕ್ವಿಪ್‍ಮೆಂಟ್ ಲಿ. ಇದರ ಆಡಳಿತ ನಿರ್ದೇಶಕರಾದ ಡಾ. ಬಿ.ಸುಭಾಷ್‍ಚಂದ್ರ ಶೆಟ್ಟಿ ಉದ್ಘಾಟಿಸಿದರು.
“ಗಿಳಿಯಾರು ಕುಶಲ ಹೆಗ್ಡೆಯವರು ಓರ್ವ ಸರಳ ಸಜ್ಜನ ವ್ಯಕ್ತಿಯಾಗಿದ್ದು, ಸಾಮಾಜಿಕ ಕ್ಷೇತ್ರದಲ್ಲಿ ತನ್ನ ಸೇವಾಗುಣಗಳ ಮೂಲಕ ಖ್ಯಾತರಾಗಿದ್ದರು. ರೋಟರಿ ಚಟುವಟಿಕೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು. ಅವರ ಹೆಸರಲ್ಲಿ ಕಟ್ಟಡ ನಿರ್ಮಾಣ ಆಗಿರುವುದು ಅರ್ಥಪೂರ್ಣ ವಾಗಿದೆ. ಸಾಮಾಜಿಕ ಸೇವೆಯೇ ಗುರಿಯಾಗಿಸಿ ಕೊಂಡ ಕುಂದಾಪುರ ರೋಟರಿಸಂಸ್ಥೆಗೆ, ಬಹಳ ಯೋಜನಾಬದ್ಧವಾಗಿ ಕಟ್ಟಿದ ಈ ಕಟ್ಟಡ ಇನ್ನಷ್ಟು ಸ್ಫೂರ್ತಿ ನೀಡಲಿ” ಎಂದು ಅವರು ಹೇಳಿದರು.
ಡಾ| ವೈ.ಎನ್.ಶೆಟ್ಟಿಯವರ ಮಕ್ಕಳÀ ಕೊಡುಗೆಯಾದ ನೆಲಮಹಡಿಯ ಪ್ರಧಾನ ವೇದಿಕೆ “ಯಡ್ತರೆ ನರಸಿಂಹ ಶೆಟ್ಟಿ ಸಭಾ ಮಂಚ್”ನ್ನು ರೋಟರಿ ಜಿಲ್ಲಾ ಗವರ್ನರ್ ರಾಮಚಂದ್ರ ಮೂರ್ತಿ ಉದ್ಘಾಟಿಸಿದರು.
ಖ್ಯಾತ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ್ ಕೊಡಮಾಡಿದ ಮೊದಲನೇ ಮಹಡಿ “ಗೀತಾ-ರತ್ನ ಕಲಾವೇದಿಕೆ”ಯನ್ನು ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ಉದಯಕುಮಾರ್ ಹೆಗ್ಡೆ ಉದ್ಘಾಟಿಸಿದರು.


ಉದ್ಯಮಿ ಪ್ರಶಾಂತ್ ತೋಳಾರ್ ಕುಟುಂಬ ಕೊಡಮಾಡಿದ “ಪ್ರಭಾಕರ- ಡೊರತಿ ತೋಳಾರ್ ರೂಫ್‍ಟಾಪ್”ನ್ನು ಪಿಡಿಜಿ ಅಭಿನಂದನ್ ಶೆಟ್ಟಿ ಉದ್ಘಾಟಿಸಿದರು. ಇಂಜಿನಿಯರ್ ಸನತ್‍ಕುಮಾರ್ ರೈ ಕೊಡಮಾಡಿದ “ಕಲಾಯಿ ರಾಮಣ್ಣ ರೈ ಮಿನಿ ಎ.ಸಿ. ಸಭಾಂಗಣ” ವನ್ನು ರೋಟರಿ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿಯ ಅಧ್ಯಕ್ಷರಾದ ಎ.ಶಶಿಧರ್ ಹೆಗ್ಡೆ ವಹಿಸಿದ್ದರು.
ಸಮಾರಂಭದಲ್ಲಿ ರೋಟರಿ ಕುಂದಾಪುರದ ಕಟ್ಟಡ ಸಮಿತಿ ಅಧ್ಯಕ್ಷ ಪ್ರಶಾಂತ್ ತೋಳಾರ್, ಕಾರ್ಯದರ್ಶಿ ರವಿರಾಜ್ ಶೆಟ್ಟಿ, ರೋಟರಿ ವಲಯ ಒಂದರ ಝೋನಲ್ ಲೆಫ್ಟಿನೆಂಟ್ ಡಾ. ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು. ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಟ್ರಸ್ಟ್ ನ ಪದಾಧಿಕಾರಿಗಳು, ಗಿಳಿಯಾರು ಕುಶಲ ಹೆಗ್ಡೆಯವರ ಕುಟುಂಬಸ್ಥರನ್ನು ಗುರುತಿಸಲಾಯಿತು.
ದಾನಿಗಳನ್ನು ಹಾಗೂ ಗುತ್ತಿಗೆದಾರ ಸತೀಶ್ ಆಚಾರ್ಯ ಮತ್ತು ರೋಟರಿ ಕುಂದಾಪುರದ ಕಟ್ಟಡ ಸಮಿತಿಯ ಸಂಚಾಲಕರಾದ ಶ್ರೀಪಾದ್ ಉಪಾಧ್ಯರನ್ನು ಗೌರವಿಸಲಾಯಿತು. ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಕುಂದಾಪುರದ ಕಾರ್ಯದರ್ಶಿ ಕುಮಾರ್ ಕಾಂಚನ್ ವಂದಿಸಿದರು.
ಕುಂದಾಪುರ ರೋಟರಿ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಟ್ರಸ್ಟ್ ಕೊಡಮಾಡಿದ ರೂ 20 ಲಕ್ಷ ಧನಸಹಾಯ ಹಾಗೂ ರೋಟರಿ ಕ್ಲಬ್ ಕುಂದಾಪುರದ ಸದಸ್ಯರೆಲ್ಲರ, ದಾನಿಗಳ ಸಹಕಾರದಿಂದ ಸುಮಾರು ಒಂದು ಕೊಟಿ ರೂ. ವೆಚ್ಚದಲ್ಲಿ ಭವ್ಯ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಗೊಂಡಿರುವುದು ರೋಟರಿ ಕ್ಲಬ್ ಕುಂದಾಪುರದ ಸಾಧನೆಯಾಗಿದೆ.