ಶ್ರೀನಿವಾಸಪುರ : ಮಣ್ಣಿನ ಫಲವತ್ತಿನ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆದು ಜಮೀನಿನಲ್ಲಿ ಯಾವ ರೀತಿಯಾದ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಮಾಹಿತಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು. ಬೆಳೆಗಳಿಗೆ ಬರುವಂತಹ ರೋಗಗಳಿಗೆ ಯಾವ ರೀತಿಯಾದ ಔಷಧಿ ಸಿಂಪಡನೆ ಮಾಡಬೇಕು ಹಾಗು ಯಾವ ಮಾಡಬೇಕು ಎನ್ನುವುದನ್ನ ಸಲಹೆ ನೀಡಲಾಗುತ್ತದೆ ಕೋಲಾರದ ಟಮಕದ ಕೆವಿಕೆ ಕೃಷಿ ಹವಾಮಾನ ವಿಜ್ಞಾನಿ ಜಿ.ಆರ್. ಸ್ವಾತಿ ಎಂದು ಹೇಳಿದರು.
ತಾಲೂಕಿನ ಲಕ್ಷ್ಮೀಸಾಗರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ 3ನೇ ವಾರ್ಷಿಕ ಮಾಹಾಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಕೋಲಾರ ಟಮಕದಲ್ಲಿನ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಪರೀಕ್ಷೆ, ಕೃಷಿ ಹವಮಾನ ಪರೀಕ್ಷೆ, ಸಸ್ಯ ಪರೀಕ್ಷೆ, ತೋಟಾಗಾರಿಕೆಗೆ ಸಂಬಂದಿಸಿದ ವಿಜ್ಞಾನಿಗಳು ಇರುತ್ತಾರೆ. ಅವರನ್ನ ಸಂರ್ಪಕಿಸಿ ತಮ್ಮ ಕೃಷಿಗೆ ಸಂಬಂದಿಸಿದ ಯಾವುದೇ ಸಮಸ್ಯೆಗಳು ಪರಿಹರಿಸಿಕೊಳ್ಳಬಹುದು ಎಂದರು.
ಸೆಹಗಾಲ್ ಸಂಸ್ಥೆಯ ಸಿನೀಯರ್ ಪ್ರೋಗ್ರಾಮ್ ವ್ಯವಸ್ಥಾಪಕಿ ಶ್ರುಚಿ ಸಿಂಗ್ ಮಾತನಾಡಿ ತಾಲೂಕು ಪ್ರಪಂಚದಲ್ಲಿ ಮಾವು ಬೆಳೆಗೆ ಪ್ರಸಿದ್ಧಿ, ಮಾವು ಬೆಳೆಯ ಜೊತೆಗೆ ಕುರಿ, ಮೇಕೆ ಸಾಗಾಣಿಕೆಯೊಂದಿಗೆ, ಮೊಶ್ರಮ್ ಬೆಳೆ ಬೆಳಯಲು ಸೆಹಗಾಲ್ ಸಂಸ್ಥೆಯ ನಿಮಗೆ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ರೈತ ಉತ್ಪಾದಕರ ಕಂಪನಿಯ ಆಡಳಿತ ಮಂಡಲಿ ಅಧ್ಯಕ್ಷ ಟಿ.ಎಂ.ಶ್ರೀನಿವಾಸಗೌಡ ಮಾತನಾಡಿ 78 ಲಕ್ಷ ವಹಿವಾಟು, ಲಾಭಾಂಶ 1 ಕೋಟಿ 98 ಲಕ್ಷ ಬಂದಿದ್ದು, ನಮ್ಮ ಕೇಂದ್ರದಲ್ಲಿ ನಿಗಧಿತ ಬೆಲೆಗೆ ಗುಣಮಟ್ಟದ ಔಷಧಿಗಳು ಸಿಗುತ್ತದೆ. ಈ ಒಂದು ದೃಷ್ಟಿಯಿಂದ ರೈತರು ಎಫ್ಪಿಓ ಕೇಂದ್ರದಲ್ಲಿ ವ್ಯಾಪಾರ ವಹಿವಾಟು ನಡೆಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಕಡಲೆ ಎಣ್ಣೆ ತೆಗೆಯುವ ಘಟಕವನ್ನು ತೆರೆಯಲಾಗುವುದು ಹಾಗು ಹುಣೆಸೆ ಹಾಗು ಮಾವಿನ ಕಾಯಿ ವಹಿವಾಟು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಸೆಹಗಾಲ್ ಪೌಂಡೇಶನ್ವತಿಯಿಂದ 100 , ಪೌಷ್ಟಿಕಾಂಶಕಿಟ್, 10 ಡ್ರಿಪ್ ಶೆಟ್ ನೀಡಿದರು ಹಾಗು ಕುರಿ ಸಾಗಣಿಕೆದಾರರಿಗೆ 4 ಕುರಿಗಳು , ಜೇನು ಸಾಗಣಿಕೆ ಜೇನು ಪೆಟ್ಟಿಗೆ , 100 ಜನರಿಗೆ ಮಾವು ಮೈಕ್ರೋ ಸೆಟ್ ಉಚಿತವಾಗಿ ನೀಡಿದರು.
ರೈತ ಮುಖಂಡ ವಿ,ಹನುಮೇಗೌಡ, ಉಪಾಧ್ಯಕ್ಷ ಎಲ್.ವಿ.ಸೀನಪ್ಪ, ನಿರ್ದೇಶಕಾರದ ಅಭಿಷೇಕ್ ಪಚಿಸಯ್ಯ, ವೆಂಕಟಮ್ಮ, ಎಸ್.ವಿನಾಯಕ್, ಟಿ.ಕೆ.ರಾಮಚಂದ್ರಗೌಡ, ಎಚ್.ಡಿ.ಸುಷ್ಮಾ, ಡಿ.ಆರ್.ಶಿಲ್ಪಾ, ವಿ.ನಾಗರಾಜಯ್ಯ, ವೇದಾವತಮ್ಮ, ಗಂಗಪ್ಪ, ಸಿಇಓ ವಿ.ಮಂಜುನಾಥ್, ಡಿಇಓ ಆರ್.ಕೌಶಿಕ್, ವೇದಿಕ್ ಅಗ್ರ್ಯಾನಿಕ್ ಅಧಿಕಾರಿ ಟಿ.ಎಂ.ವೀರಭದ್ರಾರೆಡ್ಡಿ, ಕ್ಷೇತ್ರ ತಜ್ಞ ಸೆಹಗಾಲ್ ಸಂಸ್ಥೆಯ ಸಿಬ್ಬಂದಿಗಳಾದ ನೀಮಾ ಜೋಶಿ, ಪ್ರಿಯಾಂಕ, ಚೈತ್ರ, ಶಿವಶರಣಪ್ಪ, ಇಮ್ರಾನ್, ಮಾಲತೇಶ್, ವಿಜಯ್, ನಾಗರಾಜು ಇದ್ದರು.