ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರ ಸಂಪೂರ್ಣ ಗಣಕೀಕೃತ

JANANUDI.COM NETWORK

ಕುಂದಾಪುರ:  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರ ವನ್ನು ಸಂಪೂರ್ಣ ಗಣಕೀಕೃತ (fully computerization) ಮಾಡಲಾಯಿತು. ಈ ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸದಸ್ಯರು ಹಾಗೂ ದಾನಿಗಳಾದ ಡಾ. ದಿನಕರ ಶೆಟ್ಟಿ (U.S.A) ಇವರು ಉದ್ಘಾಟಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಸ್ವಾಗತಿಸಿದರು.
ಉದ್ಗಾಟಕರಾದ ಡಾ. ದಿನಕರ ಶೆಟ್ಟಿ ಮಾತನಾಡುತ್ತಾ ದಾನಿಗಳು ನೀಡಿದ ದೇಣಿಗೆ ಯನ್ನು ಅಹ್ರ ವ್ಯಕ್ತಿ ಹಾಗೂ ಸಂಸ್ಥೆ ಗಳಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಮತ್ತು ರೆಡ್ ಕ್ರಾಸ್ ಸಂಸ್ಥೆ ಯ ಕಾರ್ಯ ವೈಖರಿ ಅತ್ಯುತ್ತಮ ಎಂದರು. ಈ ಕಾರ್ಯಕ್ರಮ ದಲ್ಲಿ ಸಭಾಪತಿ ಎಸ್ ಜಯಕರ ಶೆಟ್ಟಿ, ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಸದಾನಂದ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಸತ್ಯನಾರಾಯಣ ಪುರಾಣಿಕ್, ನಾರಾಯಣ ದೇವಾಡಿಗ, ಮತ್ತು ಜನ ಔಷದಿಯ ಬಿ. ಎಮ್ ಚಂದ್ರಶೇಖರ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಯವರ ದನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.