ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿಯನ್ನು ಬುಧವಾರ ಮತ ಎಣಿಕೆ ಕೇಂದ್ರದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೆಂಕಟರವಣಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮಶೇಖರ್ ತಲಾ ೪೯೯ ಮತಗಳನ್ನು ಪಡೆದರು. ಆಗ ಮತ ಎಣಿಕೆ ಸಿಬ್ಬಂದಿ ಲಾಟರಿ ಎತ್ತಿದಾಗ ವೆಂಕಟರವಣಪ್ಪ ಗೆಲುವು ಸಾಧಿಸಿದರು.
ಶ್ರೀನಿವಾಸಪುರದಲ್ಲಿ ಬುಧವಾರ ಗೆಲುವು ಸಾಧಿಸಿದ ಕತ್ತಿಬೀಸನಹಳ್ಳಿ, ಮಜರಾ ಶೆಟ್ಟಿಹಳ್ಳಿ ಗ್ರಾಮದ ಅಭ್ಯರ್ಥಿಗಳಾದ ಅನಂತರೆಡ್ಡಿ ಹಾಗೂ ವೆಂಕಟಲಕ್ಷö್ಮಮ್ಮ ಬೆಂಬಲಿಗರೊAದಿಗೆ ವಿಜಯೋತ್ಸವ ಆಚರಿಸಿದರು.