ಕಾಪು ; 06.09.2024 ರಂದು ಭಾದ್ರಪದ ಶುಕ್ಲದ ಚೌತಿಯಂದು ದೇಶದ ಜನತೆ ಐಕ್ಯತೆಯೊಂದಿಗೆ ಸಂಭ್ರಮಿಸುವ ಹಬ್ಬಗಳಲ್ಲಿ ಗಣೇಶಚತುರ್ಥಿಯೂಒಂದು. ಈ ಸುಸಂದರ್ಭದಲ್ಲಿ ಪ್ರಕೃತಿರೂಪದ ಮೂಲ ಪರಿಕಲ್ಪನೆಯೊಂದಿಗೆ ರಚಿಸಲ್ಪಡುವ ಹರಸಿನಯುಕ್ತ ಗಣಪನ ಮರಳಾಕೃತಿಯು ಕಾಪು ಕಡಲ ಕಿನಾರೆಯಲ್ಲಿ ಕಲಾವಿದ ಹರೀಶ್ ಸಾಗಾ ಮತ್ತು ಅವರ ತಂಡದಿಂದ ಮೂಡಿಬಂತ್ತು. ಸಮಸ್ತ ಜನತೆಗೆ ಶುಭಾಷಯದ ಹಾರೈಕೆಯೊಂದಿಗೆ, ಜನಜಾಗೃತಿಯನ್ನು ಸಾರುವ “ಗಜಾನನಂ” ಮರಳು ಶಿಲ್ಪದ ರಚನೆ ‘ಸ್ಯಾಂಡ್ಥೀಂ’ ಉಡುಪಿ ಕಲಾವಿದರಾದ ಸಂತೋಷ್ ಭಟ್ ಹಾಲಾಡಿ, ಉಜ್ವಲ್ ತಂಡದಲ್ಲಿದ್ದು, ಈ ಮರಳು ಶಿಲ್ಪ ಜನಾಕಾರ್ಷಣೆಗೆ ಒಳಗಾಯ್ತು.