JANANUDI.COM NETWORK
ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಮತ್ತು ‘ನಿರ್ಮಲ ಪರಿಸರ ನಮ್ಮ ಕರ್ತವ್ಯ’ ಇದರ ಧ್ಯೇಯದೊಂದಿಗೆ ಸ್ವಚಚತಾ ಆಭಿಯಾನವನ್ನು ಆಚರಿಸಲಾಯಿತು. ಕುಂದಾಪುರ ಚರ್ಚ್ ಸಭಾ ಭವನದಲ್ಲಿ ನಡೆದ ಗಾಂಧಿ ಜಯಂತಿ ಆಚರಣ ಪ್ರಯುಕ್ತ ಗಾಂಧಿಜಿಗೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಲಾಯಿತು, ಮುಖ್ಯ ಅತಿಥಿಗಳಾದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ಗಾಂಧಿಜಿ ಒರ್ವ ಮಹಾನ್ ನಾಯಕ, ದೇಶಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿದವರು, ತ್ಯಾಗಿಗಳು, ಸತ್ಯ, ಅಹಿಂಸಾವದಿಗಳು, ಹಾಗೇ ಲಾಲ್ ಬಾಹುದ್ದರ್ ಶಾಸ್ತ್ರಿ, ದೇಶಕ್ಕಾಗಿ ತ್ಯಾಗಮಯ ಜೀವನ ನಡೆಸಿದವರು. ಪ್ರಧಾನಿಯಾಗಿದ್ದಾಗ ಅವರು ತಮ್ಮ ವೇತನವನ್ನೆ ತೆಗೆದುಕೋಳ್ಳದವರು, ಈ ಇಬ್ಬರೂ ನಾಯಕರು, ಇವತ್ತಿನ ನಾಯಕರುಗಳಿಗೆ ಪ್ರೇರಣೆಯಾಗ ಬೇಕು, ದೇಶಕ್ಕೆ ಇಂತಹ ವ್ಯಕ್ತಿತ್ವದ ನಾಯಕರುಗಳ ಅಗತ್ಯ ಇದೆ’ ಎಂದು ಅವರು ಹೇಳುತ್ತಾ ‘ಇಂದು ಮನೆಯೊಳಗೆ ಸ್ವಚ್ಚತೆ ಮಾಡಿ ಆ ಕಸವನ್ನು ಹೊರಗೆ ಬಿಸಾಡಿ ಪರಿಸರ ಮಲೀನ ಮಾಡುವುದನ್ನು ನಾವು ಕಾಣ ಬಹುದು, ಮೊದಲು ನಮ್ಮ ವಠಾರ ನಿರ್ಮಲ ಗೋಳಿಸುವ. ಕೆಲವೊಮ್ಮೆ ನಮ್ಮ ವಠಾರದಲ್ಲಿ ಕೊಳಕಿದ್ದು ನಾವು ಬೇರೆ ಕಡೆ ಸ್ವಚ್ಚತೆ ಮಾಡಲಿಕ್ಕೆ ಹೋಗುತ್ತೇವೆ, ಎಲ್ಲರೂ ನಮ್ಮ ವಠಾರ ರಸ್ತೆ ನಿರ್ಮಲವಾಗಿಟ್ಟುಕೊಂಡರೆ, ತನ್ನಿಂದ ತಾನೆ ಊರು ಸ್ವಚ್ಚ ನಿರ್ಮಲವಾಗಿರುತ್ತದೆ’ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲೊ, ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಶೈಲಾ ಡಿಆಲ್ಮೇಡಾ, ವಿನೋದ್ ಕ್ರಾಸ್ಟೊ, ಡಾ. ಸೋನಿ ಡಿಕೋಸ್ತಾ, ಲೋನಾ ಲುವಿಸ್, ಕಾರ್ಯಕಾರಿ ಸಮಿತಿಯ ಲೋಯ್ ಕರ್ವಾಲ್ಲೊ, ಜೋಯ್ ಕರ್ವಾಲ್ಲೊ, ಮುಂತಾದವರು ಹಾಜರಿದ್ದರು. ನಂತರ ಚರ್ಚ್ ರಸ್ತೆಯಲ್ಲಿ ಸ್ವಚ್ಚತಾ ಅಭಿಯಾನ ಮಾಡಲಾಯಿತು. ಕಥೊಲಿಕ್ ಸಭೆಯ ಅಧ್ಯಕ್ಷರಾದ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು, ಕಾರ್ಯದರ್ಶಿ ಎಲ್ಡ್ರಿನ್ ಡಿಸೋಜ ವಂದಿಸಿದರು.