ಗಂಗೊಳ್ಳಿ ಸ್ಟೆಲ್ಲಾ  ಮಾರಿಸ್‌  ರಕ್ಷಕ –ಶಿಕ್ಷಕ  ಸಂಘ  : ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಮಾನವ  ಧರ್ಮ ಬೆಳೆಸಿಕೊಳ್ಳಬೇಕು – ಉಪನ್ಯಾಸಕಿ ರೇಣುಕಾ

ಗಂಗೊಳ್ಳಿ: ದಿನಾಂಕ  ಗಂಗೊಳ್ಳಿಯ  ಸ್ಟೆಲ್ಲಾ  ಮಾರಿಸ್‌  ಪ್ರೌಢಶಾಲೆಯಲ್ಲಿ  ರಕ್ಷಕ –ಶಿಕ್ಷಕ  ಸಂಘದ  ಮಹಾಸಭೆ 30/07/2022  ರಂದು ಜರಗಿತು. ಸಂಪನ್ಮೂಲ  ವ್ಯಕ್ತಿಗಳಾಗಿ  ಆಗಮಿಸಿದ ಕುಂದಾಪುರದ  ಭಂಡಾರ್ಕಾರ್ಸ್‌ ‌ಕಲಾ ಮತ್ತು  ವಿಜ್ಞಾನ  ಕಾಲೇಜಿನ  ಕನ್ನಡ  ಉಪನ್ಯಾಸಕಿ ರೇಣುಕಾ ರವರು “ವಿದ್ಯಾರ್ಥಿಗಳು  ನಿರಂತರ ಪರಿಶ್ರಮ, ಪ್ರಯತ್ನ ,ಛಲ,ಗುರಿಯಿಟ್ಟು  ಅಧ್ಯಯನದಲ್ಲಿ  ತೊಡಗಿದಾಗ  ಯಶಸ್ಸು  ಕಟ್ಟಿಟ್ಟ  ಬುತ್ತಿ” ಎಂದು ತಿಳಿಯ ಪಡಿಸಿ  “ವಿದ್ಯಾರ್ಥಿಗಳು ಮಾನವ  ಧರ್ಮ  ಬೆಳೆಸಿಕೊಳ್ಳುವುದರ  ಜೊತೆಯಲ್ಲಿ  ಶಿಕ್ಷಣದಲ್ಲಿ  ಸಾಧನೆ  ಮಾಡುವಂತಾಗಲಿ” ಎಂದು ಸಂದೇಶ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯರೂ, ರಕ್ಷಕ ಶಿಕ್ಷಕ ಸಂಘದ  ಕಾರ್ಯದರ್ಶಿಗಳೂ  ಆಗಿರುವ  ಸಿಸ್ಟರ್‌  ಕ್ರಸೆನ್ಸ್‌ ರವರು ಸಂಪನ್ಮೂಲ  ವ್ಯಕ್ತಿಗಳನ್ನು ಪರಿಚಯಿಸಿ ಸರ್ವರನ್ನು  ಸ್ವಾಗತಿಸಿದರು. ರಕ್ಷಕ –ಶಿಕ್ಷಕ  ಸಂಘದ ಅಧ್ಯಕ್ಷರು ಮತ್ತು ಸ್ಟೆಲ್ಲಾ ಮಾರಿಸ್‌  ಪ್ರೌಢಶಾಲೆಯ  ಜಂಟಿ  ಕಾರ್ಯದರ್ಶಿಯಾದ ಸಿಸ್ಟರ್‌  ಡಯಾನ  ಸಭೆಯನ್ನದ್ದೇಶಿಸಿ, ವಿದ್ಯಾರ್ಥಿಗಳಿಗೆ  ಅವರ  ಹೆತ್ತವರಿಗೆ  ಅವರವರ  ಕರ್ತವ್ಯಗಳ  ಬಗ್ಗೆ  ಸ್ಪಷ್ಟ  ಮಾಹಿತಿಗಳನ್ನು  ನೀಡಿದರು.

ಶಿಕ್ಷಕಿ ಶಾಂತಿ ವರದಿ ವಾಚಿಸಿದರು.ಪ್ರಸಕ್ತ ಶೈಕ್ಷಣಿಕ ವರ್ಷದ  ನೂತನ ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಚಂದ್ರಶೇಖರ ಖಾರ್ವಿ, ಸದಸ್ಯರಾಗಿ ಜ್ಯೋತಿ, ಜಾನಕಿ, ಜಯಂತಿ, ನವೀನ್ ಶೆಟ್ಟಿ, ಮತ್ತು ವಿಶಾಲಾಕ್ಷಿ ನೇಮಕಗೊಂಡರು. ಶಿಕ್ಷಕ  ಗಣೇಶ ಹೆಬ್ಬಾರ್  ನಿರೂಪಿಸಿದರು. ಸಭೆಯಲ್ಲಿ  ಶಾಲೆಯ  ಎಲ್ಲಾ  ಭೋದಕ  ಹಾಗೂ  ಭೋದಕೇತರ  ವ್ರಂದದವರು  ಮತ್ತು ಎಲ್ಲಾ  ವಿದ್ಯಾರ್ಥಿಗಳ  ರಕ್ಷಕರು  ಉಪಸ್ಥಿತರಿದ್ದರು. ಶಿಕ್ಷಕ  ಗಣೇಶ್‌  ಭಟ್‌  ಕಾರ್ಯಕ್ರಮ  ನಿರೂಪಿಸಿದರು. ದೈಹಿಕ  ಶಿಕ್ಷಕರಾದ  ಪ್ರಜ್ವಲ್‌  ಪಂಡಿತ್  ವಂದಿಸಿದರು.