

ಶ್ರೀನಿವಾಸಪುರ 1 : ಆಟಗಳು ದೈಹಿಕ, ಮಾನಸಿಕವಾಗಿ ಧೈರ್ಯ,ಸ್ಥೈರ್ಯ ಹಾಗು ಜೀವರಕ್ಷಣಾ ಕೌಶಲ್ಯಗಳನ್ನು ಬೆಳಸುವಂತಾಗುತ್ತದೆ. ಹಾಗು ಕ್ರೀಡೆಗಳಿಂದ ಪ್ರೀತಿ,ಒಗ್ಗಟಿನಬಲ, ಏಕಾಗ್ರತೆ,ಕ್ರಿಯಾಶೀಲತೆ,ಬುದ್ದಿವಂತಿಕೆಯನ್ನು ಚುರುಕುಗೊಳಿಸುವಂತಾಗುತ್ತದೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಸೋಮವಾರ ರಾಯಲ್ಪಾಡು ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟಹವ್ಯಾಸಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯ ಮೂಲಕ ದೇಶದ ಘನತೆ ಗೌರವವನ್ನು ಕಾಪಾಡುವಂತೆ ಕರೆನೀಡಿದರು.
ರಾಯಲ್ಪಾಡು ಗ್ರಾಮದಲ್ಲಿ ನಾನು ಪ್ರಾಥಮಿಕ ಶಾಲೆ ಓದಿರುತ್ತೇನೆ ಎಂದು ಹೇಳಿ ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿ ಕೊಂಡು , ನಾನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತೇನೆ ನೀವು ಸಹ ಪ್ರತಿ ದಿನ ಯೋಗ ಮತ್ತು ಧ್ಯಾನವನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತಹೇಳಿದರು.
ತಾಲೂಕಿನ ಸರ್ಕಾರಿ ಶಾಲೆಗಳ ದುರಸ್ಥಿ ಕಾಮಗಾರಿಗಳಿಗಾಗಿ 2ಕೋಟಿ ರೂಗಳ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿ ರಾಯಲ್ಪಾಡು ಶಾಲಾ ಕಾಲೇಜು ಆವರಣದಲ್ಲಿ ಬೇಕಾಗಿರುವ ಮೂಲ ಭೂತ ಸೌಲಭ್ಯ ಕಲ್ಪಸಿಕೊಡುವುದಾಗಿ ಭರವಸೆ ನೀಡಿದರು.
ವಿದಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಪಾಲನೆ ಆಗಬೇಕಾದರೆ ದೈಹಿಕ ಮುಖ್ಯ . ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದು ದೈಹಿಕ ಶಿಕ್ಷಕರು. ದೇಶದಲ್ಲಿ 143 ಕೋಟಿ ಜನಸಂಖ್ಯೆ ಇದ್ದು, 35 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದು , ರಾಜ್ಯದಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದು, ಇಂದಿನ ಸರ್ಕಾರವು ಅದರ ಗಮನಿಸಿ, ಪರಿಹಾರ ನೀಡುತ್ತದೆ ಎಂದು ನಾನು ಭಾವಿಸುತ್ತಿದ್ದಾನೆ ಎಂದರು. ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ ದೈಹಿಕ ಶಿಕ್ಷಕ ಭರ್ತಿ ನೀಡಿ ಕ್ರೀಡೆಗಳಿಗೆ ಸರ್ಕಾರಗಳು ವಿಶೇಷ ಪ್ರೋತ್ಸಾಹವನ್ನು ನೀಡಿದರೆ ವಿಶ್ವ ಮಟ್ಟದಲ್ಲಿ ನಡೆಯುವ ಒಲಂಪಿಕ್ ಹಾಗು ಇತರೆ ಕ್ರೀಡಾಕೂಟಗಳಲ್ಲಿ ಎಲ್ಲಾ ದೇಶಗಳನ್ನು ನಮ್ಮ ದೇಶದ ಕ್ರೀಡಾಪಟುಗಳು ಹೆಚ್ಚಿ ಸಾಧನೆ ಮಾಡುತ್ತಾರೆ ಎಂದರು.
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ದೈಹಿಕವಾಗಿ ಹಾಗು ಮಾನಸಿಕವಾಗಿ ಭಲಾಡ್ಯರು , ಆ ವಿದ್ಯಾರ್ಥಿಗಳು ಹೋಬಳಿ, ತಾಲೂಕು , ಜಿಲ್ಲಾ , ರಾಜ್ಯ ಮಟ್ಟದಲ್ಲಿ ಗೆಲುವು ಸಾಧನೆ ಮಾಡಲು ಸಾಧ್ಯ ಎಂದರು. ದೇಶದಲ್ಲಿ ನಮ್ಮ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ 2ನೇ ಸ್ಥಾನದಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಸರ್ಕಾರದಿಂದ ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಅನುದಾನ ಬರುವುದಿಲ್ಲ. ಸಂಘ, ಸಂಸ್ಥೆಗಳ ಹಾಗೂ ದಾನಿಗಳ ಬಳಿ ಬಿಕ್ಷೆ ಬೇಡುವ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ಜೀವನದ ಗುರಿಯನ್ನು ಮಟ್ಟುವಂತೆ ಸಲಹೆ ನೀಡಿದರು.
ಜಿಂಕಲವಾರಿಪಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಿತು. ಕ್ರೀಡಾ ವಿದ್ಯಾರ್ಥಿಗಳಿಗೆ ವಕೀಲ ಕೆ.ವಿ.ಶಿವಾರೆಡ್ಡಿ ಊಟದ ವ್ಯವಸ್ಥೆ ಮಾಡಿದ್ದರು.
ಇಒ ವಿ.ಕೃಷ್ಣಪ್ಪ, ಬಿಇಒ ಉಮಾದೇವಿ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ಬಿಆರ್‍ಸಿ ಕೆ.ಸಿ.ವಸಂತ, ಇಸಿಒ ಹನುಮೇಗೌಡ, ಪಿಎಸ್‍ಐ ಯೋಗೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ವೆಂಕಟಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರೆಡ್ಡಿ, ನೌಕರರ ಸಂಘದಾ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಗೌನಿಪಲ್ಲಿ ಗ್ರಾ.ಪಂ. ಅಧ್ಯಕ್ಷ ಶೇಷಾದ್ರಿ, ಯರ್ರಂವಾರಿಪಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ, ಪಿಡಿಒ ನರೇಂದ್ರಬಾಬು, ಗ್ರಾ.ಪಂ.ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಶಶಿಕುಮಾರ್, ಮುಖಂಡ ಶ್ರೀರಾಮರೆಡ್ಡಿ, ಮದರಂಕಪಲ್ಲಿ ಶಂಕರರೆಡ್ಡಿ, ಆಂಜಿ, ಚಕ್ಕಾ ಲಕ್ಷ್ಮೀನಾರಾಯಣಶೆಟ್ಟಿ, ಸುಬ್ರಮಣಿ, ಕಾವೇರಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಹೇಶ್, ತಾಲೂಕು ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ರಾಮಚಂದ್ರ, ಶಾಲೆಯ ಮುಖ್ಯ ಶಿಕ್ಷಕ ಪಿ.ಮಾರಣ್ಣ, ಸಿಆರ್‍ಪಿ ವರದರೆಡ್ಡಿ, ರಾಯಲ್ಪಾಡು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಕೆ.ವೆಂಕಟರಮಣ, ಮಂಜೇಶ್ ಹಾಗೂ ಹೋಬಳಿಯ ಎಲ್ಲಾ ಕ್ಲಸ್ಟರ್‍ಗಳ ಸಿಆರ್‍ಪಿಗಳು, ಪ್ರಾಥಮಿಕ , ಪ್ರೌಡಶಾಲೆಗಳ ಶಿಕ್ಷಕ ಸಂಘಗಳ ಪದಾಧಿಕಾರಿಗಳು ಇದ್ದರು.