

ಕೋಲಾರ,ಜೂ,5: ಕೋಲಾರ ಜಿಲ್ಲೆಯ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಕೆ.ವೆಂಕಟಶಿವಾರಡ್ಡಿ ರವನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳು ತಮ್ಮ ಜನಾಂಗವನ್ನು ರಾಜಕೀಯವಾಗಿ ಗುರ್ತಿಸುವುದರ ಜೊತೆಗೆ ಸೂಕ್ತ ಸ್ಥಾನಮಾನಗಳನ್ನು ಒದಗಿಸಿಕೊಡಬೇಕು. ಸಮುದಾಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು, ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮನವಿ ಮಾಡಿದರು.
ಶಾಸಕರಾದ ಜಿ.ಕೆ.ವೆಂಕಟಶಿವಾರಡ್ಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮೊದಲಿಗೆ ಸಮುದಾಯ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ, ಸಮುದಾಯಕ್ಕೆ ತನ್ನ ಕೈಲಾದ ಸಹಾಯ ಮತ್ತು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ದೊರಕೊಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಎಂ.ಬಾಲಗೋವಿಂದ್, ಐತರಾಸನನಹಳ್ಳಿ ನರಸಿಂಹಪ್ಪ, ಗರುಡನಹಳ್ಳಿ ಬಾಬು, ವಕ್ಕಲೇರಿ ಬಾಬು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ಬೆಳ್ಳೂರು ತಿರುಮಲೇಶ್, ಜಿಲ್ಲಾಧ್ಯಕ್ಷ ಕೋಟೆ ಮಧು, ತಾಲೂಕು ಅಧ್ಯಕ್ಷ ಬೆಳ್ಳೂರು ಅಂಬರೀಶ್, ಸುಗುಟೂರು ವೇಣು, ಜೆ.ಡಿ.ಎಸ್ ಪಕ್ಷದ ಎಸ್.ಟಿ.ವಿಭಾಗದ ಕೋಲಾರ ತಾಲೂಕು ಅಧ್ಯಕ್ಷ ಕುರುಗಲ್ ಗಿರೀಶ್, ಮೇಡಿಹಾಳ ಮುನಿರಾಜು, ಮಂಜು, ಕುಡುವನಹಳ್ಳಿ ಆಂಜಿ, ರಂಗನಾಥ್, ಶ್ಯಾಮ್‍ನಾಯಕ್, ಗಲ್‍ಪೇಟೆ ಲಕ್ಷ್ಮಣ್, ಗುಟ್ಟಹಳ್ಳಿ ಚಿದಾನಂದ, ಅಮ್ಮೇರಹಳ್ಳಿ ಚಲಪತಿ ಮತ್ತು ಕಲ್ಲಂಡೂರು ನಾಗರಾಜ್ ಉಪಸ್ಥಿತರಿದ್ದರು.
