

” ಇಬ್ಬರು ರಾಷ್ಟ್ರ ನಾಯಕರ ನಾಯಕತ್ವದ ಗುಣಗಳು ಮತ್ತು ದೇಶದ ಬಗೆಗಿನ ಕಾಳಜಿ ಅವರ ಬಗ್ಗೆ ನಮ್ಮ ವೈಯುಕ್ತಿಕ ಒಲವು-ನಿಲುವುಗಳನ್ನು ಮೀರಿ ನಿಲ್ಲುತ್ತವೆ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಯವರನ್ನು ನಾವೆಲ್ಲರೂ ಸದಾ ನೆನಪಿಸಿಕೊಳ್ಳಬೇಕು” ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ತಿಳಿಸಿದರು. ಗಾಂಧೀಜಿ- ಶಾಸ್ತ್ರೀಜಿ ಜಯಂತಿಯ ಅಂಗವಾಗಿ ಇಬ್ಬರೂ ಮಹಾನ್ ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

