ಕುಂದಾಪುರ, ಜು.12: ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ಕಥೊಲಿಕ್ ಸಭಾ ಘಟಕ ಹಾಗೂ ಪರಿಸರ ಆಯೋಗದಿಂದ ಜುಲಾಯ್ 7 ರಂದು ವನಮಹೋತ್ಸವವನ್ನು ಆಚರಿಸಲಾಯಿತು.
ಸಾಂಕೇತಿಕವಾಗಿ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ತೊಮಸ್ ರೋಶನ್ ಡಿಸೋಜಾ, ಚರ್ಚಿನ ವಠಾರದಲ್ಲಿ ಗೀಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ವನಮಹೋತ್ಸವದ ಪ್ರಾಮುಖ್ಯತೆಯನ್ನು ತಿಳಿಸಿದರು. ನಂತರ ಸಾರ್ವಜನಿಕ ಸ್ಥಳದ ಸಮುದ್ರ ತೀರದಲ್ಲಿ ಸುಮಾರು 70 ಗಾಳಿ ಮರದ ಗೀಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.
ಬೈಂದೂರು ವಿಭಾಗದ ಸಹಾಯಕ ಅರಣ್ಯಾ ಇಲಾಖಾ ಅಧಿಕಾರಿ ಕೆ.ಸದಾಶಿವ ಇವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಥೊಲಿಕ್ ಸಭೆಯ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ವಿಲ್ಸನ್ ಡಾಯಸ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಆಯೋಗದ ಸಂಚಾಲಕರಾದ ಶಲೀರಾ ರೆಬೇರೊ ವಂದಿಸಿದರು.