JANANUDI.COM NETWORK

ಗಂಗೊಳ್ಳಿ: ದಿನಾಂಕ 06-09-2021 ಸೋಮವಾರದಂದು 8ನೇ ತರಗತಿಯ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಅಪರಹ್ನ 1:00 ಗಂಟೆಗೆ ವಿದ್ಯಾರ್ಥಿಗಳು ಆಗಮಿಸಿದರು. ಮುಖ್ಯಶಿಕ್ಷಕಿಯ ಅನುಪಸ್ಥಿತಿಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಫೆಲ್ಸಿಯಾನ ಡಿಸೋಜ ವಿದ್ಯಾರ್ಥಿಗಳಿಗೆ ಸ್ವಾಗತಿಸಿದರು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಷ್ಪವನ್ನು ನೀಡಿದರು. ವಿದ್ಯಾರ್ಥಿಗಳ ಪರಿಚಯವನ್ನು ಮಾಡಿಕೊಂಡ ಶಿಕ್ಷಕರು, ತಮ್ಮ ಪರಿಚಯವನ್ನು ತಿಳಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಯನ್ನು ಹಂಚಲಾಯಿತು.