ಟೆಲ್ ಅವೀವ್: ಯುದ್ಧದಿಂದ ಹಾನಿಗೊಳಗಾದ ಪ್ಯಾಲೆಸ್ಬೀನಿಯನ್ ಪ್ರದೇಶದ ಉತ್ತರದಲ್ಲಿರುವ ತನ್ನ ಮನೆಯಿಂದ 5 ಕಿಮೀ ದೂರದಲ್ಲಿರುವ
ದಕ್ಷಿಣ ಗಾಜಾದ ಆಸ್ಪತ್ರೆಗೆ ನಡೆದುಕೊಂಡು ಹೋಗಿ ಮಹಿಳೆಯೊಬ್ಬಳು 4 ಮಕ್ಕಳಿಗೆ ಜನ್ಮನೀಡಿರುವ ಘಟನೆ ನಡದಿದೆ.
ಇಮಾನ್ ಅಲ್-ವಸ್ರಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ಮಹಿಳೆಯ ಹೆಸರು. ಮಹಿಳೆಯು ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿದ್ದರು. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ಸಂದರ್ಭದಲ್ಲಿ ಅವರು ನಡೆದುಕೊಂಡು ಹೋಗಿದ್ದಾರೆ.
ಹಾಗೇಯೆ ಯುದ್ಧದಿಂದಾಗಿ ಇತರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸ್ಥಳಾವಕಾಶ ಕಲ್ಪಿಸಲು, ಮಹಿಳೆಯು ನವಜಾತ ಶಿಶುಗಳೊಂದಿಗೆ ಆಸ್ಪತ್ರೆಯನ್ನು ತೊರೆದಿದ್ದಾರೆ. ಸದ್ಯ ಇಮಾನ್ ಅವರು ಡೀರ್ ಅಲ್-ಬಾಲಾಹ್ನಲ್ಲಿ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ಜನ್ಮನೀಡಿದ ನಾಲ್ಕರಲ್ಲಿ ಮೂರು ಮಕ್ಕಳು ಆರೋಗ್ಯವಾಗಿವೆ. ಮತ್ತೊಂದು ಮಗುವಿನ ತೂಕ ಕಡಿಮೆ ಇರುವುದರಿಂದ ಆ ಮಗು ಬದುಕುಳಿಯಲು ಸಾಧ್ಯವಿಲ್ಲ’ ಎಂದು ವೈದ್ಯರು ತಿಳಿಸಿದ್ದರಿಂದ, ಆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಮಹಿಳೆ ಹೋಗಿದ್ದಾರೆ.