JANANUDI.COM NETWORK

2020-21 ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷೇಯಲ್ಲಿ 625 ರಲ್ಲಿ 625 ಅಂಕ ಪಡೆದು ಗಂಗೊಳ್ಳಿಯ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆಗೈದ ಸ್ಟೆಲ್ಲಾ ಮಾರಿಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ಶ್ರೇಯಾ ಮೇಸ್ತಾರವರನ್ನು ಅಗೋಸ್ತ್ 14 ರಂದು ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದ ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಶ್ರೇಯಾಳ ಜೊತೆ ಜನಿಸಿದ ಅವಳ ಅವಳಿ ತಮ್ಮ ಸಂಜಯ್ ಸಂಜಯ್ 96% ಶೇಕಡಾ ಅಂಕವನ್ನು ಪಡೆದಿದ್ದನು ಅವನನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸನ್ಮಾನದ ವೇಳೆ ಇವರ ಹೆತ್ತವರಾದ ಪುರುಷೋತಮ ಮೇಸ್ತ ಪವಿತ್ರ ಮೇಸ್ತ ಹಾಜರಿದ್ದರು.
ದೇವಾಲಯದ ಧರ್ಮಗುರುಗಳು ವಂದನೀಯ ಫಾದರ್ ತೊಮಸ್ ರೊಶನ್ ಡಿಸೊಜ ಶುಭಾಶಯದ ಮಾತುಗಳನ್ನಾಡಿ ಅಭಿನಂದಿಸಿದರು. ಗಂಗೊಳ್ಳಿ ಕಾನ್ವೆಂಟಿನ ಸುಪಿರಿಯರ್ ಭಗಿನಿ ಜ್ಯೊತಿ ಎ.ಸಿ. ಭಗಿನಿ ಮುಖ್ಯೋಪಾಧ್ಯಾಯಿನಿ ಕ್ರೆಸೆನ್ಸ್ ಎ.ಸಿ. ಮತ್ತು ದೇವಾಲಯದ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.