ಕುಂದಾಪುರ,ಡಿ.8: ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.4 ರಂದು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಸಾಸ್ತಾನ ಇಗರ್ಜಿಯ ಧರ್ಮಗುರು ವಂ।_ಸುನೀಲ್ ಕ್ಲೆರೆನ್ಸ್ ಡಿಸಿಲ್ವಾ “ ನಾವು ಪರಿವರ್ತನೆ ಹೊಂದಬೇಕು, ದೇವರ ಇಚ್ಚೆಯು ಹಾಗೆ, ಪೋಪ್ ರವರ ಇಚ್ಚೆಯು ಹಾಗೆ, ಪೋಪ್ ಅವರ ಲಾವ್ದೊತೊ ಸಿ ಪತ್ರದಲ್ಲಿ ಪರಿಸರದಲ್ಲಿ ಪರಿವರ್ತನೆ ಮಾಡಬೇಕು, ಅದರಂತೆ ಮಾನವರಲ್ಲಿಯೂ ಪರಿವರ್ತನೆ ಆಗಬೇಕು ಎಂದು ಬಯಸುತ್ತಾರೆ, ಯೇಸು ಸ್ವಾಮಿಯೇ ಮೊದಲು ನಮ್ಮನ್ನು ಪ್ರೀತಿಸಿದರು, ಶರ್ತಗಳಿಲ್ಲದೆ ಪ್ರೀತಿಸಿದರು, ಹಾಗೇ ನಮ್ಮನ್ನು ಪ್ರೀತಿಸಲು ಹೇಳುತ್ತಾರೆ, ಅವರನ್ನು ಪ್ರೀತಿಸುವುದೆಂದರೆ, ಇತರರನ್ನು ಪ್ರೀತಿಸುವುದು, ಈ ಪ್ರೀತಿ ಹುಟ್ಟಿದ್ದು ಯೇಸು ಕ್ರಿಸ್ತರ ಪವಿತ್ರ ಹ್ರದಯದಲ್ಲಿ, ಆ ಹ್ರದಯದಲ್ಲಿ ಸಾಟಿಯಿಲ್ಲದ ಪ್ರೀತಿ ಇದೆ, ಅದರಿಂದಲೇ ಯೇಸು ಜನರ ಸೇವೆ ಮಾಡಿದರು, ಸಹಾಯ ನೀಡಿದರು, ಉತ್ತಮ ಧಾರ್ಮಿಕ ತತ್ವಗಳನ್ನು ಧಾರೆಯೆರೆದರು, ಪವಾಡಗಳನ್ನು ಮಾಡಿದರು, ರೋಗಿಗಳನ್ನು ಗುಣಪಡಿಸಿದರು, ಆ ಪವಿತ್ರ ಹ್ರದಯದಿಂದಲೇ ಅವರು ಹುಟ್ಟಿದ ಬೆತ್ಲೆಹೆಮ್ ನಿಂದ ಕಲ್ವಾರಿ ಪ್ರರ್ವತವರೆಗೆ ಸಾಗಿ ನಮ್ಮ ಉಳಿವಿಗಾಗಿ ಶಿಲುಭೆಗೆರಿದರು. ಅವರ ಹಾಗೇ ನಮ್ಮ ಹ್ರದಯಗಳಲ್ಲಿ ಪ್ರೀತಿ ಹುಟ್ಟಬೇಕು, ಅದಕ್ಕಾಗಿ ನಾವು ಕೆಟ್ಟದರಿಂದ ಒಳ್ಳೆತನಕ್ಕೆ ಪರಿವರ್ತನೆ ಆಗಬೇಕು, ದ್ವೇಷದಿಂದ ಪ್ರೀತಿಗೆ ಪರಿವರ್ತನೆ ಹೊಂದ ಬೇಕು, ನಾವು ಇತರರಿಗೆ ಸೇವೆ, ಸಹಾಯ, ದಾನ ಧರ್ಮ ಮಾಡುವಾಗ, ಯೇಸುವಿನ ಹ್ರದಯಲ್ಲಿರುವ ಪ್ರೀತಿಯಂತೆ ಹ್ರದಯದಾಳದಿಂದ ಮಾಡಬೇಕು ಆವಾಗ ನಮಗೆ ಸ್ವರ್ಗರಾಜ್ಯದಲ್ಲಿ ಪ್ರವೇಶ ಸಿಗುವುದು’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯದ ನುಡಿಗಳನ್ನಾಡಿದರು. ಗಂಗೊಳ್ಳಿಯ ಧರ್ಮಗುರು ವಂ| ರೋಶನ್ ಥಾಮಸ್ ಡಿಸೋಜಾ ವಂದಿಸಿದರು. ಕುಂದಾಪುರ ವಲಯದ ಧರ್ಮಕೇಂದ್ರದ ಅನೇಕ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಬ್ರದರ್ ಪ್ರೀತೆಶ್, ಕಾನ್ವೆಂಟಿನ ಧರ್ಮಭಗಿನಿಯರು, ಭಾಗಿಯಾದರು. ಪಾಲನ ಮಂಡಳಿ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ, ಗ್ಲೋರಿಯಾ ಡಿಸೋಜಾ , ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.