ಕೋಲಾರ:- ಜಿಲ್ಲಾದ್ಯಂತ ಒಟ್ಟು 19 ಕೇಂದ್ರಗಳಲ್ಲಿ ಮೊದಲ ದಿನದ 2024ರ ಸಾಮಾನ್ಯ ಪ್ರವೇಶ ಪರೀಕ್ಷೆ ಸುಗಮವಾಗಿ ನಡೆದಿದ್ದು, ಗುರುವಾರ ಬೆಳಗ್ಗೆ ಜೀವಶಾಸ್ತ್ರ ವಿಷಯಕ್ಕೆ 1413 ಮಂದಿ ಹಾಗೂ ಮಧ್ಯಾಹ್ನ ಗಣಿತಶಾಸ್ತ್ರ ವಿಷಯಕ್ಕೆ 438 ಮಂದಿ ಗೈರಾಗಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಾಗಿಲ್ಲ ಮತ್ತು ಜಿಲ್ಲಾಧಿಕಾರಿಗಳು ಕೇಂದ್ರಗಳಿಗೆ ವೀಕ್ಷಣೆ ಮಾಡಿ ಪರಿಶೀಲಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಜೀವಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 8325 ಮಂದಿ ಹೆಸರು ನೋಂದಾಯಿಸಿದ್ದು, ಅವರಲ್ಲಿ 6912 ಮಂದಿ ಹಾಜರಾಗುವ ಮೂಲಕ 1413 ಮಂದಿ ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಗುರುವಾರ ಮಧ್ಯಾಹ್ನ ನಡೆದ ಗಣಿತ ವಿಷಯದ ಪರೀಕ್ಷೆಗೆ ಒಟ್ಟು 8325 ಮಂದಿ ಹೆಸರು ನೋಂದಾಯಿಸಿದ್ದು, 7887 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಮತ್ತು 438 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ಕೋಲಾರದ 17ಕೇಂದ್ರಗಳು ಹಾಗೂ ಕೆಜಿಎಫ್ನ 2 ಕೇಂದ್ರಗಳಲ್ಲಿ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಾಗಿಲ್ಲ ಎಂದು ತಿಳಿಸಿರುವ ಅವರು, ಇಲಾಖೆಯಿಂದ ಪರೀಕ್ಷೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಕಲ ಸಿದ್ದತೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಕೇಂದ್ರವಾರು ಹಾಜರಾತಿ ವಿವರ
ಕೋಲಾರ ನಗರದ ಅಲ್ಅಮೀನ್ ಪಿಯು ಕಾಲೇಜಿನಲ್ಲಿ 384 ಮಂದಿ ಹೆಸರು ನೋಂದಾಯಿಸಿದ್ದು, ಅವರ ಪೈಕಿ327 ಮಂದಿ ಹಾಜರಾಗಿ 57 ಮಂದಿ ಗೈರಾಗಿದ್ದಾರೆ. ಕೆಜಿಎಫ್ ಪಿಯು ಕಾಲೇಜಿನಲ್ಲಿ 576 ಮಂದಿ ನೋಂದಾಯಿಸಿದ್ದು, 445 ಮಂದಿ ಹಾಜರಾಗಿ 131 ಮಂದಿ ಗೈರಾಗಿದ್ದಾರೆ.
ರಾಬರ್ಟ್ಸನ್ ಪೇಟೆ ಕಾಲೇಜಿನಲ್ಲಿ 336 ಮಂದಿ ನೋಂದಾಯಿಸಿದ್ದು, 250 ಮಂದಿ ಹಾಜರಾಗಿ 86 ಮಂದಿ ಗೈರಾಗಿದ್ದಾರೆ. ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೇಂದ್ರದಲ್ಲಿ 504 ಮಂದಿ ನೋಂದಾಯಿಸಿದ್ದು, 420 ಮಂದಿ ಹಾಜರಾಗಿ 84 ಮಂದಿ ಗೈರಾಗಿದ್ದಾರೆ.
ಗೋಕುಲ ಸ್ವತಂತ್ರ್ಯ ಪಿಯು ಕಾಲೇಜಿನಲ್ಲಿ 480 ಮಂದಿ ನೋಂದಾಯಿಸಿದ್ದು,399 ಮಂದಿ ಹಾಜರಾಗಿ 81 ಮಂದಿ ಗೈರಾಗಿದ್ದಾರೆ. ಮಹಿಳಾ ಸಮಾಜ ಪಿಯು ಕಾಲೇಜಿನ ಕೇಂದ್ರದಲ್ಲಿ 595 ಹೆಸರು ನೋಂದಾಯಿಸಿದ್ದು, 497 ಮಂದಿ ಹಾಜರಾಗಿ 98 ಮಂದಿ ಗೈರಾಗಿದ್ದಾರೆ.
ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 528 ಹೆಸರು ನೋಂದಾಯಿಸಿದ್ದು, 440 ಮಂದಿ ಹಾಜರಾಗಿ 88ಮಂದಿ ಗೈರಾಗಿದ್ದಾರೆ.ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ 504 ಮಂದಿ ನೋಂದಾಯಿಸಿದ್ದು, 420 ಮಂದಿ ಹಾಜರಾಗಿ 84 ಮಂದಿ ಗೈರಾಗಿದ್ದಾರೆ. ನೂತನ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 312 ಮಂದಿ ಹೆಸರು ನೋಂದಾಯಿಸಿದ್ದು, 256 ಮಂದಿ ಹಾಜರಾಗಿ 65 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆದರ್ಶ ಪಿಯು ಕಾಲೇಜಿನಲ್ಲಿ 240 ಮಂದಿ ನೋಂದಾಯಿಸಿದ್ದು, 199 ಮಂದಿ ಹಾಜರಾಗಿ 41 ಮಂದಿ ಗೈರಾಗಿದ್ದಾರೆ. ಸಹ್ಯಾದ್ರಿ ಪಿಯು ಕಾಲೇಜು ಕೇಂದ್ರದಲ್ಲಿ 601 ನೋಂದಾಯಿಸಿದ್ದು, 521 ಮಂದಿ ಹಾಜರಾಗಿ 80 ಮಂದಿ ಗೈರಾಗಿದ್ದಾರೆ. ಎನ್.ಎಂ.ಜೆ ಪಿಯು ಕಾಲೇಜಿನಲ್ಲಿ 360 ಮಂದಿ ನೋಂದಾಯಿಸಿದ್ದು, 321 ಮಂದಿ ಹಾಜರಾಗಿ 39 ಮಂದಿ ಗೈರಾಗಿದ್ದಾರೆ. ಎಸ್ಎಫ್ಎಸ್ ಪಿಯು ಕಾಲೇಜಿನಲ್ಲಿ 528 ಮಂದಿ ನೋಂದಾಯಿಸಿದ್ದು, 435 ಮಂದಿ ಹಾಜರಾಗಿ 93 ಮಂದಿ ಗೈರಾಗಿದ್ದಾರೆ.
ಎಕ್ಸಲೆಂಟ್ ಪಿಯು ಕಾಲೇಜು ಕೇಂದ್ರದಲ್ಲಿ 288 ಮಂದಿ ನೋಂದಾಯಿಸಿದ್ದು, 244 ಮಂದಿ ಹಾಜರಾಗಿ 44 ಮಂದಿ ಗೈರಾಗಿದ್ದಾರೆ. ಸರ್ಕಾರಿ ಮಹಿಳಾ ಕಾಲೇಜು ಕೇಂದ್ರದಲ್ಲಿ 504 ಮಂದಿ ಹೆಸರು ನೋಂದಾಯಿಸಿದ್ದು,410 ಮಂದಿ ಹಾಜರಾಗಿ 94 ಮಂದಿ ಗೈರಾಗಿದ್ದದಾರೆ. ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ504 ಮಂದಿ ನೋಂದಾಯಿಸಿದ್ದು, 405 ಮಂದಿ ಹಾಜರಾಗಿ 99 ಮಂದಿ ಗೈರಾಗಿದ್ದಾರೆ.
ಮದರ್ ತೆರೇಸಾ ಪಿಯು ಕಾಲೇಜಿನಲ್ಲಿ 480 ಮಂದಿ ಹೆಸರು ನೋಂದಾಯಿಸಿದ್ದು, 402 ಮಂದಿ ಹಾಜರಾಗಿ 78 ಮಂದಿ ಗೈರಾಗಿದ್ದಾರೆ. ನಾರಾಯಣ ಪಿಯು ಕಾಲೇಜಿನಲ್ಲಿ 288 ಮಂದಿ ಹೆಸರು ನೋಂದಾಯಿಸಿದ್ದು, 252 ಮಂದಿ ಹಾಜರಾಗಿ36 ಮಂದಿ ಗೈರಾಗಿದ್ದಾರೆ. ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ 553 ಮಂದಿ ಹೆಸರು ನೋಂದಾಯಿಸಿದ್ದು, 466 ಮಂದಿ ಹಾಜರಾಗಿ 87 ಮಂದಿ ಗೈರಾಗಿದ್ದಾರೆ. ಆರ್.ವಿ.ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ 264 ಮಂದಿ, ಆರ್.ವಿ.ಇಂಟರ್ ನ್ಯಾಷನಲ್ ಶಾಲೆಯಲ್ಲಿ 264 ಮಂದಿ ಹೆಸರು ನೋಂದಾಯಿಸಿದ್ದು, 223 ಮಂದಿ ಹಾಜರಾಗಿ 41 ಮಂದಿ ಗೈರಾಗಿದ್ದಾರೆ.
ಏ.19 ರಂದು ಶುಕ್ರವಾರ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.