ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷಸ್ಥಾನದಲ್ಲಿರುವ ಕಾಂಗ್ರೆಸ್ ಬೆಂಬಲಿತ ಪಕ್ಷದ ಎಸ್.ಸಿ. ರಮೆಶ್, ಉಪಾಧ್ಯಕ್ಷ ಜಿ.ಕೆ. ರಾಜಣ್ಣ ಆದ ನಮ್ಮನ್ನು ಈ ಸ್ಥಾನದಿಂದ ಕೆಳಗಿಳಿಸಲು ನಮ್ಮದೆ ಪಕ್ಷದ ಇಬ್ಬರು ನಿರ್ದೇಶಕರು ವಿರೋಧ ಪಕ್ಷದವರೊಂದಿಗೆ ಕೈ ಜೋಡಿಸಿ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿ ಇವರನ್ನು ಪ್ರೇರೇಪಿಸಿದ ಸ್ವ ಪಕ್ಷದವರೇ ಆದ ಮಾಜಿ ಅಧ್ಯಕ್ಷ ರಾಜೇಂದ್ರಪ್ರಸಾದ್ ಇವರಿಗೆ ಮುಖಭಂಗವಾಗಿದೆ, ನಮ್ಮ ಸ್ಥಾನ ಮತ್ತಷ್ಟು ಗಟ್ಟಿಯಾಯಿತು ಎಂದು ಅಧ್ಯಕ್ಷ ಎಸ್.ಸಿ. ರಮೇಶ್ ಬಾಬು ತಿಳಿಸಿದರು.
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 8 ಮಂದಿ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕರಿದ್ದು, ಇವರಲ್ಲಿ ಜೆ.ಡಿ.ಎಸ್. ಪಕ್ಷದ 4 ಮಂದಿ ಇದ್ದು, ಇವರ ಜೊತೆಗೆ ಸರ್ಕಾರದ ನಾಮಿನಿ ನಿರ್ದೇಶಕರು 3 ಮಂದಿ ಇದ್ದು, ಆಡಳಿತ ಕಾಂಗ್ರೆಸ್ ಪಕ್ಷದ ಶಾಸಕ ಕೆ.ಆರ್. ರಮೇಶ್ ಕುಮಾರ್ ರವರ ಕಟ್ಟಾ ಅಭಿಮಾನಿಸೋಮಯಾಜಲಹಳ್ಳಿ ಎಸ್.ಸಿ. ರಮೇಶ್ (ಬಾಬು) ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜಿ.ಕೆ. ರಾಜಣ್ಣ 3ನೇ ಅವಧಿಯಲ್ಲಿ ಆಡಳಿತ ಮಂಡಳಿ ಪಕ್ಷದ ಎಲ್ಲರ ಸಹಕಾರದಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ಪಡೆದಿದ್ದರು. ಇತ್ತೀಚೆಗೆ 2ನೇ ಅವಧಿಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿದ್ದ ಎಂ. ರಾಜೇಂದ್ರಪ್ರಸಾದ್ (ಪೆದ್ದರೆಡ್ಡಿ) ಇವರು ಶಾಸಕರ ಬೆಂಬಲಿಗರಾಗಿದ್ದು 20 ತಿಂಗಳು ಎ.ಪಿ.ಎಂ.ಸಿ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿದ ಇವರು ಪ್ರಸ್ಥುತ ಬಂಡಾಯ ಎದ್ದು, ವಿರೋಧ ಪಕ್ಷದ 4 ಮಂದಿ ನಿರ್ದೇಶಕರೊಂದಿಗೆ ಕೈ ಜೋಡಿಸಿ ಪ್ರಸ್ಥುತ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಉಪಾಧ್ಯಕ್ಷರನ್ನು ಕೆಳಗಿಳಿಸಲು ಅಧ್ಯಕ್ಷ ಸ್ಥಾನಕ್ಕೆ ನಕ್ಕಲಗಡ್ಡ ಕೆ. ನಾರಾಯಣಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಕುಮಾರ್ ಜೆ.ಡಿ.ಎಸ್. ಬೆಂಬಲಿತ ನಿರ್ದೇಶಕರಾದ ಇವರು ಆಕಾಂಕ್ಷಿಗಳಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು.
ಇವರಿಗೆ ಬೆಂಬಲವಾಗಿ ಕಾಂಗ್ರೆಸ್ ಪಕ್ಷದ ಎನ್. ರಾಜೇಂದ್ರ ಪ್ರಸಾದ್ , ಕೆ.ವಿ ರೂಪಾವತಿ ಮತ್ತು ಜೆ.ಡಿ.ಎಸ್. ಪಕ್ಷದ ಟಿ.ವಿ. ನಾರಾಯಣರೆಡ್ಡಿ, ಅತಾವುಲ್ಲಾ ಖಾನ್ ಸರ್ಕಾರದ ನಾಮಿನಿ ಸದಸ್ಯರಾದ ಅಶೋಕ್ ರೆಡ್ಡಿ, ಶಿವಮ್ಮ ಇವರು ಬೆಂಬಲ ಸೂಚಿಸಿದ್ದ ಇವರು ಇಂದು ನಡೆದ ಅವಿಶ್ವಾಸ ನಿರ್ಣಯ ಸಭೆಗೆ ಇವರಾರು ಕೂಡ ಹಾಜರಾಗದೆ ಪ್ರಸ್ತುತ ಅಧ್ಯಕ,್ಷ ಉಪಾಧ್ಯಕ್ಷರಿಗೆ ಪರೋಕ್ಷವಾಗಿ ಬೆಂಬಲ ನೀಡಿ ಸಭೆಗೆ ಗೈರು ಹಾಜರಾಗಿದ್ದರಿಂದ ಈ ಎಲ್ಲಾ ಪ್ರಕ್ರಿಯೆಗೆ ಕಾರಣರಾಗಿದ್ದ ಶಾಸಕರ ಆಪ್ತರು ಆಗಿದ್ದ ಎನ್. ರಾಜೇಂದ್ರ ಪ್ರಸಾದ್ ಇವರಿಗೆ ಮುಖಬಂಗವಾಗಿದೆ.
ಪ್ರಸ್ತುತ ಅಧ್ಯಕ್ಷ ಉಪಾಧ್ಯಕ್ಷರಾಗಿರುವ ಎಸ್.ಸಿ. ರಮೇಶ್ ಹಾಗೂ ಜಿ.ಕೆ. ರಾಜಣ್ಣಈ ಇಬ್ಬರನ್ನು ಮುಂದುವರಿಸಲು ಒಟ್ಟು 7 ಮಂದಿ ನಿರ್ದೇಶಕರುಗಳು ಇವರಿಗೆ ಬೆಂಬಲಿ ನೀಡಿರುತ್ತಾರೆ. ಈ 7 ಮಂದಿ ಪೈಕಿ ಬಿ.ಜೆ.ಪಿ. ಪಕ್ಷದ ನಾಮಿನಿ ನಿರ್ದೇಶಶಿತ ಸದಸ್ಯ ಕೆ.ಎನ್. ಶ್ರೀನಿವಾಸರೆಡ್ಡಿ ಇವರು ಬೆಂಬಲ ವ್ಯಕ್ತಪಡಿಸಿರುತ್ತಾರೆ. ಮುಂದುವರಿದು ಮಾತನಾಡಿದ ಅಧ್ಯಕ್ಷ ರಮೇಶ್ ಬಾಬು. ಈ ಎಲ್ಲಾಬೆಳವಣಿಗೆಗೆ ಕಾರಣ, ಅಧಿಕಾರ ವ್ಯಾಮೋಹ, ಹಿಂದೆ ಅಧಿಕಾರ ನಡೆಸಿದ ರಾಜೇಂದ್ರಪ್ರಸಾದ್, ಬೇಕಾದಷ್ಟು ವಿವಿಧ ಮೂಲಗಳಿಂದ ಶೇಕಡಾವಾರು ಹಣವನ್ನು ಗುಳುಂ ಮಾಡಿದ್ದು, ನನ್ನ ವಸ್ತುನಿಷ್ಟೆ ಅಧಿಕಾರಕ್ಕೆ ಧಕ್ಕೆ ತರಬೇಕೆಂಬ ದುರಾಸೆಯಿಂದ ಸ್ವ ಪಕ್ಷದಲ್ಲಿದ್ದುಕೊಂಡು ನಮಗೆ ದ್ರೋಹ ಮಾಡಲು ಮುಂದಾಗಿದ್ದ ಇವರಿಗೆ, ಇವರು ಯಾರನ್ನು ನಂಬಿದ್ದರೋ ಅವರೇ ತಕ್ಕ ಪಾಠವನ್ನು ಕಲಿಸಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ನಿರ್ದೇಶಕರುಗಳೂ ಕೃತಜ್ನತೆಗಳನ್ನು ಸಲ್ಲಿಸಿ ಶಾಸಕ ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದಿಂದ ಮಾರುಕಟ್ಟೆ ಅಭಿವೃದ್ದಿಗೆ ಶ್ರಮಿಸಿ ರೈತರ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದರು. ಇದೆ ಸಮಯದಲ್ಲಿ ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಎಂ. ಶ್ರೀನಿವಾಸನ್ ಮಾತನಾಡಿ ಅವಿಶ್ವಾಸ ನಿರ್ಣಯ ಸಭೆಗೆ ಪ್ರೇರೇಪಿಸಿದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ರಾಜೇಂದ್ರ ಪ್ರಸಾದ್ ಇವ್ಬರ ಘನತೆಗೆ ತಕ್ಕದ್ದಲ್ಲ,ಇವರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ಸಂದರ್ಭದಲ್ಲಿ ಕೃಷಿ ಮಾರಾಟ ಇಲಾಖೆ ಜಂಟಿ ನಿರ್ದೇಶಕರಾದ ರಾಜಣ್ಣ, ಕಾರ್ಯದರ್ಶಿ ಹಕೀಮ್ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ನಿರ್ದೇಶಕರುಗಳಾದ ಶ್ಯಾಮಲ ಗೋಪಾಲರೆಡ್ಡಿ, ಯೋಗೇಂದ್ರ ಗೌಡ, ಸಿ. ಪೆದ್ದರೆಡ್ಡಿ, ಟೈಲರ್ ಕೆ. ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ರೈತ ಮುಖಂಡರಾದ ಬೈರೆಡ್ಡಿ, ಸಿ.ವಿ. ಪ್ರಭಾಕರಗೌಡ, ಜಾಮಚೆಟ್ಲು ಶ್ರೀನಿವಾಸ್, ಮುತ್ತಕಪಲ್ಲಿ ಶ್ರೀನಾಥ್, ವೆಂಕಟಾದ್ರಿ ಮತ್ತಿತರರು ಹಾಜರಿದ್ದರು.