ತಿಮಿಂಗಲದ ವಾಂತಿ ಮಾರಾಟಕ್ಕೆ ಯತ್ನದ ಗ್ಯಾಂಗ್ ಬಂಧನ, ವಶವಾಗಿದ್ದ ವಸ್ತುಗಳ ಬೆಲೆ 80 ಕೋಟಿ ರೂಪಾಯಿ!

JANANUDI.COM NETWORK


ಬೆಂಗಳೂರು: ಸಮುದ್ರದಲ್ಲಿ ತೇಲುವ ಚಿನ್ನ ಎಂದು ಕರೆಯಲಾಗುವ ಅಂಬರ್ ಗ್ರೀಸ್(ತಿಮಿಂಗಿಲದ ವಾಂತಿ) ಮತ್ತು ಪ್ರಾಚೀನ ವಸ್ತುಗಳನ್ನು ಮಾರಲು ಯತ್ನಿಸುತ್ತಿದ್ದ ಗುಂಪೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,ಸುಮಾರು ರೂ. 80 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಜೀಬ್ ಪಾಷಾ, ಮಹಮದ್ ಮುನ್ನಾ, ಗುಲಾಬ್ ಚಂದ್ ಅಲಿಯಾಸ್ ಗುಡ್ಡು, ಸಂತೋಷ್ ಮತ್ತು ಜಗನ್ನಾಥಾಚಾರ್ ಬಂಧಿತರಾಗಿದ್ದು, ಇವರು ಪರವಾನಗಿಯಿಲ್ಲದೆ ಅಪರೂಪದ ವಸ್ತುಗಳನ್ನು ಅಕ್ರಮವಾಗಿ ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ.
ಅಂಬರ್ ಗ್ರೀಸ್ ಸಮುದ್ರಗಳಲ್ಲಿ ಸಿಗುವ ತಿಮಿಂಗಿಲದ ವಾಂತಿಯಾಗಿದ್ದು, ಈ ತಿಮಿಂಗಿಲದ ವಾಂತಿಯನ್ನು ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ.ಹಾಗಾಗಿ ಈ ತಿಮಿಂಗಿಲದ ವಾಂತಿಗೆ ವಿದೇಶಗಳಲ್ಲಿ ಬಹಳ ಬೇಡಿಕೆಯಿದೆ. ಈ ಅಕ್ರಮ ಕುರಿತು ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದಾಗ, ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಬೆನ್ನಟ್ಟಿದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
.