ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಜನವರಿ 4 : ಡಾ. ಬಿ. ಆರ್ ಅಂಬೇಡ್ಕರ್ ನೀಡಿದ ಸಂವಿಧಾನದ ಹಕ್ಕುಗಳಾದ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನ್ಯಾಯ ಸಮ್ಮತ ಅನುಕೂಲಗಳನ್ನು ಪಡೆಯಲು ಅತಿಥಿ ಉಪನ್ಯಾಸಕರು ಸಮರ್ಥರಾಗಿದ್ದಾರೆ.
ಅವರು ನಗರದ ನೀರಾವರಿ ವೇದಿಕೆಯಲ್ಲಿ ಅತಿಥಿ ಉಪನ್ಯಾಸಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲಿ ಭಾಗವಹಿಸಿ ಮಾತಾನಾಡುತ್ತಿದ್ದರು
ಆಡಳಿತ ರೂಢ ಸರ್ಕಾರಕ್ಕೆ ಕಣ್ಣು ಕಿವಿ ಬಾಯಿ ಇದೆಯೋ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಡಿಸೆಂಬರ್ 10 ರಿಂದ ನಿರಂತರ ಹೋರಾಟದ ಮೂಲಕ ಸೇವಾ ವಿಲೀನತೆಗಾಗಿ ಅತಿಥಿ ಉಪನ್ಯಾಸಕರು ಧರಣಿ ಹೋರಾಟ ಪ್ರತಿಕೃತಿ ದಹನ, ಕಾಲ್ನಡಿಗೆ ಜಾತ ಮುಂತಾದವುಗಳ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಿದ್ದರೂ ಮುಖ್ಯಮಂತ್ರಿಗಳು ಸ್ಪಂದಿಸದೆ ಇರುವುದು ಸರ್ಕಾರದ ಪಾರದರ್ಶಕತೆಯನ್ನು ಮತ್ತು ಸಮಾಜಿಕ ನ್ಯಾಯದ ಬಗ್ಗೆ ಎಷ್ಟು ನಿಷ್ಠವಾಗಿದೆ ಎಂದು ಎಂಎಲ್ ಸಿ ಅನಿಲ್ ಕುಮಾರ್ ರವರು ಸರ್ಕಾರಕ್ಕೆ ಕಿವಿಹಿಂಡಿ ಹೇಳಿದರು.
ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ಕೇವಲ 11000 ರೂಪಾಯಿಗಳನ್ನು ಪಡೆದು ಜೀವನ ಮತ್ತು ಬೋಧನೆ ಮಾಡುತ್ತಿರುವುದು ಶೋಚನೀಯ ಸಂಗತಿ ಮತ್ತು ಇವರ ನಿರ್ಲಕ್ಷ್ಯ ವಹಿಸಿದ ಸರ್ಕಾರವು ಕೂಡ ಹೆಚ್ಚೆತ್ತು ಕೊಳ್ಳಬೇಕಾಗಿದೆ ಎಂದು ಎಂಎಲ್ ಸಿ ಅನಿಲ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು
ಸರ್ಕಾರ ನೀಡುವ ಅಲ್ಪ ಗೌರವಧನ ಪಡೆದುಕೊಂಡು ಜೀವನ ನಿರ್ವಹಣೆ ಮಾಡುವುದು ಕಷ್ಠಕರ. ಹಲವು ಉಪನ್ಯಾಸಕರು ವಯೋಮಿತಿ ಮೀರುವ ಹಂತದಲ್ಲಿದ್ದಾರೆ, ಕೆಲವು ಉಪನ್ಯಾಸಕರು ಇಪ್ಪತ್ತೈದು ವರ್ಷಗಳ ಕಾಲ ನಿರಂತರವಾಗಿ ಸೇವೆ ಮಾಡಿದ್ದಾರೆ ಹಾಗಾಗಿ ಆಡಳಿತ ಸರ್ಕಾರ ಈ ಕ್ಷಣ ಅತಿಥಿ ಉಪನ್ಯಾಸಕರನ್ನು ಗಮನಿಸಿ ಅವರನ್ನು ಸರ್ಕಾರಿ ಉದ್ಯೋಗಸ್ಥರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಬೇರೆ ರಾಜ್ಯದಲ್ಲಿಯ ಸೌಲಭ್ಯಗಳನ್ನು ನಮ್ಮ ಕರ್ನಾಟಕದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ನೀಡಬೇಕು. ಆದಷ್ಟು ಬೇಗ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಿ ಜೀವನೋಪಾಯಕ್ಕೆ ದಾರಿಮಾಡಿಕೊಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಾ ಇದರೊಂದಿಗೆ ಮುಂದಿನ ದಿನಗಳಲ್ಲಿ ಪರಿಷತ್ತಿನ ಸಭೆಗಳಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ. ಜೊತೆಯಲ್ಲಿ ಈ ವಿಷಯದ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರನ್ನು ಈ ವೇದಿಕೆ ಕರೆದುಕೊಂಡು ಬಂದು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ, ಜಿಲ್ಲಾಧ್ಯಕ್ಷ ನೂರ್ ಅಹಮದ್, ಉಪಾಧ್ಯಕ್ಷರಾದ ಡಾ.ಶರಣಪ್ಪ ಗಬ್ಬೂರು, ಲಕ್ಷ್ಮೀದೇವಿ, ಕಾವೇರಪ್ಪ, ಪತ್ರಿಕಾ ಸಲಹೆಗಾರ ಹಾಗೂ ಕಾರ್ಯದರ್ಶಿ ವಿ.ಬಿ. ಶಿವಣ್ಣ, ರವಿಕುಮಾರ್, ರವಿಶಂಕರ್, ಸಿದ್ಧಪ್ಪ, ನಾಗರಾಜ್, ಚೇತನ, ವೆಂಕಟೇಶ, ಮಂಜುನಾಥ, ವೆಂಕಟೇಶಪ್ಪ, ಗೋಪಿನಾಥ್ ನೂರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಭಾಗವಹಿದ್ದರು