ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ನಗರಾದ್ಯಂತ ಗುಂಪುಗುಂಪಾಗಿ ಗಲ್ಲಿಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿನಾಯಿಗಳಿಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಮತ್ತು ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳಿಂದ ತಪ್ಪಿಸಬೇಕೆಂದು ರೈತ ಸಂಘದಿಂದ ನಗರಸಭೆ ಆಯುಕ್ತರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರದಿಂದ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಅನುದಾನವನ್ನು ಬಿಡುಗಡೆ ಮಾಡುತ್ತಿದ್ದರೂ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ನಗರಾದ್ಯಂತ ಬಿದಿ ನಾಯಿಗಳ ಹಾವಳಿಗೆ ಬಾಳಿ ಬದಕಬೇಕಾದ ಮಕ್ಕಳು ವಾಹನ ಸವಾರರು ಬಲಿಯಾಗುತ್ತಿದ್ದಾರೆಂದು ನಗರಸಭೆ ವಿರುದ್ದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಆಕ್ರೊಷ ವ್ಯಕ್ತಪಡಿಸಿದರು.
ಮನವಿ ನೀಡಿ ಮಾತನಾಡಿದ ರವರು ನಗರದ ಜನರ ನಿದ್ದೆಗೆಡಿಸುವ ಜೊತೆಗೆ ವಾಹನ ಸವಾರರ ಜೀವನವನ್ನು ಕಿತ್ತುಕೊಂಡು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರುವ ಬೀದಿ ನಾಯಿಗಳ ಆರ್ಭಟಕ್ಕೆ ಕಡಿವಾಣ ಹಾಕಲು ನಗರಸಭೆ ಅಧಿಕಾರಿಗಳು ವಿಫಲವಾಗಿದ್ದಾರೆ. ಒಂದು ಕಡೆ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ನಾಯಿಗಳಿಂದ ಮಕ್ಕಳು ವಯೋವೃದ್ದರು ಬದುಕಬೇಕಾದ ಪರಿಸ್ಥಿತಿ ನಗರದಲ್ಲಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಬೀದಿ ನಾಯಿಗಳ ಹಾವಳಿಗೆ ನಗರಾದ್ಯಂತ ಮಾಂಸದ ಅಂಗಡಿ ಮಾಲೀಕರು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ, ರಸ್ತೆಗಳ ಅಕ್ಕ ಪಕ್ಕಗಳಲ್ಲಿ ಸುರಿಯುತ್ತಿರುವುದರಿಂದ ಆಹಾರಕ್ಕಾಗಿ ಅರಿಸಿ ಬರುವ ಬೀದಿನಾಯಿಗಳಿಗೆ ಆಹಾರ ಸಿಗದೆ ಇದ್ದಾಗ ಬೀದಿಯಲ್ಲಿ ನಡೆದಾಡುವ ಮಕ್ಕಳ ಮೇಲೆ ಗುಂಪು ಗುಂಪಾಗಿ ಹಲ್ಲೆ ನಡೆಸುತ್ತಿರುವ ಜೊತೆಗೆ ಕಾರು, ಬೈಕ್, ವಾಹನಗಳನ್ನು ಹಿಂಬಾಲಿಸಿಕೊಂಡು ಕಿಲೋಮಿಟರ್‍ಗಟ್ಟಲೆ ಓಡುವ ಜೊತೆಗೆ ದ್ವಿಚಕ್ರವಾಹನಗಳಿಗೆ ಅಡ್ಡಾ ಬಂದು ಬಿದ್ದು, ಕೈಕಾಲು ಮುರಿದುಕೊಳ್ಳುವ ಜೊತೆಗೆ ಪ್ರಾಣವನ್ನು ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿದ್ದರೂ, ಕ್ರಮ ಕೈಗೊಳ್ಳದೆ ಮೌನವಾಗಿರುವ ನಗರಸಭೆ ಅಧಿಕಾರಿಗಳ ಜನ ವಿರೋಧಿ ನೀತಿ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ನಗರಾದ್ಯಂತ ಜನ ಸಾಮಾನ್ಯರ ಮತ್ತು ವಾಹನ ಸವಾರರು ಮತ್ತು ಚಿಕ್ಕ ಮಕ್ಕಳ ಜೀವಕ್ಕೆ ಹಾನಿ ಉಂಟು ಮಾಡುತ್ತಿರುವ ಬೀದಿ ನಾಯಿಗಳ ಆರ್ಭಟಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕು ಹಾಗೂ ಮಾಂಸದ ಅಂಗಡಿ ಮಾಲೀಕರು ತ್ಯಾಜ್ಯವನ್ನು ರಸ್ತೆ ಬದಿ ಸುರಿಯುತ್ತಿರುವ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡು ಜನ ಸಾಮಾನ್ಯರ ಹಾಗೂ ಮಕ್ಕಳ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕೆಂದು ಮಾನ್ಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಮನವಿಗೂ ಸ್ಪಂಧಿಸಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕದೇ ಇದ್ದರೆ, ನಗರಾದ್ಯಂತ ಇರುವ ಬಿದಿನಾಯಿಗಳನ್ನು ನಗರಸಭೆ ಕಛೇರಿಗೆ ತಂದುಬಿಡುವ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಸಿ ಮಾತನಾಡಿದ ಆಯುಕ್ತರು ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜಿಕರ ದೂರುಗಳು ಹೆಚ್ಚಾಗಿವೆ. ಕೂಡಲೆ ಕ್ರಮ ವಹಿಸಲಯ ವಿಶೇಷ ತಂಡ ರಚನೆ ಮಾಡಿ, ಸಮಸ್ಯೆ ಬಗೆ ಹರಿಸುವ ಭರಸವೆಯನ್ನು ನೀಡಿದರು.
ಮನವಿ ನೀಡುವಾಗ ನಗರ ಸಂಚಾಲಕ ಮಂಗಸಂದ್ರ ನಾಗೇಶ್, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ಮುಳಬಾಗಿಲು ತಾ.ಅದ್ಯಕ್ಷ ಯಲುವಳ್ಳಿ ಪ್ರಬಾಕರ್, ಮಾಲೂರು ತಾ.ಅದ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಮರಗಲ್ ಮುನಿಯಪ್ಪ, ಮೂರಂಡಹಳ್ಳಿ ಶಿವಾರೆಡ್ಡಿ.
