

ಗಂಗೊಳ್ಳಿ,ಜೂ; 4 ಜೂ. ಸ್ಥಳೀಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೋತ್ಸವನ್ನು ಜೂ 2 ರಂದು ಶಾಲಾ ಆರಂಭೋತ್ಸವವನ್ನು ಬಹು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ. ಗ್ರೇಸಿ ಲೋಬೊ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ” ಪ್ರಯತ್ನ ಮತ್ತು ದೇವರ ಅನುಗ್ರಹವಿದ್ದರೆ ಎಂತಹ ಸಾಧನೆಯನ್ನು ಕೂಡ ಮಾಡಬಹುದು ” ಎಂದರು. ಎಲ್ಲಾ ಹೊಸ ವಿದ್ಯಾರ್ಥಿಗಳಿಗೆ ‘ಸ್ಮೈಲ್ ಬಾಲ್’ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಜೊತೆಗೆ ಉಚಿತ ಬ್ಯಾಗ್, ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಮುಖ್ಯೋಪಾಧ್ಯಾಯನಿ ಭಗಿನಿ ಕ್ರಸೆನ್ಸ್, ಸಹಾಯಕ ಮುಖ್ಯೋಪಾಧ್ಯಾಯನಿ ಭಗಿನಿ. ಆನೆಟ್, ಶಿಕ್ಷಕ -ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿಶೇಷ ಭೋಜನವನ್ನು ನೀಡಲಾಯಿತು. ಶಿಕ್ಷಕ ಗಣೇಶ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.









