ಶ್ರೀನಿವಾಸಪುರ : ಗುರಿವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಗುರುವಿನ ಗುಲಾಮನಾಗಿ, ಗುರುಗಳು ನೀಡುವ ಮಾರ್ಗದರ್ಶನವನ್ನು ಪಡೆದು ತಮ್ಮ ಜೀವನದ ಗುರಿಯನ್ನು ಸಾಧಿಸುವಂತಾಗಬೇಕು ಎಂದು ಶಿಕ್ಷಕಿ ಲಲಿತಾ ಸಲಹೆ ನೀಡಿದರು.
ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ 1999-2001 ರ ಬ್ಯಾಚ್ನ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾದ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಪನ್ಯಾಸಕಿ ಕೆ.ಜೆ.ರುಕ್ಮುಣಿ ಮತನಾಡಿ ಶಿಕ್ಷಕ ಸಮಾಜದ ಶಿಲ್ಪಿಯಾಗಿದ್ದು, ಯಾವುದೇ ಮೋಹ ಅಥವಾ ಬಂಧನಗಳಿಗೊಳಗಾಗದೇ ಸುಂದರ ಮತ್ತು ಸ್ವಸ್ಥ ಸಮಾಜ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತು ವಿದ್ಯಾರ್ಥಿಗಳಿಂದ ಯಾವುದೇ ಫಲಾಪೇಕ್ಷೆ ಬಯಸದೆ ಉತ್ತಮ ಶಿಕ್ಷಣವನ್ನು ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಸತ್ಪ್ರಜೆಗಳನ್ನು ಕೊಡಿಗೆಯಾಗಿ ನೀಡುತ್ತಿದ್ದಾನೆ . ವಿದ್ಯಾವಂತ ಯುವಕರು ಉನ್ನತ ವಿದ್ಯೆಯೊಂದಿಗೆ , ಉನ್ನತ ಪದವಿಯನ್ನು ಪಡೆದು ತಾವು ಓದಿದ ಶಾಲೆಗೆ ಹಾಗೂ ತಮ್ಮ ಸ್ವಂತ ಗ್ರಾಮದ ಉದ್ದಾರಕ್ಕಾಗಿ ಫಣತೊಡಬೇಕು ಎಂದರು.
ನಿವೃತ್ತ ಉಪನ್ಯಾಸಕ ಎಂ.ವಿ.ಬಷೀರ್ ಮಾತನಾಡಿ ವಿದ್ಯೆ ಅಕ್ಷರ ಜ್ಞಾನ ಮತ್ತು ಪ್ರಮಾಣಪತ್ರ ನೀಡಿದರೆ , ಬುದ್ದಿ ಜೀವನ ನಡೆಸುವುದುನ್ನು ಕಲಿಸುತ್ತದೆ. ಹೀಗಾಗಿ , ವಿದ್ಯಾರ್ಥಿಗಳಿಗೆ ವಿದ್ಯೆ ಮತ್ತು ಬುದ್ದಿ ಎರಡು ಮುಖ್ಯ ಎಂದರು.
ಪ್ರೌಡಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ನಿವೃತ್ತ ಪ್ರಾಂಶುಪಾಲ ಕೆ.ವಿ.ರೆಡ್ಡಪ್ಪ ಉಪನ್ಯಾಸಕರಾದ ಕೆ.ಎನ್.ಲಕ್ಷ್ಮಣರೆಡ್ಡಿ, ಆರ್.ಎಲ್.ಲೋಕೇಶ್ವರಪ್ಪ , ಉಪನ್ಯಾಸಕ ಜಿ.ನರಸಿಂಹರೆಡ್ಡಿ, ಕೆ.ಎನ್.ರಾಮಚಂದ್ರ, ದಿನ್ನೇ ಪಾಪಯ್ಯ ಶೆಟ್ಟಿ, ಲಲಿತಾ, ಅನಿಲ್ಕುಮಾರ್, ವೈ.ಆರ್.ನಾರಾಯಣಸ್ವಾಮಿ, ಹೇಮ, ಕಾಲೇಜಿನ ಸಿಡಿಸಿ ಸದಸ್ಯ ಸಿಮೆಂಟ್ನಾರಾಯಣಸ್ವಾಮಿ, ಪ್ರಾಂಶುಪಾಲೆ ಎಚ್.ಆಶಾ ಮಾತನಾಡಿದರು. ಉಪನ್ಯಾಸಕರಾದ ಎಂ.ಜಿ.ಗಿರೀಶ್, ಆಂಜಪ್ಪ,ಪ್ರೌಡಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಿ.ಪಿ.ರೆಡ್ಡಪ್ಪ, ಮುಖ್ಯ ಶಿಕ್ಷಕ ಶ್ರೀಶೈಲ ಹಲವಾರ್, ಜಿ.ಎಸ್.ನಾರಾಯಣಸ್ವಾಮಿ, ಶಿವಮ್ಮ, ಸಂದ್ಯಾ, ಶಿಲ್ಪ , ಯುಂಗದರ್, ಹಳೇ ವಿದ್ಯಾರ್ಥಿಗಳು ರಘುನಾಥರೆಡ್ಡಿ, ಪ್ರಕಾಶ್, ಉಷಾ, ಎಂ.ಆರ್.ಮಂಜುಳ, ನಾಗರಾಜ್ರೆಡ್ಡಿ ಇತರರು ಇದ್ದರು.