ಕುಂದಾಪುರ,ಡಿ.6: ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಡಿ.3 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.
ಈ ಪೂಜಾ ವಿಧಿಯನ್ನು ವಂ|ಸಿರಿಲ್ ಲೋಬೊ ನಡೆಸಿಕೊಟ್ಟು “ ನಾವು ಇನ್ನೊಬರ ಸಂತೋಷಕ್ಕಾಗಿ ಜೀವಿಸುವುದೆ ಜೀವನ, ಅಮೊಲ್ದಭವಿ ಮಾತೆ (ಕೊಸೆಸಾಂವ್) ಮಾತೆ ಸೇವೆಯ ದಾಸಿ, ಅವಳು ಸೇವೆಯ ಪ್ರತೀಕಳಾಗಿದ್ದಾಳೆ, ಮದರ್ ತೆರೆಸಾ ಕೂಡ ಇನ್ನೊಬ್ಬರ ಸೇವೆ ಮಾಡಿ ಸಂತೋಷ ಪಟ್ಟಳು, ಮೇರಿ ಮಾತೆ ಗರ್ಭಿಣಿಯಾಗಿರುವಾಗ, ಗರ್ಭಿಣಿಯ ಸೇವೆ ಮಾಡಲು ದಾವಿಸಿದಳು, ಕಷ್ಟದಲ್ಲಿರುವಾಗ, ಕಾನ ಊರಿನಲ್ಲಿ ಯೇಸುವಿನಿಂದ ಪವಾಡ ಮಾಡಿಸಿ ಸಹಾಯ ಮಾಡಿದಳು, ಅವಳು ಆರಂಭದಿಂದ ಕೊನೆವರೆಗೂ ದೇವರ ಚಿತ್ತವನ್ನು ನೆಡೆಸಿಕೊಟ್ಟಳು. ನಮ್ಮ ಸೇವೆಯಲ್ಲಿ ಸ್ವಾರ್ಥ ಇರಬಾರದು, ಪ್ರಶ್ತತಿಗಾಗಿ, ಗೌರವಕ್ಕಾಗಿ ಸೇವೆ ಮಾಡುವುದಲ್ಲ, ನಮಗೆ ನಮ್ಮ ಸೇವೆಯಿಂದ ಸ್ವರ್ಗದ ಬಹುಮಾನ ದೊರಕಬೇಕು, ಅದಕ್ಕಾಗಿ ನಿರ್ಮಲ ಮನಸ್ಸಿನಿಂದ ಸೇವೆ ಮಾಡಿ’ ಎಂದು ಸಂದೇಶ ನೀಡಿದರು.
ಗಂಗೊಳ್ಳಿ ಇಗರ್ಜಿಯ ಧರ್ಮಗುರುಗಳಾದ ವಂ| ಥಾಮಸ್ ರೋಶನ್ ಡಿಸೋಜಾ ವಂದಿಸಿದರು.ಕುಂದಾಪುರ ವಲಯ ಪ್ರಧಾನ ಅ|ವಂ|ಧರ್ಮಗುರು ಪೌಲ್ ರೇಗೊ ಪ್ರಾರ್ಥನ ವಿಧಿಯಲ್ಲಿ ಭಾಗಿಯಾದರು. ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು. ಧರ್ಮಭಗಿನಿಯರು, ಚರ್ಚಿನ ಉಪಾಧ್ಯಕ್ಷ ಅಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಭಕ್ತಾಧಿಗಳು ಹಾಗೂ ಜಾತಿ ಭೇದಭಾವ ಮರೆತು ಉರಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡರು.