ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 3 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಮೋಜು ಮತ್ತು ಆಂಗ್ಲಭಾಷಾ ಕಲಿಕೆ ಕಾರ್ಯಾಗಾರ ಆಯೋಜಿಸಲಾಗಿತ್ತು
ವಿದ್ಯಾರ್ಥಿ ಮತ್ತು ಶಿಕ್ಷಕರ
ಸಾಂಕೇತಿಕ ನೃತ್ಯದ ಮೂಲಕ ಕಾರ್ಯಾಗಾರ ಆರಂಭಗೊಂಡಿತು
ಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಕುಮಾರಿ ಅಲಿಟಾ ಡೇಸ್ ಆಂಗ್ಲಭಾಷಾ ಉಪನ್ಯಾಸಕರು ಸೈoಟ್ ಅಲೋಸಿಯಸ್ ಡಿಮಡ್ ಟು ಬಿ ಯೂನಿವರ್ಸಿಟಿ ಮಂಗಳೂರು
ಇವರು 3ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 3 ಹಂತಗಳಲ್ಲಿ ವಿವಿಧ ಮೋಜಿನ ಗುಂಪು ಚಟುವಟಿಕೆಗಳೊಂದಿಗೆ ಆಂಗ್ಲಭಾಷಾ ಉಚ್ಚಾರ ದೋಷ, ಸಾಮಾನ್ಯ ವಾಕ್ಯರಚನೆ, ಸಾಮಾನ್ಯ ವಾಕ್ಯ ರಚನೆಯಲ್ಲಿ ದೋಷಗಳ ಸರಿಪಡಿಸುವಿಕೆ, ಕಲಿ, ಪುನಃ ಕಲಿ, ಮರೆತುಬಿಡು ಎಂಬ ಪರಿಕಲ್ಪನೆಯ ಮೂಲಕ ಮಕ್ಕಳ ಬುದ್ಧಿಮತ್ತೆಗೆ ಅನುಗುಣವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆಂಗ್ಲಭಾಷೆಯ ಅತ್ಯುತ್ತಮ ಬಳಕೆಯ ಅವಕಾಶವನ್ನು ಒದಗಿಸಿಕೊಟ್ಟರು ಎಲ್ಲಾ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಪಾಲ್ಗೊಂಡಿದ್ದರು ಕಾರ್ಯಾಗಾರದಲ್ಲಿ
ಆಡಳಿತಮಂಡಳಿಯ ಅಧಿಕಾರಿ ಕುಮಾರಿ ರೆನಿಟಾ ಲೋಬೊ, ಮುಖ್ಯಶಿಕ್ಷಕ ಡಾ. ರವಿದಾಸ್ ಶೆಟ್ಟಿ
ಶಿಕ್ಷಕರು ಉಪಸ್ಥಿತರಿದ್ದರು
ಶಿಕ್ಷಕಿ ಅವಿನಾ ಡಿಸೋಜಾ ಸ್ವಾಗತಿಸಿ,ವಂದಿಸಿ ಕಾರ್ಯಕ್ರಮ ನಿರೂಪಿಸಿದರು.