ಅವಿಭಜಿತ ಜಿಲ್ಲೆಯ 200 ಪ್ಯಾಕ್ಸ್‍ಗಳ ಮೂಲಕ ಜನೌಷಧ ಮಾರಾಟ ಯೋಜನೆ ಜಾರಿಗೆ ಏ.17 ಪೂರ್ವಭಾವಿ ಸಭೆ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಪ್ಯಾಕ್ಸ್‍ಗಳ ಮೂಲಕ ಜನರಿಕ್ ಔಷಧಿಗಳ ಮಾರಾಟಕ್ಕೆ ರಾಜ್ಯ ಸಹಕಾರ ಮಹಾಮಂಡಳ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಮೂಲಕ ಅನುಷ್ಟಾನಗೊಳಿಸುವ ಸಂಬಂಧ ಚರ್ಚಿಸಲು ಏ.17 ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಒಕ್ಕೂಟ, ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ಮೈಕ್ರೋ ಎಟಿಎಂ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಯೂನಿಯನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಭೆಯಲ್ಲಿ ಸಹಕಾರ ಸಚಿವ ಸೋಮಶೇಖರ್, ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷ ರಾಜೀವ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಫ್ಯಾಕ್ಸ್‍ಗಳು ಬಂಡಾವಾಳ ಹಾಕುವಂತಿಲ್ಲ. ಫೆಡ್‍ರೇಷನ್ ಔಷಧಿಗಳನ್ನು ಪೂರೈಕೆ ಮಾಡಿದರೆ ನೀವು ಅದನ್ನು ಜನರಿಗೆ ಮಾರಾಟ ಮಾಡಿದರೆ ನಿಮಗೆ ಶೇ.30 ರಷ್ಟು ಲಾಭಾಂಶ ಸಿಗುತ್ತದೆ ಎಂದರು.
ಜನೌಷಧಿ ಮಳಿಗೆ ಆರಂಭಿಸುವ ಮುನ್ನಾ ಏಪ್ರಿಲ್ 15ರೊಳಗೆ ಅವಿಭಜಿತ ಜಿಲ್ಲೆಯ 200 ಫ್ಯಾಕ್ಸ್‍ಗಳ ಲೆಕ್ಕಪರಿಶೋಧನೆ ಮುಗಿಸರಬೇಕು ಎಂದು ತಾಕೀತು ಮಾಡಿದರು.
ಕಟ್ಟಕಡೆ ಹಳ್ಳಿಗೂ
ಬ್ಯಾಂಕಿಂಗ್ ಸೌಲಭ್ಯ
ಮೈಕ್ರೋಎಟಿಎಂ ಹಾಗೂ ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಅವಿಭಜಿತ ಜಿಲ್ಲೆಯ ಕಟ್ಟಕಡೆಯ ಮನೆಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.
ಮೈಕ್ರೋ ಎಟಿಎಂ ಮೂಲಕ ಪಾರದರ್ಶಕ ವಹಿವಾಟು ಸಾಧ್ಯ, ಇದರಿಂದ ಗ್ರಾಹಕರಾದ ರೈತರು,ಮಹಿಳೆಯರಲ್ಲಿ ಬ್ಯಾಂಕ್,ಸೊಸೈಟಿ ಕುರಿತು ನಂಬಿಕೆ ಬಲಗೊಳ್ಳುತ್ತದೆ ಎಂದು ತಿಳಿಸಿದರು.
ಗಣಕೀಕರಣ, ಎಟಿಎಂ ಮೂಲಕವೇ ಹಣ ವಹಿವಾಟು ನಡೆಸಲು ಬದ್ದತೆ ಇರಲಿ, ನೀವುಮಾಡುವ ಕೆಲಸಕ್ಕೆ ನ್ಯಾಯ ಒದಗಿಸಲು ಆಗದಿದ್ದರೆ ರಾಜೀನಾಮೆ ನೀಡಿ ಹೊರಹೋಗಿ ಎಂದು ತಾಕೀತು ಮಾಡಿದ ಅವರು, ಇ-ಶಕ್ತಿ ಕಾರ್ಯಕ್ರಮದ ಮೂಲಕ ಬಡವರಿಗೆ ಶಕ್ತಿ ತುಂಬಿ ಎಂದರು.
ಹಿರಿಯ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಯಾವೂದೇ ವೃತ್ತಿಯಾದರೂ ಪ್ರಾಮಾಣಿಕತೆ ಮತ್ತು ಬದ್ದತೆ ಇದ್ದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೊ ಡಿಸಿಸಿ ಬ್ಯಾಂಕ್ ಸೌಲಭ್ಯ ತಲುಪಿ9ಸುವ ಕಾರ್ಯದಲ್ಲಿ ಮೈಕ್ರೋ ಎಟಿಎಂ,ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಿರುವ ದೇಶದ ಮೊದಲ ಬ್ಯಾಂಕ್ ನಮ್ಮದು ಎಂದು ಹರ್ಷ ವ್ಯಕ್ತಪಡಿಸಿದರು.
ನಿರ್ದೇಶಕ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕಳೆದ 7 ವರ್ಷಗಳ ಹಿಂದೆ ದಿವಾಳಿಯಾಗಿದ್ದ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಂದು ದೇಶದಲ್ಲಿ ನಂ ಒನ್ ಸಹಕಾರಿ ಬ್ಯಾಂಕ್ ಆಗಿದೆ, ಇದರಲ್ಲಿ ಅಧ್ಯಕ್ಷರಾದ ಬ್ಯಾಲಹಳ್ಳಿಗೌಡರ ಅಪಾರ ಶ್ರಮ ಅಡಗಿದೆ. ದಿವಾಳಿಯಾಗಿದ್ ಬ್ಯಾಂಕ್ ಇಷ್ಟೊಂದು ಪ್ರವರ್ಧಮಾನಕ್ಕೆ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ಮತ್ತು ಸೊಸೈಟಿಗಳು ಕೇವಲ ಪಡಿತರ ಮತ್ತು ಗೊಬ್ಬರ ಮಾರಾಟಕ್ಕೆ ಸೀಮಿತವಾಗಿತ್ತು. ಇದೀಗ 7 ಲಕ್ಷ ಮಹಿಳೆಯರು,ರೈತರಿಗೆ ಸಾಲ ನೀಡುವ ಶಕ್ತಿ ಪಡೆದುಕೊಂಡಿವೆ, ಠೇವಣಿ ಸಂಗ್ರಹಕ್ಕೆ ನೀಡಿರುವ ಗುರಿ ಸಾಧಿಸಿ ಕನಿಷ್ಟ 500 ಕೋಟಿ ಮಾರ್ಚ್ ಅಂತ್ಯದ ವೇಳೆಗೆ ಸಂಗ್ರಹಿಸಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ, ಮೈಕ್ರೋ ಎಟಿಎಂ ಮೂಲಕ ರಾಜ್ಯದ ನಂ.1 ಬ್ಯಾಂಕ್ ಆಗಿಸಿದ್ದೀರಿ ಎಂದು ಅಭಿನಂದಿಸಿ, ಸಹಕಾರ ಸಂಘಗಳ ಬೆಳೆವಣಿಗೆಯಲ್ಲಿ ಸೊಸೈಟಿಗಳ ಸಿಇಒಗಳ ಜವಾಬ್ದಾರಿ ಹೆಚ್ಚು, ನಿಮಗೆ ಬದ್ದತೆ, ಇಚ್ಚಾಶಕ್ತಿ ಇದ್ದರೆ ಮಾತ್ರ ಸೊಸೈಟಿ ಉಳಿಸಲು ಸಾಧ್ಯ ಎಂದು ತಿಳಿಸಿ, ಮೈಕ್ರೋ ಎಟಿಎಂ ತಂತ್ರಾಂಶ ತರಬೇತಿಯ ಲಾಭ ಪಡೆಯಿರಿ ಎಂದು ಕರೆ ನೀಡಿದರು.
ಬೆಂಗಳೂರಿನ ಇಂಟೆಗ್ರಾ ಸಲ್ಯೂಷನ್ ಕಂಪನಿ ಸಂಪನ್ಮೋಲ ವ್ಯಕ್ತಿ ಎನ್. ಮೋಹನ್ ಅವರು ಮೈಕರೋ ಎ.ಡಿ.ಎಂ. ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅರ್ಜಿಯ ನಿರ್ವಾಹಣೆ ಕುರಿತು. ಹೈದರಾಬಾದ್ ಲಿಂಕ್‍ವೆಲ್ ಟೆಲಿ ಸಿಸ್ಟಂನ ಸಂಪನ್ಮೋಲ ವ್ಯಕ್ತಿ ಅನಿಲ್ ಕುಮಾರ್ ಅವರು ಮೈಕ್ರೋ ಎ.ಟಿ.ಎಂ. ತಂತ್ರಾಂಶಕ್ಕೆ ಸಂಬಂಧಿಸಿದಂತೆ ಹಾರ್ಡ್‍ವೇರ್ ನಿರ್ವಹಣೆ ಕುರಿತು ತರಭೇತಿಯ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ವಿ.ಗೋವರ್ಧನರೆಡ್ಡಿ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಚೆಂಜಿಮಲೆ ಬಿ.ರಮೇಶ್, ಎನ್. ಶಂಕರನಾರಾಯಣಗೌಡ, ಎನ್.ನಾಗರಾಜ್, ವಿ.ರಘುಪತಿ ರೆಡ್ಡಿ, ಪಿ.ಎಂ. ವೆಂಕಟೇಶ್, ಟಿ.ಕೆ. ಬೈರೇಗೌಡ, ಕೆ.ಎಂ. ಮಂಜುನಾಥ್, ಆರ್. ಅರುಣಾ, ಎನ್. ವೆಂಕಟೇಶ್ , ಡಿಸಿಸಿ ಬ್ಯಾಂಕ್ ಎಜಿಎಂ ಶಿವಕುಮಾರ್ ಹಾಗೂ ಒಕ್ಕೂಟದ ಸಿಇಒ ಕೆ.ಎಂ.ಭಾರತಿ, ಸಿಬ್ಬಂದಿ ರವಿ ಮತ್ತಿತರರಿದ್ದರು
.