ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ಆ.03: ಮಹಾತ್ಮಗಾಂದಿ ನರೇಗಾ ಯೋಜನೆಯಡಿ ವೈಯಕ್ತಿಕ ನರೇಗಾ ಕಾಮಗಾರಿಗಳ ಅನುದಾನ 2.50 ಲಕ್ಷಕ್ಕೆ ನಿಗದಿ ಮಾಡಿರುವ ಆದೇಶವನ್ನು ವಾಪಸ್ಸು ಪಡೆದು ಪ್ರತಿ ಕುಟಂಬಕ್ಕೆ ಪ್ರತಿ ವರ್ಷ 5 ಲಕ್ಷ ನರೇಗಾ ಕಾಮಗಾರಿಗೆ ಅನುಧಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ ರವರ ಮುಖಾಂತರ ಪಂಚಾಯತ್ ರಾಜ್ಯ ಇಲಾಖೆ ಸಚಿವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಬೆಲೆ ಏರಿಕೆ ಮಾಡುವ ಮುಖಾಂತರ ಬಡವರ ಅನ್ನ ಕಿತ್ತುಕೊಂಡು ನರೇಗಾ ಕಾಮಗಾರಿ ಜೆ.ಸಿ.ಬಿ ಮುಖಾಂತರ ಬಡ ಕೂಲಿ ಕಾರ್ಮಿಕರ ಕೆಲಸ ಕಿತ್ತುಕೊಂಡು ಈಗ ರೈತರ ವೈಯಕ್ತಿಕ ನರೇಗಾ ಕಾಮಗಾರಿ 2.50 ಲಕ್ಷಕ್ಕೆ ನಿಗದಿ ಮಾಡಿ ರೈತರ ಸ್ವಾಭಿಮಾನ ಕಿತ್ತುಕೊಳ್ಳುವ ಕೇಂದ್ರ ಸರ್ಕಾರದಜನವಿರೋದಿ ನೀತಿಗೆ ಜಿಲ್ಲಾ ಪ್ರಧಾನಕಾರ್ಯದರ್ಶಿ ವಕ್ಕಲೇರಿ ಹನುಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ರೇಷ್ಮೇ, ತೋಟಗಾರಿಕೆ ಕೃಷಿ ಹಾಗೂ ಪಂಚಾಯಿತಿ ವ್ಯಾಪ್ತಿಗಳಲ್ಲಿ ರೈತರು ಹೊಲ ಹಾಗೂ ಮತ್ತಿತರ ವೈಯಕ್ತಿಕ ಕಾಮಗಾರಿ ನರೇಗಾ ಹಣವನ್ನು ಜೀವನ ಪೂರ್ತಿ ಒಂದೇ ಕಾಮಗಾರಿ ಒಂದು ಕುಟುಂಬಕ್ಕೆ 2.50 ಲಕ್ಷ ನಿಗದಿ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಭಿಮಾನ ಕಸಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದುಡಿಯುವ ಕೈಗೆ ಕೆಲಸ ಕೊಟ್ಟು ರೇಷ್ಮೆ, ಮತ್ತಿತರ ತೋಟಗಳಲ್ಲಿ ಸ್ವಂತ ಕೆಲಸ ಮಾಡುವ ಮುಖಾಂತರ ಜೀವನ ಮಾಡುವ ರೈತರಿಗೆ ಮಾರಕವಾಗುವ ವೈಯಕ್ತಿಕ ನರೇಗಾ ಕಾಮಗಾರಿ ಹಣ 2.50 ಲಕ್ಷ ಆಧೇಶ ವಾಪಸ್ಸು ಪಡೆದು ಪ್ರತಿ ವರ್ಷ ಪ್ರಿ ಕುಟುಂಬಕ್ಕೆ 5 ಲಕ್ಷ ವೈಯಕ್ತಿಕ ನರೇಗಾ ಕಾಮಗಾರಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹರವರು ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ರಾಮಕೃಷ್ಣಪ್ಪ, ಚೆನ್ನರಾಯಪ್ಪ, ಮುನಿಯಪ್ಪ, ಕಿರಣ್, ಮಂಗಸಂದ್ರ ತಿಮ್ಮಣ್ಣ, ನಾಗೇಶ್ ಮುಂತಾದವರಿದ್ದರು.