ವರದಿ: ರಮೇಶ್ ವಕ್ವಾಡಿ
ಸಾಸ್ತಾನ,ಹಂಗಾರಕಟ್ಟೆ: ಜೈವಿಕವಾದ ಕೆಲವೇ ಕೆಲವು ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಮಹಿಳೆಯರು ಮತ್ತು ಪುರುಷರ ನಡುವೆ ಯಾವ ಭಿನ್ನತೆಯೂ ಇಲ್ಲ. ಆದರೆ ಪಕ್ಷಪಾತದಿಂದ ಕೂಡಿದ ಸಾಮಾಜಿಕ ದೃಷ್ಟಿಯ ಕಾರಣದಿಂದ ಮಹಿಳೆಯರು ಮತ್ತು ಪುರುಷರ ನಡುವೆ ಭೇದ ಉಂಟು ಮಾಡಿ ಅವರನ್ನು ಕೀಳಾಗಿ ಪರಿಗಣಿಸಿ ಅನ್ಯಾಯ ಮಾಡಲಾಗಿದೆ. ಸಮಾಜದಲ್ಲಿ ಮಹಿಳೆಯರ ಬದುಕು ಉತ್ತಮಗೊಳ್ಳಬೇಕಾದರೆ ಮಹಿಳೆಯರ ಬಗೆಗಿನ ಆಲೋಚನೆಗಳು ರೂಢಿಗೃತ ದೃಷ್ಟಿ ಕೋನ ಬದಲಾಗಬೇಕೆಂದು ರೊ|| ಕೆ. ಆರ್ ನಾಯ್ಕ್ ಸೂಪರ್‍ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್, ಹಂಗಳೂರು ಇವರು ಹೇಳಿದರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಇದರ 12ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಲಿಂಗ ಸೂಕ್ಷ್ಮತೆ ಮಾಹಿತಿ ಕಾರ್ಯಗಾರ ಹಾಗೂ ಕಲಾಕುಸುಮ ಪ್ರಶಸ್ತಿ ಪ್ರದಾನ ಮಾಡಿ, ಹುಡುಗಿಯ ದೇಹವನ್ನು ಹೊಂದಿದಾಕ್ಷಣ ಮನೆಯ ಕೆಲಸ ಇತರರ ಬಗೆಗಿನ ಕಾಳಜಿ, ಪ್ರತಿ ಸಂದರ್ಭದಲ್ಲೂ ಹೊಂದಾಣಿಕೆ ಮನೋಭಾವ ಇರಬೇಕೆಂದು ಬಯಸುವುದು. ಅದೇ ರೀತಿ ಹುಡುಗನ ದೇಹ ಹೊಂದಿದ ಮಾತ್ರಕ್ಕೆ ಬುದ್ಧಿವಂತಿಕೆ, ಶಕ್ತಿ, ಧೈರ್ಯಗಳು ಎಂದು ಖಾತರಿಸಿಕೊಳ್ಳುವುದು ಬೇಕಾಗಿಲ್ಲ. ಈ ಎಲ್ಲಾ ಗುಣಗಳನ್ನು ಬೆಳೆಸುವ ವಿಧಾನ ಮತ್ತು ಅವರು ಹೇಗೆ ಬೆಳೆಯುತ್ತಾರೆ ಎಂದು ನಿರ್ಣಯಿಸುತ್ತದೆ ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ಶ್ರೀಮತಿ ರೊ| ಯಶೋದ ಹೊಳ್ಳ, ಅಧ್ಯಕ್ಷರು ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ಇವರು ನಿರ್ವಹಿಸಿ ಲಿಂಗತ್ವ, ಲಿಂಗ ಸಮಾನತೆಯನ್ನು ರೂಢಿಗಿಂತ ಭಿನ್ನವಾಗಿ ನೋಡಿ ಗಂಡು ಹೆಣ್ಣು ಎರಡು ಒಂದೇ ನಾಣ್ಯದ 2 ಮುಖಗಳು ಎಂದು ಪ್ರತಿಪಾದಿಸಿ ಪ್ರತಿಯೊಬ್ಬರನ್ನು ಅವರವರ ಪಾತ್ರಗಳನ್ನು ಪ್ರತಿಭೆಗಳನ್ನು ಗುರುತಿಸಲು ಮತ್ತು ತಮ್ಮದೇ ಆದ ಬದುಕನ್ನು ಹೊಂದಲು ಹಕ್ಕು ಮತ್ತು ಸ್ವಾತಂತ್ರಗಳಿರುವ ಸಮಾಜ ನಿರ್ಮಾಣವಾಗಬೇಕೆಂದು ಕರೆ ನೀಡಿದರು. ಇಂತಹ ಮಾಹಿತಿ ಶಿಬಿರಗಳಿಂದ ಮುಂದೆ ಆಗುವ ಅನಾಹುತವನ್ನು ತಪ್ಪಿಸಲು, ಹೆಣ್ಣನ್ನು ಹೆಣ್ಣೆಂದು ಪರಿಗಣಿಸಿ ಬ್ರೂಣಾವಸ್ಥೆಯಲ್ಲಿ ಕೊಲ್ಲುವ ಕಟುಕರಿಗೆ ಲಿಂಗ ಸೂಕ್ಷ್ಮತೆ ಅರ್ಥವಾಗಬೇಕಾಗಿದೆ, ಅಲ್ಲದೇ ಸಮಾಜದಲ್ಲಿ ಗಂಡು-ಹೆಣ್ಣುಗಳ ಅನುಪಾತ ವ್ಯತಿರಿಕ್ತವಾದಾಗ ಹೆಣ್ಣು ಮಕ್ಕಳ ಅಸ್ತಿತ್ವ ತುಂಬಾ ಅಪಾಯಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಲಕ್ಷ್ಮೀನಾರಾಯಣ ಭಟ್ ಅಧೀಕ್ಷಕರು ಸರ್ವೇ ಇಲಾಖೆ (ನಿವೃತ್ತ) ಇವರು ಮಾತಾಡಿ ಗಂಡಸರು ಮತ್ತು ಮಹಿಳೆಯ ಬಗೆಗಿನ ಈ ಸಾಮಾಜಿಕ ಮತ್ತು ಸಾಂಸ್ಕøತಿಕ ವ್ಯಾಖ್ಯೆಗಳನ್ನು ಲಿಂಗತ್ವ ಎನ್ನುತ್ತಾರೆ. ಈ ಲಿಂಗತ್ವ ತಾರತಮ್ಯಗಳನ್ನು ನಿರ್ಮಿಸಿದ್ದು ಪ್ರಕೃತಿಯಲ್ಲ ಬದಲಾಗಿ ಸಮಾಜ. ಅಲ್ಲದೇ ಪ್ರತಿಯೊಬ್ಬರಲ್ಲಿ ಒರ್ವ ಗಂಡಸಿದ್ದಾನೆ ಮತ್ತು ಓರ್ವ ಹೆಂಗಸಿದ್ದಾಳೆ. ಆದರೆ ಹುಡುಗಿಯಲ್ಲಿ ಪುರುಷತ್ವವನ್ನು ಅಥವಾ ಹುಡುಗನಲ್ಲಿ ಸ್ತ್ರೀತ್ವವನ್ನು ಬೆಳೆಯಲು ಸಮಾಜವು ಬಿಡುವುದಿಲ್ಲ. ಎಂದು ಕರೆ ನೀಡಿದರು.
ಸಭೆಯಲ್ಲಿ ಶ್ರೀ ಪ್ರಭಾಕರ ಆಚಾರ್ಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಉಡುಪಿ ಜಿಲ್ಲಾ ಪಂಚಾಯತ್ ಮಣಿಪಾಲ ಹಾಗೂ ಕಲಾ ಕುಸುಮ ಪ್ರಶಸ್ತಿ ಪುರಸ್ಕøತರಾದ ಶ್ರೀ ಮಾರಾಳಿ ಪ್ರಭಾಕರ ಶೆಟ್ಟಿ, ಅಭಿವೃದ್ಧಿ ಸಂಸ್ಥೆ (ರಿ) ಇದರ ಕಾರ್ಯದರ್ಶಿ ಶ್ರೀ ರಮೇಶ್ ವಕ್ವಾಡಿ ಸಂಪನ್ಮೂಲ ವ್ಯಕ್ತಿ, ಶ್ರೀಮತಿ ಡಾ|| ನಿಕೇತನ, ಪ್ರಾಂಶು ಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಇವರು ಉಪಸ್ಥಿತರಿದ್ದರು. ಶ್ರೀ ರಮೇಶ ವಕ್ವಾಡಿ ಪ್ರಾಸ್ತ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಮೋಹನ್ ಉದ್ಯಾವರ ನಿರೂಪಿಸಿದರು. ಕು|| ಶ್ರೀ ರಕ್ಷಾ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಲಿಂಗ ಸೂಕ್ಷ್ಮತೆ ಬಗ್ಗೆ ಡಾ|| ನಿಕೇತನ, ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ವಿಶೇಷ ಉಪನ್ಯಾಸ ನೀಡಿ ಸಂವಾದ ನಡೆಸಿದರು.