JANANUDI.COM NETWORK

ಗಂಗೊಳ್ಳಿ, ಅ.12; ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಬೇಟಿನೀಡಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ಕುಮಾರಿ ಶ್ರೇಯ ಮೇಸ್ತ ಮತ್ತು ಅವಳ ಅವಳಿ ಸೋದರ ಸಂಜಯ್ ಮೇಸ್ತ್ರ ಇವರಿಗಳಿಗೆ ಹೂ ಗುಚ್ಚ ನೀಡಿ ಶುಭಹಾರೈಸಿದರು. ಹಾಗೂ ಭವಿಷ್ಯದ ಗುರಿಯ ಕುರಿತು ಸಂವಾದ ನಡೆಸಿದರು ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಶಂಕರ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಭಗಿನಿ ಕ್ರೆಸ್ಸನ್ಸ್ ಶ್ರೇಯಾಳ ತಾಯಿ ಪವಿತ್ರಮೇಸ್ತ ಮತ್ತು ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು