ಕುಂದಾಪುರ, ಅ.3: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿಜಿ ಜಯಂತಿಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಚರಣೆ ಮಾಡಲಾಯಿತು.
ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ “ಗಾಂಧಿಜಿ ಅವರು ಸತ್ಯ, ಅಹಿಂಸೆ, ಸರಳತೆಗೆ ಖ್ಯಾತರಾದವರು, ಅವರು ನಮಗೆ ಅಹಿಂಸೆಯಿಂದಲೇ ಸ್ವಾತ್ರಂತ್ರ್ಯ ದೊರಕಿಸಿಕೊಟ್ಟ ಮಹಾನ ವ್ಯಕ್ತಿ. ಅವರೊಬ್ಬರು ಬಹು ಸರಳ ವ್ಯಕ್ತಿಯಾಗಿದ್ದು, ಭಾರತ ಜನರಿಗೆ ತೊಡಲು ಬಟ್ಟೆ ಇಲ್ಲದನ್ನು ತಿಳಿದು ಜೀವನ ಪರ್ಯಂತ ಮೇಲಿನ ಬಟ್ಟೆ ಧರಿಸದೆ ಜೀವಿಸಿದವರು, ಗಾಂಧಿಜಿಯ ಬಗ್ಗೆ ಇನ್ನೂ ಹಲವಾರು ವಿಶೇಷತೆಗಳಿವೆ’ ಎಂದು ತಿಳಿದು ಶುಭಾಷಯ ಕೋರಿದರು.
ಬಳಿಕ ಕುಂದಾಪುರ ಕೋಡಿ ಬೀಚ್ ನಲ್ಲಿ ಸ್ವಚತ ಕಾರ್ಯಕ್ರಮವನ್ನು ನಡೆಸಲಾಯಿತು, ಇದಕ್ಕೆ ಕುಂದಾಪುರ ಚರ್ಚಿನ ಸಿ.ವೈ.ಎಮ್, ಸಂಘಟನೇಯ ಸದಸ್ಯರು ಸಹಕರಿಸಿದರು.
ಕಥೊಲೀಕ್ ಸಭಾದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ಟೊ ಗಾಂಧಿಜಿ ಬಗ್ಗೆ ಮಾತನಾಡಿದರು ಕಥೊಲೀಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಕಾರ್ಯದರ್ಶಿ ಎಲ್ಡ್ರಿನ್ ಡಿಸೋಜಾ, ನಿಖಟ ಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು. ಕಾರ್ಯಕ್ರಮದ ಸಂಚಾಲಕಿ ಶಾಲೆಟ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.