JANANUDI.COM NETWORK

ಗಂಗೊಳ್ಳಿ, ಜು.26; ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನಲ್ಲಿ ಭಾನುವಾರ ಅಂತರಾಷ್ರ್ಟೀಯ ಹಿರಿಯರ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ವಂ|ರೋಶನ್ ಡಿಸೋಜಾ ಇವರು ಮೇರಿ ಮಾತೆಯ ಮಾತ ಪಿತರಾದ ಸಂತ ಸಂತಾನ ಮತ್ತು ಸಂತ ಜೋಕಿಮ್ ಇವರ ಪ್ರತಿಮೆಗಳಿಗೆ ದೀಪ ಬೆಳಗಿಸಿ, ಅಗಲಿದ ಚರ್ಚಿನ ಎಲ್ಲಾ ಹಿರಿಯರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.
ತರುವಾಯ ನಡೆದ ಕಾರ್ಯಕ್ರಮದಲ್ಲಿ ಚರ್ಚ್ ಕುಟುಂಬ ಆಯೋಗದ ಸದಸ್ಯ ಜೆರಾಲ್ಡ್ ಕ್ರಾಸ್ತಾ ‘ಹಿರಿಯರ ತ್ಯಾಗ, ಶ್ರಮ, ಅವರ ಅನುಭವದ ಅಗತ್ಯತೆ, ಅವರಿಗೆ ನಾವು ಕುಟುಂಬದಲ್ಲಿ ನೀಡಬೇಕಾದ ಆದ್ಯತೆ ಗೌರವ, ಅವರನ್ನು ನಡೆದುಕೊಳ್ಳುವ ರೀತಿ, ಅವರ ಆರೋಗ್ಯದ ಬಗ್ಗೆ ಕಾಳಜಿಯ ಬಗ್ಗೆ’ ವಿವರಿಸಿದರು. ಧರ್ಮಗುರು ವಂ|ರೋಶನ್ ಡಿಸೋಜಾ ಹಿರಿಯರ ದಿನದ ಬಗ್ಗೆ ಅರ್ಥಭರಿತವಾದ ಸಂದೇಶ ನೀಡಿದರು.
ಹಿರಿಯರಲ್ಲಿ ಅತ್ಯಂತ ಹಿರಿಯವರಿಗೆ ಹೂ ಗುಚ್ಚ ನೀಡಿ ಗೌರವಿಸಲಾಯಿತು. ಜಗತ್ಗುರು ಪೆÇೀಪರ ಸಂದೇಶವಿದ್ದ ಕಾರ್ಡನ್ನು ಪವಿತ್ರಿಕರಿಸಿ ಹಿರಿಯರಿಗೆ ಹಂಚಲಾಯಿತು. ಎಲ್ಲಾ ಹಿರಿಯರು ಕಿರಿಯರನ್ನು ಆಶಿರ್ವಾದಿಸಿದರು. ಐಸಿವೈಎಮ್ ಸಂಘಟನೆ ಹಿರಿಯರಿಗಾಗಿ ಗೀತೆಯನ್ನು ಹಾಡಿ ಮನೋರಂಜಿಸಿದರು, ಹೂಗಳನ್ನು ಹಿಡಿದು ಅವರ ಜೊತೆ ಭಾವಚಿತ್ರವನ್ನು ತೆಗೆಸಿಕೊಂಡರು.
ಈ ಕೌಟುಂಬಿಕ ಕಾರ್ಯಕ್ರಮವನ್ನು ಚರ್ಚಿನ ಕುಟುಂಬ ಆಯೋಗ ಆಯೋಜಿಸಿತ್ತು, ಇದರ ಸಂಚಾಲಕ ಫೆಲಿಕ್ಸ್ ರೇಬೆರೊ, ಚರ್ಚ್ ಉಪಾಧ್ಯಕ್ಷರಾದ ವಿವಿಯನ್ ಕ್ರಾಸ್ತಾ, ಕಾರ್ಯದರ್ಶಿ ರೆನಿಟಾ ಬಾರ್ನೆಸ್, ಧರ್ಮಭಗಿನಿಯರು, ಪಾಲನಮಂಡಳಿ ಸದಸ್ಯರು ಉಪಸ್ಥಿತರಿದ್ದರು. 20 ಆಯೋಗದ ಸಂಯೋಜಕಿ ಪ್ರೀತಿ ಫೆರ್ನಾಂಡಿಸ್ ಕಾರ್ಯಕ್ರಮ ನಡೆಸಿಕೊಟ್ಟರು.
