ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿಯವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನಪರಿಷತ್ ಚುನಾವಣೆಯ ಅಬ್ಯರ್ಥಿ ವಕ್ಕಲೇರಿ ರಾಮು ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಾರೆ ಹಾಗಾಗಿ ಗ್ರಾಮ ಪಂಚಾಯಿತಿ ಅದ್ಯಕ್ಷರು, ಉಪಾದ್ಯಕ್ಷರು, ಸದಸ್ಯರು ಮತ್ತು ಪುರಸಭೆ ಸದಸ್ಯರು ಒಮ್ಮತದಿಂದ ನಮ್ಮ ಜೆಡಿಎಸ್ ಪಕ್ಷದ ಅಬ್ಯರ್ಥಿಯನ್ನು ಬಾರೀ ಬಹುಮತದಿಂದ ಗೆಲ್ಲಿಸುವುದರ ಮೂಲಕ ವರಿಷ್ಠರ ವಿಶ್ವಾಸವನ್ನು ಉಳಿಸುವ ಕೆಲಸ ನಾವೆಲ್ಲರೂ ಮಾಡಬೇಕೆಂದು ಜೆಡಿಎಸ್ ಜಿಲ್ಲಾದ್ಯಕ್ಷ ಹಾಗು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಪ್ರಯುಕ್ತ ತಾಲ್ಲೂಕಿನ ರಾಯಲ್ಪಾಡು, ಲಕ್ಷ್ಮೀಪುರ, ರೋಣೂರು ಹಲವು ಬಾಗಗಳಲ್ಲಿ ಚುನಾವಣಾ ಪ್ರಚಾರ ಮುಗಿಸಿ ನಂತರ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜಿ.ಕೆ ವೆಂಕಟಶಿವಾರೆಡ್ಡಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಜೆಡಿಎಸ್ ಪಕ್ಷದ ವರಿಷ್ಠರ ವಿಶ್ವಾಸ ನಂಬಿಕೆಗೆ ದಕ್ಕೆ ಬಾರದಂತೆ ಚುನಾವಣೆಯ ಉರಿಯಾಳು, ಸರಳ ಸಜ್ಜನಿಕೆ ಗೌವರಸ್ಥ ಅಬ್ಯರ್ಥಿ ವಕ್ಕಲೇರಿ ರಾಮು ಇವರಿಗೆ ನಮ್ಮ ಕ್ಷೇತ್ರದ ಮತದಾರರು ಕೆಲಸಮಾಡಬೇಕಾಗಿದೆ, ಕುಮಾರಸ್ವಾಮಿಯವರ ಮುಖ್ಯ ಮಂತ್ರಿ ಆಡಳಿತ ಅವದಿಯಲ್ಲಿ ರಾಜ್ಯದಲ್ಲಿ ಮಾಡಿರುವ ಜನಪರ ಆಡಳಿತ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯದ ಮುಂದಿನ ರಾಜಕೀಯ ಬದಲಾವಣೆ ಪರ್ವಕ್ಕೆ ಬುನಾದಿಯಾಗಿ ನೀವೂ ನಾವೆಲ್ಲರೂ ಪಕ್ಷಾತೀತವಾಗಿ ನಮ್ಮ ಅಬ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.
ದೇವೇಗೌಡರು ಚಿಕ್ಕಬಳ್ಳಾಪುರ ಚಿಂತಾಮಣಿ ಇಂದು ಚುನಾವಣಾ ಪ್ರಚಾರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಶುಕ್ರವಾದದಂದು ಕುಮಾರಸ್ವಾಮಿ ಯವರು ಕೋಲಾರ, ಮುಳಬಾಗಿಲು ಸೇರಿದಂತೆ ವಿವಿಧ ಬಾಗಗಳಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದು ನೀವೂ ನಾವೆಲ್ಲರೂ ಹಾಜರಿದ್ದು ಪಕ್ಷದ ಗೆಲುವಿಗೆ ಕೆಲಸ ಮಾಡೋಣ ಎಂದರು.
ಇದೇ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷೆ ಚೌಡೇಶ್ವರಿ ರಾಮು ಮಾತನಾಡಿ ನಾವು ಜಿಲ್ಲಾ ಪಂಚಾಯಿತಿ ಅದ್ಯಕ್ಷರ ಆಡಳಿತ ಅವದಿಯಲ್ಲಿ ಅನೇಕ ಜನಪರ ಆಡಳಿತ ಸೇವೆಗಳನ್ನು ಮಾಡಿದ್ದೇವೆ ಇಂದು ನಮ್ಮನ್ನು ಗುರುತಿಸಿ ಎರಡೂ ಜಿಲ್ಲೆಗಳ ಜೆಡಿಎಸ್ ಪಕ್ಷದ ಮುಖಂಡರ ಕಾರ್ಯಕರ್ತರ ಸಹಕಾರದಿಂದ ವಿದಾನ ಪರಿಷತ್ ಚುನಾವಣೆ ಸ್ಪರ್ದೆಯಲ್ಲಿ ನಿಲ್ಲಲು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗಾಗಿ ಮತದಾರರು ಆಶೀರ್ವಾದ ಮಾಡಿ ರಾಜ್ಯದಲ್ಲಿ ಮತ್ತೊಮ್ಮೆ ಜನಸೇವೆ ಮಾಡಲು ಅವಕಾಶವನ್ನು ಮಾಡಿಕೊಡಲು ವಿನಂತಿಸಿ ಮತಚಲಾಯಿಸುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಕೋವಿಡ್ ಎರಡು ಲಸಿಕೆಯನ್ನು ಪಡೆದು ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಪಾಲಿಸಿ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ಮಾಡಿಕೊಡಲು ಕೋರಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಪುರಸಬಾ ಅದ್ಯಕ್ಷಣಿ ಲಲಿತ ಶ್ರೀನಿವಾಸ್, ಜೆಡಿಎಸ್ ನ ರಾಜ್ಯ ಪ್ರದಾನ ಕಾರ್ಯದರ್ಶಿ ಬಿ.ವಿ ಶಿವಾರೆಡ್ಡಿ, ಜಿಲ್ಲಾ ಪಂ ಮಾಜಿ ಸದಸ್ಯ ರಾಜಣ್ಣ, ಪುರಸಭಾ ಉಪಾದ್ಯಕ್ಷಿಣಿ ಆಯಿಶಾ ನಯಾಜ್, ಪುರಸಭೆ ಹಿರಿಯ ಸದಸ್ಯ ಬಿ.ವಿ ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇ ಪೇಟೆ ಮಂಜುನಾಥ ರೆಡ್ಡಿ, ಪೂಲು ಶಿವಾರೆಡ್ಡಿ, ಕಾರ್ ಬಾಬು, ಡಿ.ವಿ.ಎಸ್ ಮಂಜು ಇನ್ನಿತರರು ಉಪಸ್ಥಿತರಿದ್ದರು.